ಜಿಲ್ಲಾ ಸುದ್ದಿ:
ಸಾಗರ : ಕಾಲೇಜು ಆಹಾರ ಮೇಳದಲ್ಲಿ ಮಾಂಸಹಾರ ತಂದಿದ್ದ ವಿದ್ಯಾರ್ಥಿಗಳಿಗೆ ಸ್ಪರ್ಧೆಗೆ ಅವಕಾಶ ನಿರಾಕರಣೆ|sagar news
ಸಾಗರ : ಇಂದಿರಾಗಾಂಧಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಆಹಾರಮೇಳದಲ್ಲಿ ಮಾಂಸಾಹಾರ ಸಿದ್ಧಪಡಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡದಿರುವುದು ವಾಗ್ವಾದಕ್ಕೆ ಕಾರಣವಾಗಿದೆ. ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಕಲಾ ವಿಭಾಗದಲ್ಲಿ ಆಹಾರ ಮೇಳ ಆಯೋಜಿಸಲಾಗಿತ್ತು. ಇಬ್ಬರು ವಿದ್ಯಾರ್ಥಿನಿಯರು ಮಲೆನಾಡಿನ ಸಾಂಪ್ರದಾಯಿಕ ಮಾಂಸಾಹಾರವಾದ ಕೋಳಿ ಕಜ್ಜಾಯ, ರೊಟ್ಟಿ ಸೇರಿದಂತೆ ಕೆಲವು ತಿನಿಸುಗಳನ್ನು ತಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲವು ಉಪನ್ಯಾಸಕರು, ‘ಮೇಳದಲ್ಲಿ ಮಾಂಸಾಹಾರಕ್ಕೆ ಅವಕಾಶವಿಲ್ಲ’ ಎಂದು ಹೇಳಿ ತಿನಿಸುಗಳ ಪ್ರದರ್ಶನಕ್ಕೆ ನಿರ್ಬಂಧ…
ಆರಗ ಜ್ಞಾನೇಂದ್ರರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯ|DSS
ಖರ್ಗೆಯನ್ನು ಅವಮಾನಿಸಿದ ಆರಗ ಜ್ಞಾನೇಂದ್ರರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದಲಿತ ಸಂಘರ್ಷ ಸಮಿತಿ ಒತ್ತಾಯ ಹೊಸನಗರ : ಮಲ್ಲಿಕಾರ್ಜುನ ಖರ್ಗೆಯವರನ್ನು ಅವಮಾನಿಸಿದ ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರರವರನ್ನು ತಕ್ಷಣ ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿ ಹೊಸನಗರ ಶಾಖೆ ಜಿಲ್ಲಾ ಸಂಚಾಲಕ ಕೆ.ವಿ.ನಾಗರಾಜ್ ಅರಳಸುರಳಿಯವರ ನೇತೃತ್ವದಲ್ಲಿ ಹೊಸನಗರ ಪ್ರಭಾರ ತಹಶೀಲ್ದಾರ್ ರಾಕೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಮಾತನಾಡಿದ ನಾಗರಾಜ್, ಆರಗ ಜ್ಞಾನೇಂದ್ರರವರು ಸಾರ್ವಜನಿಕ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನೂ ವಿರೋಧಿಸಿ…
ರೈತ ಸಂಘದ ಮುಖಂಡ ಟೈಲರ್ ಮಂಜಪ್ಪ ನಿಧನ – ಅಂತಿಮ ದರ್ಶನ ಪಡೆದ ಶಾಸಕ ಬೇಳೂರು ಗೋಪಾಲಕೃಷ್ಣ|beluru
ರೈತ ಸಂಘದ ಮುಖಂಡ ಟೈಲರ್ ಮಂಜಪ್ಪ ನಿಧನ – ಅಂತಿಮ ದರ್ಶನ ಪಡೆದ ಶಾಸಕ ಬೇಳೂರು ಗೋಪಾಲಕೃಷ್ಣ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಆರ್ ಎನ್ ಮಂಜಪ್ಪ ರವರ ನಿಧನದ ಹಿನ್ನಲೆ ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು. ಪಟ್ಟಣದ ಮೃತರ ಸ್ವಗೃಹಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು ನಂತರ ಮಾತನಾಡಿ ರೈತ ಚಳವಳಿಗಳ ನಾಯಕ ಹಿರಿಯ ವ್ಯಕ್ತಿತ್ವವಾದ ಆರ್ ಎನ್ ಮಂಜಪ್ಪ ನವರು ನಮ್ಮನ್ನು ಅಗಲಿರುವುದು ಅತೀವ…
ರಿಪ್ಪನ್‌ಪೇಟೆ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಚುನಾವಣೆ – ಎಂ ಎಂ ಪರಮೇಶ್ ತಂಡಕ್ಕೆ ಭರ್ಜರಿ ಜಯ|Rpet news
ರಿಪ್ಪನ್‌ಪೇಟೆ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಚುನಾವಣೆ – ಎಂ ಎಂ ಪರಮೇಶ್ ತಂಡಕ್ಕೆ ಭರ್ಜರಿ ಜಯ. ರಿಪ್ಪನ್ ಪೇಟೆ: ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಎಂಎಂ ಪರಮೇಶ್ ತಂಡಕ್ಕೆ ಭರ್ಜರಿ ಜಯ ಲಭಿಸಿದೆ. ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 12 ಜನ ಸದಸ್ಯರ ಆಡಳಿತ ಮಂಡಳಿ ಇದ್ದು, ಇದರಲ್ಲಿ ಏಳು ಜನ ಸದಸ್ಯರುಗಳು…
ಶಾಲೆ ಸಮಯಕ್ಕೆ ಬಸ್ ಬಿಡಿಸಿ ಸರ್: ಸಚಿವ ಮಧು ಬಂಗಾರಪ್ಪ ಬಳಿ ಮಕ್ಕಳ ಮನವಿ|madhu bangarappa
ಶಾಲೆ ಸಮಯಕ್ಕೆ ಬಸ್ ಬಿಡಿಸಿ ಸರ್: ಸಚಿವ ಮಧು ಬಂಗಾರಪ್ಪ ಬಳಿ ಮಕ್ಕಳ ಮನವಿ ಸೊರಬ: ಶಾಲಾ ಅವಧಿಗೆ ಸರಿಯಾರಿ ತಲುಪಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಶಿಕ್ಷಣ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ತಲಗಡ್ಡೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿದ ವೇಳೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದರು. ತಲಗಡ್ಡೆ ಗ್ರಾಮದಿಂದ ಜಡೆ ಗ್ರಾಮಕ್ಕೆ ಶಾಲಾ ಅವಧಿಗೆ ತೆರಳು ಬಸ್ ವ್ಯವಸ್ಥೆ ಇಲ್ಲದೇ ಇಲ್ಲದೇ…
ಸರ್ವೇ ಇಲಾಖೆಗೆ ದಿಢೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ|araga
ತೀರ್ಥಹಳ್ಳಿ ತಾಲೂಕಿನಲ್ಲಿ ಇತ್ತೀಚೆಗೆ ನಿರಂತರವಾಗಿ ರೈತರು ಮತ್ತು ಸಾರ್ವಜನಿಕರಿಂದ ತೀರ್ಥಹಳ್ಳಿಯ ಸರ್ವೇ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ಅನೇಕ ಬಾರಿ ದೂರುಗಳು ಕೇಳಿ ಬಂದ ಮೇರೆಗೆ ಶನಿವಾರ ಸಂಜೆ ಸರ್ವೇ ಇಲಾಖೆಗೆ ಭೇಟಿ ನೀಡಿದ ಶಾಸಕರಾದ ಆರಗ ಜ್ಞಾನೇಂದ್ರ ರೈತರು ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ವೇಳೆ ಅಕ್ರಮ ಭೂ ಮಂಜೂರಾತಿಗೆ ಸರ್ವೇ ಕಚೇರಿಯಲ್ಲಿ ಸಹಕರಿಸಿದ್ದಾರೆ ಎನ್ನುವ ದೂರು ಸ್ಥಳದಲ್ಲಿ ಕೇಳಿ ಬಂದ ಮೇರೆಗೆ ದಾಖಲೆಗಳೊಂದಿಗೆ ಸರ್ವೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ವೇ ಇಲಾಖೆಯ ಕಮಿಷನ್…
ರಿಪ್ಪನ್‌ಪೇಟೆ : ಜುಮ್ಮಾ ಮಸೀದಿ ಮುಂಭಾಗದಲ್ಲಿ ಬಾರ್ ತೆರೆಯಲು ಯತ್ನ – ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತಾವರಣ|Ripponpet news
ರಿಪ್ಪನ್‌ಪೇಟೆ : ಜುಮ್ಮಾ ಮಸೀದಿ ಮುಂಭಾಗದಲ್ಲಿ ಬಾರ್ ತೆರೆಯಲು ಯತ್ನ – ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತಾವರಣ ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ ಲಾಡ್ಜ್ ವೊಂದರಲ್ಲಿ ವಿರೋಧದ ನಡುವೆಯೂ ಬಾರ ತೆರೆಯಲು ಹೊರಟಿರುವ ಮಧ್ಯದ ಅಂಗಡಿಗೆ ಸಾರ್ವಜನಿಕರಿಂದ ಬಾರಿ ವಿರೋಧ ವ್ಯಕ್ತವಾಗಿದೆ.ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತವರಣ ನಿರ್ಮಾಣವಾಗಿದೆ. ಪಟ್ಟಣದ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ ಕಟ್ಟಡ ಒಂದರಲ್ಲಿ ನೂತನವಾಗಿ ಸಿ ಎಲ್ 7 ಮದ್ಯದ ಅಂಗಡಿ ತೆರೆಯುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ…
ಗಾಯಗೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ಶಸ್ತ್ರ ಚಿಕಿತ್ಸೆ
ತೀರ್ಥಹಳ್ಳಿ : ಪ್ರಾಣಿ, ಪಕ್ಷಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ಕಷ್ಟಕರವಾದ ಕೆಲಸ. ಆದರೆ ತೀರ್ಥಹಳ್ಳಿಯ ಕಾಳಿಂಗ ಫೌಂಡೇಷನ್ ಸದಸ್ಯರು ಗಾಯಗೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಆಪರೇಷನ್ ನಡೆಸಿ ಆರೋಗ್ಯ ಸುಧಾರಿಸಿದ ಮೇಲೆ ಕಾಡಿಗೆ ಬಿಟ್ಟಿದ್ದಾರೆ. ತೀರ್ಥಹಳ್ಳಿಯ ಕಮ್ಮರಡಿಯ ಮನೆಯೊಂದರ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಮಾಹಿತಿ ತಿಳಿಯುತ್ತಿದಂತೆ ಕಾಳಿಂಗ ಫೌಂಡೇಶನ್ ಸದಸ್ಯರು ಭೇಟಿ ನೀಡಿದ್ದರು. ಆಗ ಕಾಳಿಂಗ ಸರ್ಪ ಗಾಯಗೊಂಡಿರುವ ವಿಚಾರ ಗೊತ್ತಾಗಿದೆ. ನಂತರ ಹಾವನ್ನು ಹಿಡಿದು ಮೇಗರವಳ್ಳಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ…
ಮಲ್ಲಿಕಾರ್ಜುನ ಖರ್ಗೆಯವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ – ಆರಗ ಜ್ಞಾನೇಂದ್ರ |araga
ಮಲ್ಲಿಕಾರ್ಜುನ ಖರ್ಗೆಯವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ – ಆರಗ ಜ್ಞಾನೇಂದ್ರ ತೀರ್ಥಹಳ್ಳಿ : ಅರಣ್ಯ ಸಚಿವರ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಆಡಿದಂತಹ ಕೆಲವು ಮಾತುಗಳನ್ನು ಆಡದೇ ಇರುವ ಮಾತುಗಳನ್ನು ಸೇರಿಸಿ ರಾಜಕಾರಣಕ್ಕೆ ಬಳಸಿ ರಾಜ್ಯಾದ್ಯಂತ ಸುದ್ದಿಯಾಗಿದೆ. ಅದರ ಬಗ್ಗೆ ಯಾರಿಗಾದರೂ ಮನಸ್ಸಿಗೆ ಕಸಿವಿಸಿ ಆಗಿದ್ದರೆ ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಕ್ಷಮೆಯಾಚನೆ ಮಾಡುತ್ತೇನೆ ಎಂದು ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನೆಡೆಸಿ…
ಧರ್ಮಸ್ಥಳದ ಹೆಗ್ಗಡೆಯವರ ತೇಜೋವಧೆ ಖಂಡನೀಯ – ಹೊಂಬುಜ ಶ್ರೀ|hombuja
ಧರ್ಮಸ್ಥಳದ ಹೆಗ್ಗಡೆಯವರ ತೇಜೋವಧೆ ಖಂಡನೀಯ ಹೊಂಬುಜ : 2012ರಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವರು ಬಹಿರಂಗವಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ತಿಳಿಸಿದ್ದಾರೆ. ಕಾನೂನಿನ ಮೂಲಕ ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಿರುವ ಸಂತ್ರಸ್ಥರು ಕಾನೂನಿನ ಮೇಲೆ ನಂಬಿಕೆಯಿಟ್ಟು ತೀರ್ಮಾನ ಬರುವವರೆಗೆ ತಾಳ್ಮೆಯಿಂದ ಇರಬೇಕು. ಸಂತ್ರಸ್ಥರು ನ್ಯಾಯಾಂಗ ತನಿಖೆಗೆ…