ಜಿಲ್ಲಾ ಸುದ್ದಿ:
Hosanagara | ಪೊಲೀಸ್ ಠಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
Hosanagara | ಪೊಲೀಸ್ ಠಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹೊಸನಗರ : ಪ್ರತಿಯೊಬ್ಬರೂ ನಾಡು, ನುಡಿಗೆ ಅರ್ಥ ಕಲ್ಪಿಸಿ ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಪಿಎಸ್‌ಐ ಶಿವಾನಂದ ಕೋಳಿ ತಿಳಿಸಿದರು. ಕರ್ನಾಟಕ ರಾಜ್ಯದ ಏಕೀಕರಣ ಹಿನ್ನಲೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೆತ್ತ ತಾಯಿಗೆ ಸಮನಾದ ನಾಡು, ನುಡಿ, ಭಾಷೆಯ ವಿಷಯದಲ್ಲಿ ನಾಡಿನ ಸಮಸ್ತ ಜನತೆ ಒಗ್ಗೂಡಿ, ಪ್ರಾಮಾಣಿಕವಾಗಿ…
Ripponpete | ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು – ಶಾಸಕ ಬೇಳೂರು
ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು – ಶಾಸಕ ಬೇಳೂರು ರಿಪ್ಪನ್‌ಪೇಟೆ – ಸಹಕಾರಿ ಕ್ಷೇತ್ರವನ್ನು ನಾವು ಇಂದು ಉಳಿಸಿ ಬೆಳೆಸಬೇಕಾಗಿದೆ. ಹಳೆ ನಂಬರ್ ಕ್ಷೇತ್ರದ ರೈತರ ಪರವಾಗಿ ಸದಾ ನಾನು ನಿಮ್ಮೊಂದಿಗೆ ಧ್ವನಿಯಾಗಿರುತ್ತೇನೆ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಬೆರಸದೆ ಎತ್ತರಕ್ಕೆ ಬೆಳೆಸುವಂತೆ ಆಗಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಮಹಾಮಂಡಳ ನಿಯಮಿತ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಜಿಲ್ಲಾ ಡಿಸಿಸಿ ಬ್ಯಾಂಕ್, ಸಹಕಾರ ಹಾಲು…
Ripponpet | ಗ್ರಾಮೀಣ ಯುವಕರಲ್ಲಿ ಕ್ರೀಡಾ ಚಟುವಟಿಕೆಯಿಂದ ಕ್ರೀಯಾಶೀಲ ಬದುಕು – ಶಾಸಕ ಬೇಳೂರು
ಗ್ರಾಮೀಣ ಯುವಕರಲ್ಲಿ ಕ್ರೀಡಾ ಚಟುವಟಿಕೆಯಿಂದ ಕ್ರೀಯಾಶೀಲ ಬದುಕು’’ ರಿಪ್ಪನ್‌ಪೇಟೆ;-ದೈನಂದಿನ ಕ್ರೀಡಾ ಚಟುವಟಿಕೆಯಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ತೊಡಗಿಸಿಕೊಂಡಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಕ್ರೀಯಾಶೀಲರಾಗಿರಬಹುದು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಛತ್ರಪತಿ ಶಿವಾಜಿ ಯುವಕ ಸಂಘದವರು ಆಯೋಜಿಸಲಾದ ಕ್ರಿಕೇಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಕ್ರಿಕೇಟ್ ಬ್ಯಾಟಿಂಗ್ ಮಾಡಿ ನಂತರ ಮಾತನಾಡಿ ಗ್ರಾಮಸ್ಥರು ಒತ್ತಡದ ಬದುಕಿನಲ್ಲಲಿ ತಮ್ಮ ಅಲ್ಪ ಸಮಯವನ್ನು ವ್ಯಾಯಾಮ…
Ripponpet | ಶಾಸಕ ಬೇಳೂರು ಆಪ್ತನಿಗೆ ಜೀವಬೆದರಿಕೆ – ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಕೆ
ಶಾಸಕ ಬೇಳೂರು ಆಪ್ತನಿಗೆ ಜೀವಬೆದರಿಕೆ – ಎಸ್ ಪಿ ಗೆ ದೂರು ಸಲ್ಲಿಕೆ ರಿಪ್ಪನ್‌ಪೇಟೆ : ಪಟ್ಟಣದ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಆಪ್ತ ರಮೇಶ್ (ಫ್ಯಾನ್ಸಿ ರಮೇಶ್) ತಮಗೆ ಜೀವ ಬೆದರಿಕೆ ಇದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪತ್ರೀಕಾ ಹೇಳಿಕೆ ನೀಡಿರುವ ರಮೇಶ್ ಪಟ್ಟಣದ ಕೆಲವು ಖಾಸಗಿ ಲೇಔಟ್ ನಲ್ಲಿ ಕಾನೂನುಬಾಹಿರವಾಗಿ ಲೇಔಟ್ ನಿರ್ಮಾಣ ಮಾಡುತಿದ್ದಾರೆ ಎಂದು ಸಾಮಾಜಿಕ ಕಳಕಳಿಯಿಂದ ಈಗಾಗಲೇ ಲೇಔಟ್…
Hombuja| ಭೂಮಿಯ ಒಡಲಿನ ಭತ್ತ “ದಿವ್ಯ ಪ್ರಸಾದ” – ಹೊಂಬುಜಾ ಶ್ರೀಗಳು
ಭೂಮಿಯ ಒಡಲಿನ ಭತ್ತ ‘ದಿವ್ಯ ಪ್ರಸಾದ’ ರಿಪ್ಪನ್‌ಪೇಟೆ:-ಭೂಮಿಯು ಸ್ವರ್ಗ ಸಮಾನವಾಗಿದ್ದು ವ್ಯವಸಾಯದ ಮೂಲಕ ಬೆಳೆಯುವಆಹಾರಧಾನ್ಯ, ತರಕಾರಿ, ಹಣ್ಣು ಹಂಪಲು, ಹೂವು, ‘ದಿವ್ಯ ಪ್ರಸಾದ’ ಎಂಬ ಭಾವನೆ ಮೂಡಬೇಕು. ಎಂದು ಹೊಂಬುಜ ಜೈನಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ “ದೀಪಾವಳಿಯ ಹಬ್ಬದಲ್ಲಿ ಹೊಸತು ಬೆಳಸಿಕೊಂಡು ಬರುವ ಹಬ್ಬವೇ “ವರ್ಷದಡಕು’’ಯನ್ನು ಇಂದು ಜೀವನಾವಶ್ಯಕ ಆರೋಗ್ಯ ಸಂರಕ್ಷಣೆ-ಪೋಷಣೆಗಾಗಿ ಬೇಸಾಯ ವೃತ್ತಿಯಾದರೂ ಕೃಷಿ ಮೂಲವೇ ಆರ್ಥಿಕ, ಆರೋಗ್ಯ, ಅಕ್ಷರ, ಆಶ್ರಯ ಪಾಲನೆಯ ಕೇಂದ್ರವಾಗಿದೆ ಶ್ರೀಕ್ಷೇತ್ರದ ಭತ್ತದ…
ಮಳಲಿ ಮಠದಲ್ಲಿ ಲೋಕಕಲ್ಯಾಣಾರ್ಥ ಇಷ್ಟಲಿಂಗ ಕಾರ್ತಿಕ ದೀಪೋತ್ಸವ ಧರ್ಮಸಮಾರಂಭ| malali matt
ಮಳಲಿಮಠದಲ್ಲಿ ಶ್ರೀ ಗುರು ಪಟ್ಟಾಧಿಕಾರ ರಜತ ಮಹೋತ್ಸವ ರಿಪ್ಪನ್‌ಪೇಟೆ:-ಸಮೀಪದ ಮಳಲಿ ಮಠದಲ್ಲಿ ನವಂಬರ 26 ರಂದು ಸಂಜೆ 4 ಗಂಟೆಗೆ ಶ್ರೀ ಗುರುಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭವನ್ನು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯಮಹಾಸ್ವಾಮಿಜಿ ತಿಳಿಸಿದರು. ರಿಪ್ಪನ್‌ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀ ಗುರುಪಟ್ಟಾಧಿಕಾರ ರಜತ ಮಹೋತ್ಸವ ಕಾರ್ತೀಕ ದೀಪೋತ್ಸವ ಸಮಾರಂಭವನ್ನು ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು.ಸಮಾರಂಭದ ಆಧ್ಯಕ್ಷತೆಯನ್ನು ಮಳಲಿಮಠದ…
Ripponpet | ಗೋಪೂಜೆ ಹಬ್ಬದಂದು ಗೋರಕ್ಷಕನಿಗೆ ಸನ್ಮಾನ
Ripponpet | ಗೋಪೂಜೆ ಹಬ್ಬದಂದು ಗೋರಕ್ಷಕನಿಗೆ ಸನ್ಮಾನ ರಿಪ್ಪನ್‌ಪೇಟೆ : ಇಂದು ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿದಢೆಯಲ್ಲಿ ಕಡೆಗಳಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು ನೀಡಿ ವಿಶೇಷವಾಗಿ ಗೋಪೂಜೆಯನ್ನು ನೆರವೇರಿಸಲಾಯಿತು. ಇದೇ ಸಂಧರ್ಭದಲ್ಲಿ ಪಟ್ಟಣದ ಗೋರಕ್ಷಕ ದೇವರಾಜ್ ಕೆರೆಹಳ್ಳಿ ರವರ ಗೋಸೇವೆಯನ್ನು ಗುರುತಿಸಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ದೇವರಾಜ್ ಕೆರೆಹಳ್ಳಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸಿದ್ದಿವಿನಾಯಕ…
Ripponpet | ಶ್ರದ್ದಾ ಭಕ್ತಿಯಿಂದ ನೆರವೇರಿದ ಸಂಭ್ರಮದ ಗೋಪೂಜೆ
ರಿಪ್ಪನ್‌ಪೇಟೆ : ಇಂದು ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿದಢೆಯಲ್ಲಿ ಮತ್ತು ಮುಜರಾಯಿ ಇಲಾಖೆಯವರ ಅದೇಶದನ್ವಯ ಹಲವು ದೇವಸ್ಥಾನಗಳಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ಸಂಭ್ರಮಸಿದರು. ಪಟ್ಟಣದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗೋವುಗಳನ್ನು ಶೃಂಗರಿಸಿ ದೇವಸ್ಥಾನದ ಪ್ರದಾನ ಅರ್ಚಕ ವೇ.ಚಂದ್ರಶೇಖರ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಆರ್.ಈ.ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ, ಗಣೇಶ್ ಎನ್.ಕಾಮತ್, ಎನ್.ಸತೀಶ್,ಸುಧೀಂದ್ರ ಪೂಜಾರಿ,ಮಂಜಪ್ಪ, ಮೋಹನ್,ಜಯಲಕ್ಷಿ, ರಾಘವೇಂದ್ರ,ಕೆ.ಆರ್.ಭೀಮರಾಜ್‌ಗೌಡರು, ವೈ.ಜೆ.ಕೃಷ್ಣ,ರಾಘವೇಂದ್ರ ಆರ್.ಸರಸ್ವತಿ ರಾಘವೇಂದ್ರ,ಇನ್ನಿತರರು ಹಾಜರಿದ್ದರು. [ರಿಪ್ಪನ್‌ಪೇಟೆಯ ಸಮೀಪದ…
Ripponpet | ಮುಸ್ಲಿಂ ಯುವಕ ಮಾಲೀಕತ್ವದ ಅಂಗಡಿಯಲ್ಲಿ ಲಕ್ಷ್ಮಿಪೂಜೆ , ಧರ್ಮಗುರುಗಳಿಂದ ಪ್ರಾರ್ಥನೆ – ಭಾವೈಕ್ಯತೆಯ ಸಂದೇಶ ಸಾರಿದ ಯುವಕ
ಮುಸ್ಲಿಂ ಯುವಕನಿಂದ ಲಕ್ಷ್ಮಿಪೂಜೆ – ಭಾವೈಕ್ಯತೆಯ ಸಂದೇಶ ನೀಡಿದ ಯುವಕ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿ ಭಾನುವಾರ ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ಲಕ್ಷ್ಮೀ ಪೂಜೆ ನೆರೆವೇರಿಸಿರುವ ಘಟನೆ ನಡೆದಿದೆ. ಪಟ್ಟಣದ ಸಮೀಪದ ಅರಸಾಳು ಮೂಲದ ತನ್ವೀರ್ ಎಂಬ ಯುವಕನು ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿರುವ ಜೊಹರಾ ಕಾಂಪ್ಲೆಕ್ಸ್ ನಲ್ಲಿ “ತನ್ವಿ ಮೊಬೈಲ್ ವರ್ಡ್” ಎಂಬ ಅಂಗಡಿ ತೆರೆದಿದ್ದಾರೆ. ಪ್ರತೀ ವರ್ಷ ತಮ್ಮ ಅಂಗಡಿಯಲ್ಲಿ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು…
Ripponpet | ಶ್ರದ್ದಾಭಕ್ತಿಯಿಂದ ಅಭ್ಯಂಗ ಸ್ನಾನದೊಂದಿಗೆ ನರಕ ಚತುರ್ದಶಿ ಸಂಭ್ರಮಾಚರಣೆ
“ಶ್ರದ್ದಾಭಕ್ತಿಯಿಂದ ಅಭ್ಯಂಗ ಸ್ನಾನದೊಂದಿಗೆ ನರಕ ಚತುರ್ದಶಿ ಸಂಭ್ರಮಾಚರಣೆ’’ ರಿಪ್ಪನ್‌ಪೇಟೆ;- ನರಕ ಚತುರ್ದಶಿಯ ಅಂಗವಾಗಿ ಹೊಸನಗರ ತಾಲೂಕಿನ ವಿವಿಧಡೆ ಯಲ್ಲಿ ನಾಗರಿಕರು ಭಾನುವಾರ ಶ್ರದ್ಧಾಭಕ್ತಿಯಿಂದ ಅಭ್ಯಂಗ ಸ್ನಾನದೊಂದಿಗೆ ನರಕ ಚತುರ್ದಶಿಯನ್ನು ಸಂಭ್ರಮದಿಂದ ಆಚರಿಸಿದರು. ಮಹಿಳೆಯರು ಮನೆಯ ಬಳಿಯಲ್ಲಿ ತೆರೆದ ಬಾವಿಯ ಸುತ್ತ ಸಗಣಿ ನೀರಿನಿಂದ ಶುದ್ದಿಕರಿಸಿ ಮಾವಿನ ತೋರಣ ಮತ್ತು ಜೇಡಿ ಕೆಮ್ಮಣ್ಣು ರಂಗೋಲಿಗಳಿಂದ ಶೃಂಗರಿಸಿ ಮುಂಜಾನೆ ಪೂಜೆಗೆ ಅಣಿಗೊಳಿಸಿಕೊಂಡು ಮುಂಜಾವಿನಲ್ಲಿ ಮುತ್ತೈದೆಯರು ಮಣ್ಣಿನ ಕುಂಭದೊಂದಿಗೆ ಪೂಜಾ ಸಾಮಗ್ರಿಯನ್ನು ಹಿಡಿದುಕೊಂಡು ಬಂದು ಗಂಗಾಮಾತೆಯನ್ನು ಪೂಜಿಸಿ ನೈವೇದ್ಯ ಮಾಡಿ ನೀರು…