Headlines

ಶ್ರಮ ಪಟ್ಟು ಓದಿದರೆ ಸಿ ಎಸ್ (CS) ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ – ಸಿ ಎಸ್ ಸಂತೋಷ್

ಶ್ರಮ ಪಟ್ಟು ಓದಿದರೆ CS ಪರೀಕ್ಷೆಯಲ್ಲಿ ಯಶಸ್ಸು ಖಚಿತ
ರಿಪ್ಪನ್‌ಪೇಟೆ : ಶ್ರಮಪಟ್ಟು ಓದಿದರೆ ಸಿಎಸ್ (ಕಂಪನಿ ಸೆಕ್ರೆಟರಿ) ಪರೀಕ್ಷೆಯಲ್ಲಿ ಯಶಸ್ಸು ಖಚಿತವಾಗಿದ್ದು ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಮಂಗಳೂರಿನ ಹೆಸರಾಂತ ಕಂಪನಿಯ ಕಾರ್ಯದರ್ಶಿಗಳಾದ ಸಿ.ಎಸ್ ಸಂತೋಷ್ ಹೇಳಿದರು.

ಅವರು ಇಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ & ನಿರ್ವಹಣಾ ಶಾಸ್ತ್ರ ವಿಭಾಗ ಮತ್ತು ಕಾಲೇಜಿನ ಪ್ಲೇಸ್ಮೆಂಟ್ ವಿಭಾಗದ ಸಹಯೋಗದಲ್ಲಿ ನಡೆದ  ಸಿ.ಎಸ್ (ಕಂಪನಿ ಸೆಕ್ರೆಟರಿ) ಕೋರ್ಸಿನ ಬಗ್ಗೆ ನಡೆದ ಒಂದು ದಿನದ  ವಿಶೇಷ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿ ಭಾರತದಲ್ಲಿ 10 ಕೋಟಿಗಿಂತ ಹೆಚ್ಚಿನ ಹಂಚಿಕೆಯಾದ ಬಂಡವಾಳ ಹೊಂದಿರುವ ಸುಮಾರು 2 ಲಕ್ಷಕ್ಕೂ ಹೆಚ್ಚು ಕಂಪನಿಗಳಿದ್ದು, ಈ ಎಲ್ಲಾ ಕಂಪನಿಗಳಿಗೂ ಕಂಪನಿ ಕಾಯ್ದೆ 2013ರ ಪ್ರಕಾರ ಸಿ.ಎಸ್ ಅರ್ಹತೆ ಪಡೆದ ಕಂಪನಿ ಕಾರ್ಯದರ್ಶಿಗಳನ್ನು ನೇಮಿಸಬೇಕಾಗಿದೆ.ಭಾರತದಲ್ಲಿ ಪ್ರಸ್ತುತ 70,000 ಸಿ.ಎಸ್ ಅರ್ಹತೆ ಪಡೆದವರಿರುವುದರಿಂದ ಮುಂದಿನ ದಿನಗಳಲ್ಲಿ ಸಿಎಸ್ ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ ಎಂದರು.

ಅತಿ ಕಡಿಮೆ ಖರ್ಚಿನಲ್ಲಿ ಸಿ.ಎಸ್ ಅರ್ಹತೆಯನ್ನು ಪಡೆಯಬಹುದೆಂದು ವಿವರಿಸಿದರು. ಶ್ರಮ ಪಟ್ಟು ಏಕಾಗ್ರತೆಯಿಂದ ಓದಿದರೆ CS ಅರ್ಹತೆ ಪಡೆಯುವುದು ಅತ್ಯಂತ ಸುಲಭವೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ಚಂದ್ರಶೇಖರ್ ಟಿ ರವರು ವಹಿಸಿದ್ದರು.  

ಈ ಸಂಧರ್ಭದಲ್ಲಿ ಕಾಲೇಜಿನ ನಿರ್ವಹಣಾ ವಿಭಾಗದ ಮುಖ್ಯಸ್ಥರು ಹಾಗೂ ಪ್ಲೇಸ್ಮೆಂಟ್ ಸಹಾಯ ಸೆಲ್ ನ ಸಂಯೋಜಕರಾದ ಡಾ. ರವೀಶ್ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ದೇವರಾಜ್, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರರಾದ ಡಾ.ರಾಕೇಶ್ , ಮಂಗಳೂರಿನ ಸಿ.ಎಸ್ ಕಛೇರಿಯ ಉಸ್ತುವಾರಿ ಅಧಿಕಾರಿ ಸಿ.ಎಸ್. ಶಂಕರ್ ಮತ್ತು ವಿಭಾಗದ ಎಲ್ಲಾ ಬೋಧಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯರಾದ ಭೂಮಿಕ . ಎಸ್.ಆರ್, ಮತ್ತು ಭೂಮಿಕ ಬಿ. ಪ್ರಾರ್ಥನೆ ಮಾಡಿದರು.

Leave a Reply

Your email address will not be published. Required fields are marked *