ಜಿಲ್ಲಾ ಸುದ್ದಿ:
Sagara | ಆಕಸ್ಮಿಕ ಬೆಂಕಿ: ಕೊಟ್ಟಿಗೆ, ಕಾರು ಸಂಪೂರ್ಣ ಭಸ್ಮ
Sagara | ಆಕಸ್ಮಿಕ ಬೆಂಕಿ: ಕೊಟ್ಟಿಗೆ, ಕಾರು ಸಂಪೂರ್ಣ ಭಸ್ಮ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುದರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಸುಳ್ಳಳ್ಳಿ ಸಮೀಪದ ಕೊಡನವಳ್ಳಿಯಲ್ಲಿ ಗಣಪತಿ ಕೆಂಚ ನಾಯ್ಕ ಅವರ ದನದ ಕೊಟ್ಟಿಗೆಯಲ್ಲಿ ಕಾಣಿಸಿದ ಆಕಸ್ಮಿಕ ಬೆಂಕಿಯ ಕಾರಣದಿಂದ ಕೊಟ್ಟಿಗೆ, ಸಂಗ್ರಹಿಸಿದ ಒಣ ಹುಲ್ಲು ಹಾಗೂ ಓಮಿನಿ ಕಾರು ಸಂಪೂರ್ಣ ಭಸ್ಮವಾದ ಘಟನೆ ನಡೆದಿದೆ. ಪ್ರಾಥಮಿಕ ಅಂದಾಜುಗಳ ಪ್ರಕಾರ ಸುಮಾರು ಏಳರಿಂದ ಎಂಟು ಲಕ್ಷ ರೂ.ಗಳ ನಷ್ಟ ಉಂಟಾಗಿದೆ ಎಂದು ಭಾವಿಸಲಾಗಿದೆ. ಬೆಂಕಿಯನ್ನು ನಂದಿಸಲು ಗಣಪತಿ,…
Sagara | ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿದಂಬರರಾವ್ ಜಂಬೆ ರವರನ್ನು ಅಭಿನಂದಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿದಂಬರರಾವ್ ಜಂಬೆ ರವರನ್ನು ಅಭಿನಂದಿಸಿದ ಮಾಜಿ ಸಚಿವ ಹರತಾಳು ಹಾಲಪ್ಪ ಸಾಗರ : 2023 ನೇ ಸಾಲಿನ ರಾಜ್ಯೋತ್ಸವ (ರಂಗಭೂಮಿ ಕ್ಷೇತ್ರ) ಪ್ರಶಸ್ತಿಗೆ ಭಾಜನರಾದ ನಾಡಿನ ಹೆಸರಾಂತ ರಂಗ ನಿರ್ದೇಶಕ ಚಿದಂಬರ ರಾವ್ ಜಂಬೆ ರವರನ್ನು ಅವರ ಸ್ವಗೃಹದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅಭಿನಂದಿಸಿ ಸನ್ಮಾನಿಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕೆಳದಿ ಸಮೀಪದ ಅಡ್ಡೇರಿ ಗ್ರಾಮದವರಾದ ಜಂಬೆಯವರು. ಕೆಳದಿಯ ಭಾರತಿ ಕಲಾವಿದರು ಸಂಸ್ಥೆಯ “ಸಂಗ್ಯಾ-ಬಾಳ್ಯಾ” ನಾಟಕದ ಮೂಲಕ ರಂಗಭೂಮಿಯನ್ನು ಪ್ರವೇಶಿಸಿ,…
ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಜನತೆ| leopard
ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ – ನಿಟ್ಟುಸಿರು ಬಿಟ್ಟ ಜನತೆ| leopard ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿಮ ಕಾರೆಹಳ್ಳಿ ಭಾಗದಲ್ಲಿ ಇತ್ತೀಚಿಗೆ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರ ಜನರ ನಿದ್ದೆಗೆಡಿಸಿತ್ತು. ನಾಯಿಯ ಮೇಲೂ ದಾಳಿ ಮಾಡಿತ್ತು. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ಕಾರೆಹಳ್ಳಿಯಲ್ಲಿ ಮನೆ ಮಾದರಿಯ ಬೋನಿ ನಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಅದಕ್ಕೆ ವಿಶಾಲವಾದ ಬಯಲು ಅನಿಸಿಕೊಂಡೇ ಅದು ಬೇಟೆಯನ್ನು ಅರಸಿಕೊಂಡು ಬೋನಿನ ಒಳಗೆ ಮದ್ಯರಾತ್ರಿ ಪ್ರವೇಶಿಸಿತ್ತು. ಇಂದು ಬೆಳಿಗ್ಗೆ ವನ್ಯಜೀವಿ ವೈದ್ಯ…
Shivamogga |ಕಾಲೇಜು ವಿದ್ಯಾರ್ಥಿ ಮೇಲೆ ಬಿಸಿ ಎಣ್ಣೆ ಎರಚಿ ಕುಡುಕನ ರಾದ್ದಾಂತ
Shivamogga |ಕಾಲೇಜು ವಿದ್ಯಾರ್ಥಿ ಮೇಲೆ ಬಿಸಿ ಎಣ್ಣೆ ಎರಚಿ ಕುಡುಕನ ರಾದ್ದಾಂತ ಕಬಾಬ್ ಅಂಗಡಿ ಮಾಲೀಕನ ಜೊತೆ ಜಗಳವಾಡುತ್ತಿದ್ದ ವೇಳೆ ಪಾನಮತ್ತ ಗ್ರಾಹಕನೊಬ್ಬ ಕಾಲೇಜು ವಿದ್ಯಾರ್ಥಿ ಮೇಲೆ ಎಣ್ಣೆ ಸುರಿದಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಕಬಾಬ್ ಮಾಲೀಕನ ಜೊತೆಗೆ ಪಾನಮತ್ತನಾಗಿದ್ದ ಗ್ರಾಹಕನೊಬ್ಬ ಜಗಳವಾಡುತಿದ್ದು ಅದು ವಿಕೋಪಕ್ಕೆ ತಿರುಗಿದಾಗ ಸಿಟ್ಟಿಗೆದ್ದು ವಿದ್ಯಾರ್ಥಿ ಒಬ್ಬನ ಮೇಲೆ ಪಾನಮತ್ತ ಗ್ರಾಹಕ ಬಿಸಿ ಎಣ್ಣೆ ಎರಚಿದ್ದಾನೆ. ಮಾಲೀಕನ ಮೇಲೆ ಪಾನಮತ್ತ ಗ್ರಾಹಕ ಎಣ್ಣೆ ಎರಚಲು ಯತ್ನಿಸಿದ್ದಾನೆ. ಆದರೆ ಜರಡಿಯಿಂದ ವಿದ್ಯಾರ್ಥಿ ಮೇಲೆ…
shivamogga | ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಕಾರು ಚಾಲಕನ ಮೇಲೆ ಹೆಜ್ಜೇನು ದಾಳಿ – ಮೆಗ್ಗಾನ್ ಗೆ ದಾಖಲು
shivamogga | ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಕಾರು ಚಾಲಕನ ಮೇಲೆ ಹೆಜ್ಜೇನು ದಾಳಿ – ಮೆಗ್ಗಾನ್ ಗೆ ದಾಖಲು ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಕಾರಿನ ಚಾಲಕನ ಮೇಲೆ ಹೆಜ್ಜೇನು ದಾಳಿ ನಡೆಸಿರುವ ಘಟನೆ ನಡೆದಿದೆ. ಸರ್ಜಿ ಕನ್ವೆಷನಲ್ ಹಾಲ್ ನಲ್ಲಿ ಮದುವೆ ಇದ್ದ ಕಾರಣ ಜಿಲ್ಲಾಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರನ್ನು ಇನ್ನೋವ ಕಾರಿನಲ್ಲಿ ಚಾಲಕ ಪ್ರವೀಣ್ ಕರೆದುಕೊಂಡು ಬಂದಿದ್ದಾರೆ. ಈ ಸಂಧರ್ಭದಲ್ಲಿ ಸರ್ಜಿ ಕನ್ವಷನಲ್ ಹಾಲ್ ನ ಮೆಟ್ಟಿಲಿನ…
ರಿಪ್ಪನ್‌ಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಯೋಗ ಚಾಂಪಿಯನ್ ಗರಿ| Yoga – champion
ರಿಪ್ಪನ್ ಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಯೋಗ ಚಾಂಪಿಯನ್ ರಿಪ್ಪನ್ ಪೇಟೆ : ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಪೂಜಿನಗರ ಇವರ ಸಹಯೋಗದಲ್ಲಿ ನಡೆದ ಯೋಗ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನ್‌ಪೇಟೆಯ ಯೋಗ ಪಟುಗಳು ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು, ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಪುರುಷರ ವಿಭಾಗದಲ್ಲಿ ತೃತೀಯ ಬಿಕಾಂ ತರಗತಿಯ ಆಕಾಶ್. ಕೆ. ಆರ್, ಮೊಹ್ಮದ್ ಮುಸ್ತಾಫ, ನಂದನ್‌ಕುಮಾರ್. ಇ, ಅಭಿಷೇಕ್. ಎನ್,…
ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಯ ಅಪೂರ್ವ ಸಾಧನೆ -ಪರಿಸರ ಸ್ನೇಹಿ ಸೋಲಾರ್ ಹುಲ್ಲು ಕಟಾವ್ ಯಂತ್ರ ರಾಜ್ಯಮಟ್ಟಕ್ಕೆ ಆಯ್ಕೆ |Ripponpet
ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಯ ಅಪೂರ್ವ ಸಾಧನೆ -ಪರಿಸರ ಸ್ನೇಹಿ ಸೋಲಾರ್ ಹುಲ್ಲು ಕಟಾವ್ ಯಂತ್ರ ರಾಜ್ಯಮಟ್ಟಕ್ಕೆ ಆಯ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಜೇನಿ ಸರಕಾರಿ ಪ್ರೌಡಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಅಭಿಷೇಕ್ ಸಿದ್ಧಪಡಿಸಿರುವ ಪರಿಸರ ಸ್ನೇಹಿ ಸೌರ ಆಧಾರಿತ ಹುಲ್ಲು ಕಟಾವ್ ಯಂತ್ರ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅಭಿಷೇಕ್ ಸಿದ್ದಪಡಿಸಿರುವ ಸೋಲಾರ್ ಹುಲ್ಲು ಕಟಾವ್ ಯಂತ್ರ ಪ್ರಥಮ ಸ್ಥಾನ ಪಡೆದು…
Garthikere | ಶಿಕ್ಷಕನಿಂದ ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಲು ಒತ್ತಾಯ – ಪೋಷಕರ ಆರೋಪ
ಶಿಕ್ಷಕನಿಂದ ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಲು ಒತ್ತಾಯ – ಪೋಷಕರ ಆರೋಪ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿನಿಗೆ ಶಿಕ್ಷಕರೊಬ್ಬರು ಮೊಟ್ಟೆ ತಿನ್ನಲು ಒತ್ತಾಯ ಮಾಡುತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಕೆಪಿಎಸ್ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರೊಬ್ಬರು ಶಾಲೆಯ ಬ್ರಾಹ್ಮಣ ವಿದ್ಯಾರ್ಥಿನಿಯೊಬ್ಬರಿಗೆ ಮಂಗಳವಾರ ಒತ್ತಾಯ ಪೂರ್ವಕವಾಗಿ ಮೊಟ್ಟೆ ತಿನ್ನಿಸಿದ್ದು ಇದರಿಂದ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಏರುಪೇರಾಗಿದ್ದು ಇದರಿಂದ ನಮ್ಮ ಧಾರ್ಮಿಕ ಆಚರಣೆಗೆ ಧಕ್ಕೆಯಾಗಿರುತ್ತದೆ ಎಂದು ಪೋಷಕರಾದ ಶ್ರೀಕಾಂತ್…
Malali | ಧರ್ಮ ಪ್ರಸಾರದೊಂದಿಗೆ ಮಳಲಿ ಮಠಾಧೀಶರ ಕೃಷಿ ಕ್ರಾಂತಿ
Malali | ಧರ್ಮ ಪ್ರಸಾರದೊಂದಿಗೆ ಮಳಲಿ ಮಠಾಧೀಶರ ಕೃಷಿ ಕ್ರಾಂತಿ – ಮಳಲಿಮಠದ ಶ್ರೀಗಳ ಪಟ್ಟಾಧಿಕಾರದ ರಜತ ವರ್ಧಂತಿ ಮಹೋತ್ಸವ ರಿಪ್ಪನ್‌ಪೇಟೆ;-ಧರ್ಮ ಪ್ರಸಾರದೊಂದಿಗೆ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡು ಹೊಸ ಹೊಸ ಅವಿಷ್ಕಾರದೊಂದಿಗೆ ಮಳಲಿಮಠದ ಪಟ್ಟಾಧ್ಯಕ್ಷರಾದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಕೃಷಿ ಕ್ರಾಂತಿಯಲ್ಲಿ ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದಾರೆ. ಧರ್ಮದ ದೇವ ತಪೋ ಭೂಮಿ ಭಾರತ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯಿಟ್ಟ ಈ ನಾಡು ಪವಿತ್ರ ಪುಣ್ಯ ಭೂಮಿಯಲ್ಲಿ ಹಲವಾರು ಧರ್ಮಗಳು ಮೈದಾಳಿ ಬಂದಿವೆ. ಅನೇಕ ಧರ್ಮಗಳಲ್ಲಿ ವೀರಶೈವ ಧರ್ಮವು ಒಂದಾಗಿದೆ.ಪರಶಿವನಿಗೆ…
Ripponpet | ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸಿ : ನಿರ್ಭಯಾನಂದ ಸರಸ್ವತಿ ಸ್ವಾಮೀಜಿ
ಸಾವಿರ ಭಾರಿ ಸೋಲುಂಡರು ಚಿಂತಿಸದೇ ಛಲಬಿಡದೆ ಹೋರಾಟದಿಂದ ಯಶಸ್ಸು ಸಾಧ್ಯ – ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ರಿಪ್ಪನ್‌ಪೇಟೆ : ಭಾರತದಲ್ಲಿ ಪ್ರತಿಭಾನ್ವಿತ ಸಾಧಕರಿದ್ದಾರೆ. ಆದರೆ ಅವರಿಗೆ ಪ್ರೋತ್ಸಾಹ-ಅವಕಾಶಗಳಿಲ್ಲ,ನಮ್ಮಲ್ಲಿ ಎಷ್ಟೇ ಸಂಶೋಧನೆಗಳಾದರೂ ಅವು ಸದ್ಬಳಕೆಯಾಗಿದ್ದು ವಿದೇಶಗಳಲ್ಲಿ ಹೀಗಾಗಿ ಆ ದೇಶಗಳು ಮುಂದುವರಿದಿವೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು ಪಟ್ಟಣದ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಜ್ಞಾನ ಮತ್ತು ತಾಂತ್ರಿಕತೆ ಇಂದು ಬಹಳಷ್ಟು ವಿಸ್ತಾರಗೊಂಡಿದೆ….