ಸಿಎಂ ಸಿದ್ದರಾಮಯ್ಯ ಮನವೊಲಿಕೆಗೂ ಬಗ್ಗದ ಬಂಡಾಯ ಅಭ್ಯರ್ಥಿ; ಸಿದ್ದು ಭೇಟಿ ಬಳಿಕ ಉಲ್ಟಾ ಹೊಡೆದ ಖಾದ್ರಿ!

ಸಿಎಂ ಮನವೊಲಿಕೆಗೆ ಬಗ್ಗದ ಬಂಡಾಯ ಅಭ್ಯರ್ಥಿ; ಸಿದ್ದು ಭೇಟಿ ಬಳಿಕ ಉಲ್ಟಾ ಹೊಡೆದ ಖಾದ್ರಿ!

ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅಖಾಡ ರಂಗೇರಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಿನ್ನೆ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದರೊಂದಿಗೆ ಪ್ರಚಾರ ಆರಂಭಿಸಿವೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ (Shiggaon) ಕಾಂಗ್ರೆಸ್ (Congress) ವಿರುದ್ಧ ಬಂಡೆದ್ದ ಅಜ್ಜಂಪೀರ್ ಖಾದ್ರಿ ಕೊನೆ ಗಳಿಗೆಯಲ್ಲಿ ನಿನ್ನೆ ನಾಮಪತ್ರ ಸಲ್ಲಿಸಿದ್ದರು.

ಅವರನ್ನು ಮನವೊಲಿಸುವಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿತ್ತು ಆದರೆ ಇದೀಗ ಖಾದ್ರಿ ಉಲ್ಟಾ ಹೊಡೆದಿದ್ದಾರೆ.

ಸಿಎಂ ಮಾತಿಗೆ ಒಪ್ಪಿದ್ದ ಖಾದ್ರಿ!

ಸಿಎಂ ಭೇಟಿ ವೇಳೆ ನಾಮಪತ್ರ ವಾಪಸ್ ಪಡೆಯುವಂತೆ ಖಾದ್ರಿಗೆ ಸಿದ್ದರಾಮಯ್ಯ ಸೂಚಿಸಿದ್ದರು. ಆಗ ಸಿಎಂ ಸಿದ್ದರಾಮಯ್ಯ ಮಾತಿಗೆ ಒಪ್ಪಿ ಬಂದು ಆ ನಂತರ ಉಲ್ಟಾ ಹೊಡೆದಿದ್ದಾರೆ. ಪಠಾಣ್ ರನ್ನ ಕಣದಿಂದ ಹಿಂದೆ ಸರಿಸಿ ನನಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು ಆದರೆ, ಖಾದ್ರಿ ಮಾತಿಗೆ ಒಪ್ಪದ ಸಿಎಂ ಸಿದ್ದರಾಮಯ್ಯ ಒಪ್ಪಿರಲಿಲ್ಲ. ಹಾಗಾಗಿ ಸಿಎಂ ಮಾತಿಗೆ ಒಪ್ಪಿಗೆ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಹೇಳಿ ಅಲ್ಲಿಂದ ಹೊರ ಬಂದಿದ್ದರು.

ಕ್ಷೇತ್ರದ ಜನರ ಅಭಿಪ್ರಾಯ ಕೇಳಿ ತೀರ್ಮಾನ; ಉಲ್ಟಾ ಹೊಡೆದ ಖಾದ್ರಿ

ಇದೀಗ ಸಭೆಯಿಂದ ಹೊರಬಂದ ಬಳಿಕ ಖಾದ್ರಿ ಅವರು ಮಾತನಾಡಿದ್ದು, ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಒಂದು ಸಾರಿ ಆಯ್ತು ಎಂದೆ ಆ ನಂತರ ನೋಡೋಣ ಎಂದಷ್ಟೇ ಬಂದೆ, ಆಗ ಗರಂ ಆದ ಸಿದ್ದರಾಮಯ್ಯ ಅವರು ಭುಜ ತಟ್ಟಿ ನಾಮಪತ್ರ ವಾಪಸ್ ತೆಗೆದುಕೊಳ್ಳಪ್ಪ ಎಂದು ಹೇಳಿದ್ದಾರೆ. ನಾನು ಕ್ಷೇತ್ರದ ಜನರ ಅಭಿಪ್ರಾಯ ಕೇಳಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಖಾದ್ರಿ ಹೇಳಿದ್ದಾರೆ.

ಬೆಂಬಲಿಗರು ಹೇಳಿದ್ದೇನು?

ಅಜ್ಜಂಪೀರ್ ಖಾದ್ರಿ ಅವರು ಸದ್ಯ ಮೊಬೈಲ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇತ್ತ ಶಿಗ್ಗಾವಿಯಲ್ಲಿ ನಮಾತನಾಡಿರುವ ಖಾದ್ರಿ ಬೆಂಬಲಿಗರು, ನಮ್ಮ ನಾಯಕರು ನಾಮಪತ್ರ ವಾಪಸ್ ತಗೊಳೊಲ್ಲ. ಅವರು ಸ್ಪರ್ಧೆ ಮಾಡ್ತಾರೆ, ಇದೆಲ್ಲ ಪೇಕ್ ನ್ಯೂಸ್ ಎಂದು ಖಾದ್ರಿ ಬೆಂಬಲಿಗರು ಹೇಳಿದ್ದಾರೆ.

ಕಾಂಗ್ರೆಸ್‌ಗೆ ಮತ್ತೆ ಬಂಡಾಯ ಭೀತಿ!

ಶಿಗ್ಗಾವಿಯಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ನಿರ್ಣಾಯಕ ಪಾತ್ರವಹಿಸುವುದರಿಂದ ಕಾಂಗ್ರೆಸ್‌ನ ಸಾಂಪ್ರದಾಯಕ ಮತಗಳು ಬಂಡಾಯ ಅಭ್ಯರ್ಥಿಯಿಂದ ಹಂಚಿಹೋದರೆ ಕಾಂಗ್ರೆಸ್ ಸೋಲು ಖಚಿತ ಎನ್ನುವಂತಾಗಿದೆ. ಹಾಗಾಗಿ ಸಚಿವ ಜಮ್ಮೀರ್ ಅಹಮದ್ ಖಾನ್ ಅವರು ಇಂದು ಕಾವೇರಿ ನಿವಾಸಕ್ಕೆ ಖಾದ್ರಿ ಅವರ ಮನವೊಲಿಸಲು ಸಿಎಂ ಸಿದ್ದರಾಮಯ್ಯ ಅವರು ಬಳಿ ಕರೆತಂದಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಖಾದ್ರಿ ಅವರನ್ನು ಸಮಾಧಾನಪಡಿಸಿ ನಾಮಪತ್ರ ವಾಪಸ್ ಪಡೆಯಲು ಸೂಚನೆ ನೀಡಿದ್ದರು. ಆಗ ಸಿಎಂ ಮಾತಿಗೆ ಖಾದ್ರಿ ಅವರು ಒಪ್ಪಿಗೆ ಸೂಚಿಸಿದ್ದರು.

ಸಿಎಂ ಎದುರು ಕಣದಿಂದ ಹಿಂದೆ ಸರಿಯಲು ಒಪ್ಪಿದ್ದ ಖಾದ್ರಿ

ಬಂಡಾಯ ಅಭ್ಯರ್ಥಿ ಖಾದ್ರಿ ಅವರನ್ನು ಮನವೊಲಿಸಲು ಮುಂದಾದ ಅಲ್ಪಸಂಖ್ಯಾತ ಸಚಿವರುಗಳಾದ ರಹೀಂ ಖಾನ್, ಜಮ್ಮೀರ್ ಅಹಮದ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಅವರು ನಿಮ್ಮ ಜೊತೆ ನಾವು ಇದ್ದೇವೆ ಎಂದು ಖಾದ್ರಿ ಅವರಿಗೆ ಭರವಸೆ ನೀಡಿದ್ದರು. ಸಮುದಾಯದ ನಾಯಕರ ಮಾತಿನ‌ ಬಳಿಕ ಅಂತಿಮವಾಗಿ ಸಿಎಂ ಜೊತೆ ಮಾತುಕತೆ ನಡೆಸಲಾಯಿತು. ಈ ವೇಳೆ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹಮದ್ ಖಾನ್ ರನ್ನು ಬೆಂಬಲಿಸೋದಾಗಿ ಖಾದ್ರಿ ಒಪ್ಪಿಕೊಂಡಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿಯೂ ಖಾದ್ರಿ ತಿಳಿಸಿದ್ದಾರೆ.

ಓಡೋರಿ ಬಂದು ನಾಮಪತ್ರ ಸಲ್ಲಿಸಿದ್ದ ಖಾದ್ರಿ

ಕೊನೇ ಕ್ಷಣದಲ್ಲಿ ಶಿಗ್ಗಾವಿ ತಹಶೀಲ್ದಾರ್ ಕಚೇರಿಗೆ ಓಡೋಡಿ ಬಂದ ಅಜ್ಜಂಪೀರ್ ಖಾದ್ರಿ ಅವರು, ಬೈಕ್ ಮೂಲಕವೇ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಖಾದ್ರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮಾತ್ರವಲ್ಲ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದರು.

ಶಿಗ್ಗಾವಿ ಜನ ಹೊರಗಿನವರಿಗೆ ಅವಕಾಶ ಕೊಡಲ್ಲ

ನಾಮಪತ್ರ ಸಲ್ಲಿಸಿದ ಬಳಿಕ ಶಿಗ್ಗಾವಿ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ಮಾತನಾಡಿದ ಖಾದ್ರಿ ಅವರು, ಬಿಜೆಪಿ ಅಭ್ಯರ್ಥಿ ಹುಬ್ಬಳ್ಳಿಯವ, ಕಾಂಗ್ರೆಸ್ ಅಭ್ಯರ್ಥಿ ಹಾನಗಲ್‌ನವನು, ಹೀಗಾಗಿ ನನಗೆ ಹೊರಗಿವರೆ ಟಾರ್ಗೆಟ್. ಬಿಜೆಪಿ ಸೋಲಿಸೋದು ಒಂದೇ ನನ್ನ ಗುರಿ ಈ ತಾಲ್ಲೂಕಿನ ಮಣ್ಣಲ್ಲಿ ಹುಟ್ಟಿ ಜನರ ಸೇವೆ ಮಾಡಿದ್ದೇನೆ, ಬಡವರ ಸೇವೆ ಮಾಡಿದ್ದೇನೆ, ನಾನು ತಾಲ್ಲೂಕಿನ ಮಗ. ಹೊರಗಿನವರಿಗೆ ಯಾವುದೆ ಕಾರಣಕ್ಕೂ ಅವಕಾಶ ಕೊಡಲ್ಲಾ, ಯಾರು ನನ್ನ ಮನವಲಿಕೆ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

Leave a Reply

Your email address will not be published. Required fields are marked *