ಕ್ರೈಂ ಸುದ್ದಿ:
RIPPONPETE | ಬಾಳೂರು ಬಳಿಯಲ್ಲಿ ಖಾಸಗಿ ಬಸ್ ಅಪಘಾತ
RIPPONPETE | ಬಾಳೂರು ಬಳಿಯಲ್ಲಿ ಖಾಸಗಿ ಬಸ್ ಅಪಘಾತ ಚಾಲಕನ ನಿಯಂತ್ರಣ ತಪ್ಪಿ 30 ಮಂದಿ ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ ಖಾಸಗಿ ಬಸ್ ಅಪಘಾತವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಬಳಿಯಲ್ಲಿ ನಡೆದಿದೆ. ಸಾಗರದಿಂದ – ಉಡುಪಿ ಕಡೆಗೆ ತೆರಳುತಿದ್ದ ಕೃಷ್ಣಸ್ವಾಮಿ ಎಂಬ ಖಾಸಗಿ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗೆ ಇಳಿದ ಘಟನೆಯೊಂದು ನಡೆದಿದೆ. ಬಾಳೂರು ಬಳಿಯಲ್ಲಿರುವ ಸೇತುವೆ ಬಳಿಯಲ್ಲಿ ಬರುತ್ತಿದ್ದ ಬಸ್ ಇದ್ದಕ್ಕಿದ್ದ ಹಾಗೆ ಚರಂಡಿಗೆ ಇಳಿದಿದೆ. ಬಸ್‌ನಲ್ಲಿ 30 ಕ್ಕೂ…
ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಉರುಳಿದ ಕಾರು
ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಕೆಳಗೆ ಉರುಳಿದ ಕಾರು ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕಾರು ಕೆಳಗೆ ಬಿದ್ದ ಘಟನೆ ಆಗರದಹಳ್ಳಿ ಬಳಿ ನಡೆದಿದೆ. ಸಿಗಂದೂರು, ಜೋಗ, ಕೊಲ್ಲೂರು ಪ್ರವಾಸ ಮುಗಿಸಿ ಚಿತ್ರದುರ್ಗಕ್ಕೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ. ಅಪಘಾತದಿಂದ ಆರು ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ರಾತ್ರಿ 2.30ರ ಹೊತ್ತಿಗೆ ದುರ್ಘಟನೆ ನಡೆದಿದೆ. ಚಾಲಕ ಕಾರ್ತಿಕ್ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡಿರೋದೇ ಅಪಘಾತಕ್ಕೆ…
ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಕಲ್ಯಾಣಿಗೆ ಬಿದ್ದು ಯುವಕ ಸಾವು
ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಕಲ್ಯಾಣಿಗೆ ಬಿದ್ದು ಯುವಕ ಸಾವು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಕಲ್ಯಾಣಿಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಕ್ಕಮಹಾದೇವಿ ಜನ್ಮಸ್ಥಳ ಉಡತಡಿ ಗ್ರಾಮದಲ್ಲಿ ನಡೆದಿದೆ. ಹೌದು ಕಲ್ಯಾಣಿ ಬಳಿ ಪೋಟೋ ತೆಗೆದುಕೊಳ್ಳುವಾಗ ಕಾಲು ಜಾರಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಕ್ಕಮಹಾದೇವಿ ಜನ್ಮಸ್ಥಳ ಉಡತಡಿ ಗ್ರಾಮದಲ್ಲಿ ನಡೆದಿದೆ. ಶಿರಾಳಕೊಪ್ಪದ ಗಂಡಗದಕೇರಿಯ ನಿವಾಸಿ ತಾಹೀರ್(21) ಮೃತ ಯುವಕ. ಸ್ನೇಹಿತರೊಂದಿಗೆ ಅಕ್ಕಮಹಾದೇವಿ ಜನ್ಮಸ್ಥಳ…
ತೋಟಕ್ಕೆ ಔಷಧಿ ಸಿಂಪಡಿಸುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು
ತೋಟಕ್ಕೆ ಔಷಧಿ ಸಿಂಪಡಿಸುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು ಶಿವಮೊಗ್ಗ(Shivamogga) ಜಿಲ್ಲೆಯ ಸೊರಬ(soraba) ತಾಲೂಕಿನ ಓಟೂರು ಗ್ರಾಮದಲ್ಲಿ ಭಾನುವಾರ ತೋಟದಲ್ಲಿ ಅಡಿಕೆ ಮರಗಳ ಹಿಂಗಾರಕ್ಕೆ ಔಷಧ ಸಿಂಪಡಿಸುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆನವಟ್ಟಿ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶ್ರೀಕಾಂತ್(35) ಮೃತಪಟ್ಟ ಕಾರ್ಮಿಕ. ತಂದೆ ಮತ್ತು ಅಣ್ಣನೊಂದಿಗೆ ಭಾನುವಾರ ಗ್ರಾಮದ ವಿಶ್ವ ಎಂಬುವರ ತೋಟದ ಅಡಿಕೆಗೆ ಕೊಳೆ ನಿಯಂತ್ರಣಕ್ಕೆ ಔಷಧ ಸಿಂಪಡಿಸಲು ಹೋಗಿದ್ದರು. ತೋಟದ ಪಕ್ಕದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ಔಷದ ಸಿಂಪಡಿಸುವಾಗ ಪೈಪ್…
ಆನ್ ಲೈನ್ ಆಪ್ ನಂಬಿ ಹಣ ಕಳೆದುಕೊಂಡ ಯುವಕ – ಮನನೊಂದು ಆತ್ಮಹತ್ಯೆ
ಆನ್ ಲೈನ್ ಆಪ್ ನಂಬಿ ಹಣ ಕಳೆದುಕೊಂಡ ಯುವಕ – ಮನನೊಂದು ಆತ್ಮಹತ್ಯೆ ಆನ್ಲೈನ್ನಲ್ಲಿ ಬರುವಂತಹ ಆಪ್ ಗಳನ್ನು ನಂಬಿ ಅನೇಕ ಜನರು ಸಾವಿರಾರು ರೂಪಾಯಿಗಳನ್ನು ಹಾಕಿ ಕೈ ಸುಟ್ಟುಕೊಂಡಿರುವಂತಹ ಉದಾಹರಣೆಗಳು ನಮ್ಮ ಮುಂದೆ ಇವೆ. ಅದರಂತೆ ಇದೀಗ ಶಿವಮೊಗ್ಗದಲ್ಲಿ ಯುವಕನೊಬ್ಬ ಆನ್ಲೈನ್ ಆಪ್ ಅನ್ನು ನಂಬಿ ಹಣ ಡಬಲ್ ಆಗುತ್ತದೆ ಎಂದು ಸಾವಿರಾರು ರೂಪಾಯಿ ಹಣ ಹೂಡಿಕೆ ಮಾಡಿದ್ದಾನೆ.ಆದರೆ ಮರಳಿ ಹಣ ಬಾರದೆ ಇರುವುದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೌದು ಆನ್ಲೈನ್ ಆಪ್ ನಂಬಿ ಹಣ…
ತೋಟಕ್ಕೆ ತೆರಳುವಾಗ ಕಾಡಾನೆ ದಾಳಿ – ಕಾರ್ಮಿಕ ಸಾವು
ತೋಟಕ್ಕೆ ತೆರಳುವಾಗ ಕಾಡಾನೆ ದಾಳಿ – ಕಾರ್ಮಿಕ ಸಾವು ಕಾಡಾನೆ ದಾಳಿಯಿಂದ ಕೃಷಿ ಕಾರ್ಮಿಕ ಮೃತಪಟ್ಟ ಘಟನೆ ಶಿವಮೊಗ್ಗ ನಗರ ಸಮೀಪದ ಆಲದೇವರ ಹೊಸೂರು ಗ್ರಾಮದಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ. ಹನುಮಂತಪ್ಪ(40) ಮೃತಪಟ್ಟ ಕಾರ್ಮಿಕರಾಗಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಮೂಲದ ಹನುಮಂತಪ್ಪ ಅವರು ಆಲದೇವರ ಹೊಸೂರು ಸಮೀಪದಲ್ಲಿ ಸಂಪತ್ ಕುಮಾರ್ ಎಂಬುವರ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಕುಟುಂಬದವರೊಂದಿಗೆ ತೋಟದಲ್ಲಿಯೇ ವಾಸವಾಗಿದ್ದರು. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ತೋಟಕ್ಕೆ ತೆರಳುತ್ತಿದ್ದ…
ಫೋನ್ ಪೇ ಮೂಲಕ ಲಂಚ ಸ್ವೀಕಾರ – ಹೊಸನಗರದ ಹೆಡ್ ಕಾನ್ಸ್ ಟೇಬಲ್ ಅಮಾನತು
ಫೋನ್ ಪೇ ಮೂಲಕ ಲಂಚ ಸ್ವೀಕಾರ – ಹೊಸನಗರದ ಹೆಡ್ ಕಾನ್ಸ್ ಟೇಬಲ್ ಅಮಾನತು ಓಸಿ, ಮಟ್ಕವನ್ನು ಎಡೆಮುರಿ ಕಟ್ಟಿ, ನಿಯಂತ್ರಿಸಬೇಕಾಗಿರುವುದು ಪೊಲೀಸರ ಕೆಲಸ. ಆದರೇ ಇಲ್ಲೊಬ್ಬ ಪೊಲೀಸಪ್ಪ ಮಾಡಿದ್ದು ಮಾತ್ರ ಪೊಲೀಸರೇ ತಲೆ ತಗ್ಗಿಸುವಂತ ಕೆಲಸ. ಅದೇನಂದ್ರೆ ಓಸಿ, ಮಟ್ಕ ದಂಧೆಕೋರರೊಂದಿಗೆ ಶಾಮೀಲಾಗಿ, ಪೋನ್ ಪೇ ಮೂಲಕವೇ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾನೆ. ಹೌದು.. ಕಳೆದ ಆಗಸ್ಟ್.18ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ಠಾಣೆಯ ಪೊಲೀಸ್ ಹೆಡ್ ಕಾನ್ಸ್ ಸ್ಟೇಬಲ್ ಪ್ರಕಾಶ್.ಎನ್ ಎಂಬುವರು ತಮ್ಮ ಠಾಣಾ ವ್ಯಾಪ್ತಿಯ ಮಾರುತಿಪುರ,…
ಲಕ್ಷಾಂತರ ರೂ ಮೌಲ್ಯದ ಹಸುಗಳನ್ನು ಕಳ್ಳತನವೆಸಗಿದ್ದ ಆರೋಪಿಗಳು ಅರೆಸ್ಟ್
ಕಳುವಾಗಿದ್ದ 2.40 ಲಕ್ಷ ರೂ ಮೌಲ್ಯದ 4 ಹಸುಗಳನ್ನ ಪತ್ತೆ ಮಾಡುವಲ್ಲಿ ಶಿರಾಳಕೊಪ್ಪದ ಪೊಲೀಸರು ಯಶಸ್ವಿಯಾಗಿದ್ದಾರೆ. ನಡೆದಿದ್ದೇನು..!??? ದಿನಾಂಕಃ 09-08-2024 ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಜಂಬೂರು ಗ್ರಾಮದ ವಾಸಿ ಶ್ರೀ ಮೊಹಮದ್ ಆಲಿ ಖಾನ್, 34 ವರ್ಷ ರವರ ಫಾರಂ ಹೌಸ್ ನಲ್ಲಿದ್ದ 04 ಹಸುಗಳನ್ನು ಕಳುವು ಮಾಡಲಾಗಿತ್ತು. ಬಿಎನ್ ಎಸ್ ಕಾಯ್ದೆ ಅಡಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಮಾಲಿನ ಪತ್ತೆಗಾಗಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್…
ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು
ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು ಹೊಸನಗರ : ನಾಯಿ ಕಚ್ಚಿ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಶಂಕಿತ ರೇಬಿಸ್ ಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಗೇರುಪುರ ಮೂಲದ ಸಂಗೀತಾ (38) ಮೃತ ದುರ್ಧೈವಿಯಾಗಿದ್ದಾರೆ ಕಳೆದ ಜುಲೈ 14ರಂದು ಇವರಿಗೆ ನಾಯಿ ಕಚ್ಚಿತ್ತು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರಿಂದ ರೇಬೀಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ನಂತರ ಹೊಸನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ರೋಗ ಉಲ್ಬಣಗೊಂಡಿದ್ದರಿಂದ ಇವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ…
ಅಂಗನವಾಡಿ ಕಾರ್ಯಕರ್ತೆಯ ಮಾಂಗಲ್ಯ ಸರ ಕಿತ್ತು ಪರಾರಿ
ಅಂಗನವಾಡಿ ಕಾರ್ಯಕರ್ತೆಯ ಮಾಂಗಲ್ಯ ಸರ ಕಿತ್ತು ಪರಾರಿ ಅಂಗನವಾಡಿಯಲ್ಲಿ ಕಾರ್ಯನಿರತರಾಗಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ಅಪರಿಚಿತ ವ್ಯಕ್ತಿಯೊಬ್ಬ ಕಿತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬೈಲು ಗ್ರಾಮದ ಮಿನಿ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾರಾಮತಿ ಎಂಬವರು ಆ. 22ರಂದು ಕರ್ತವ್ಯ ನಿರತರಾಗಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ನೀಲಿ ಬಣ್ಣದ ಜರ್ಕಿನ್ ಹಾಕಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಅಪರಿಚಿತ ವ್ಯಕ್ತಿಯೋರ್ವ ಅಂಗನವಾಡಿಗೆ ನುಗ್ಗಿ…