ಮಾದಕ ವಸ್ತುಗಳ ನಿಗ್ರಹದ ಬಗ್ಗೆ ಗೃಹಸಚಿವರಿಂದ ಸಭೆ :
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾದಕ ವಸ್ತುಗಳ ನಿಗ್ರಹದ ಬಗ್ಗೆ ಸಭೆ ನಡೆಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.ಮಾದಕ ವಸ್ತುಗಳ ಮಾಫಿಯಾ ವಿರುದ್ಧ ಕಾರ್ಯಕ್ರಮ ಯೋಜನೆ ರೂಪಿಸುವುದು, ಬಗರ್ ಹುಕುಂ ಜಾಗದಲ್ಲಿ ಗಾಂಜಾ ಬೆಳೆಸುವುದನ್ನ ನಿಯಂತ್ರಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮಾದಕ ವಸ್ತುಗಳ ದಾಳಿ ವಿಚಾರವನ್ನ ಪೊಲೀಸ್ ಇಲಾಖೆಯಿಂದಲೇ ಲೀಕ್ ಆಗುವುದರಿಂದ ಮಾದಕ ವಸ್ತು ಮಾರುವವನು ಎಚ್ಚರಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಭೆಯಲ್ಲಿ ಕೇಳಿಬಂದಿತು. ಈ ಬಗ್ಗೆ ಪ್ರತಿಕ್ರಿಯಿಸಿದ…