Ripponpete | ರಿಪ್ಪನ್‌ಪೇಟೆಯ ಬೃಂದಾವನ ಕ್ಯಾಂಟೀನ್ ನಲ್ಲಿ ಅಭಿಮಾನಿಗಳೊಂದಿಗೆ ಬೋಂಡಾ,ಚುರುಮುರಿ ಸವಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ರಿಪ್ಪನ್‌ಪೇಟೆ : ಇಲ್ಲಿನ ಗ್ರಾಪಂ ಮುಂಭಾಗದ ಬೃಂದಾವನ ಕ್ಯಾಂಟೀನ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಕಾರ್ಯಕರ್ತರೊಂದಿಗೆ ಬೋಂಡಾ, ಚುರುಮುರಿ ಸವಿದರು.
ಕಾರ್ಯಕ್ರಮ ನಿಮಿತ್ತ ಬೈಂದೂರಿಗೆ ತೆರಳುವಾಗ ಶಾಸಕ ಬೇಳೂರು ಗೋಪಾಲಕೃಷ್ಣರ ಆಶಯದಂತೆ ಪಟ್ಟಣದ ಬೃಂದಾವನ ಕ್ಯಾಂಟೀನ್ ಗೆ ತೆರಳಿ ಬೋಂಡಾ ಮಿರ್ಚಿ ಸವಿದ ಶಿವಣ್ಣರವರಿಗೆ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಾಥ್ ನೀಡಿದರು.
ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಕ್ಯಾಂಟೀನ್ ನಲ್ಲಿ ಕಾರ್ಯಕರ್ತರು ಅಭಿಮಾನಿಗಳೊಂದಿಗೆ ಕಾಲ ಕಳೆದ ಗೀತಾಕ್ಕ ಹಾಗೂ ಶಿವಣ್ಣ, ಈ ಸಂಧರ್ಭದಲ್ಲಿ ಅಭಿಮಾನಿಗಳು,ಕಾರ್ಯಕರ್ತರು ಟಗರು ಶಿವಣ್ಣನೊಂದಿಗೆ ಸೆಲ್ಪಿಗಾಗಿ ಮುಗಿಬಿದ್ದರು.
ಈ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಗೆಲುವು ನಿಶ್ಚಿತವೆಂದು ಭವಿಷ್ಯ ನುಡಿದ ಅವರು, ಈಗಾಗಲೇ ರಾಜ್ಯ ಸರ್ಕಾರದದ ಗ್ಯಾರಂಟಿ ಯೋಜನೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಿಂದ ಮತದಾರರು ಕಾಂಗ್ರೆಸ್ ಕಡೆ ಹಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆಂಬ ಬಗ್ಗೆ ಭಾವನಾತ್ಮಕ ಅಭಿಪ್ರಾಯ ಕಂಡು ಬರುತ್ತಿದ್ದು, ಹಸಿದವರ ಬಗ್ಗೆ ಕಾಂಗ್ರೆಸ್ ಸದಾ ಸ್ಪಂದಿಸುತ್ತಿದೆ ಆದರೆ ಅಡಳಿತದಲ್ಲಿರುವ ಕೇಂದ್ರ ಮೋದಿ ಸರ್ಕಾರದಿಂದ ನಾವು ಮೋಸ ಹೋಗಿದ್ದು ಈ ದೇಶವನ್ನು ಸಂವೃದ್ದ ದೇಶವನ್ನಾಗಿ ಮತ್ತು ಶಾಂತಿ ಸಾಮರಸ್ಯದಿಂದರಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಜಾತಿಯ ವಿಷ ಬೀಜ ಬಿತ್ತಿ ಗೊಂದಲ ಸೃಷ್ಠಿಸುವ ಕೋಮುವಾದಿ ಪಕ್ಷವನ್ನು ದೂರವಿಡಲು ಮತದಾರರು ಉತ್ಸುಕರಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಅಧಿಕ ಸ್ಥಾನ ಗಳಿಸುವುದೆಂದು ಹೇಳಿ, ಕೇಂದ್ರದಲ್ಲಿ 360 ಕ್ಕೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂದನ್,ಆಸೀಫ಼್ ಭಾಷಾ,ಗಣಪತಿ ಗವಟೂರು, ಮಂಜುನಾಥ ಮಳವಳ್ಳಿ,ಬಂಡಿ ರಾಮಚಂದ್ರ ,ಉಬೇದುಲ್ಲಾ ಷರೀಫ್, ಉಮಾಕರ್ , ಲೇಖನ ಚಂದ್ರನಾಯ್ಕ್, ರವೀಂದ್ರ ಕೆರೆಹಳ್ಳಿ, ಬೃಂದಾವನ ಕ್ಯಾಂಟೀನ್ ಮಾಲೀಕ ಸ್ವಾಮಿನಾಯ್ಕ್, ಕೆರೆಹಳ್ಳಿ, ರಮೇಶ್ ಫ್ಯಾನ್ಸಿ, ಹೆಚ್.ಎನ್. ಉಮೇಶ್,ಶ್ರೀಧರ್, ಪ್ರಕಾಶಪಾಲೇಕರ್, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.