ಹೆಂಡತಿಯ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರ : ಪೊಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ

ಸಾಗರ : ಹೆಂಡತಿಯ ಅಪ್ರಾಪ್ತ ತಂಗಿಯನ್ನು ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ ಸಾಗರ ತಾಲೂಕಿನ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ವಿಶ್ವ ಬಂಧಿತ ಆರೋಪಿ. 17 ವರ್ಷದ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ್ದ ಈತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯು ಸಾಗರ ತಾಲೂಕಿನ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಮಹಿಳೆಗೆ ತಂದೆ ಇಲ್ಲದ ಕಾರಣ, ಆಕೆಯ ತಾಯಿ ಹಾಗೂ ಆಕೆಯ ತಂಗಿಯನ್ನು ಆರೋಪಿ ತನ್ನ ಮನೆಗೆ ಕರೆಸಿಕೊಂಡಿದ್ದ. ಎಲ್ಲರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೆಂಡತಿಯ ತಂಗಿಯ ಜೊತೆ…

Read More

ಬೈಕ್ ಸ್ಕಿಡ್ ಆಗಿ ಡಿವೈಡರ್ ಗೆ ಡಿಕ್ಕಿ : ಇಬ್ಬರು ಯುವಕರು ಸ್ಥಳದಲ್ಲೇ ಸಾವು :

ಶಿವಮೊಗ್ಗದ ಅಲ್ಕೊಳ ಸರ್ಕಲ್ ಹತ್ತಿರ ಬೈಕ್ ಅಪಘಾತವಾಗಿ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಎ‍ಕ್ಸ್ ಪಲ್ಸ್ KA14 E 9132 ದ್ವಿಚಕ್ರ ವಾಹನದಲ್ಲಿ ಇಬ್ಬರು ಯುವಕರು ತೆರಳುತ್ತಿದ್ದಾಗ ಆಲ್ಕೊಳ ಸರ್ಕಲ್ ಬಳಿ ಸ್ಕಿಡ್ ಆದ ಪರಿಣಾಮ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಬೈಕ್ ಚಾಲನೆ ಸಮಯದಲ್ಲಿ ಹೆಲ್ಮೆಟ್ ಧರಿಸಿಲ್ಲ ಎಂಬುದು ಕಂಡು ಬಂದಿದೆ. ಮೃತರನ್ನು ಕೋಟೆಗಂಗೂರಿನ ಗ್ರಾಮದ ಅಭಯ್ ಮತ್ತು ವರುಣ್ ಎಂದು ಗುರುತಿಸಲಾಗಿದ್ದು,ಪಶ್ಚಿಮ ಪೊಲೀಸ್…

Read More

ಶಿವಮೊಗ್ಗದ ಸೂಳೆಬೈಲ್ ನಲ್ಲಿ ಕಾರಿನ ಮೇಲೆ ಕಲ್ಲು ತೂರಾಟ : ಸ್ಥಳದಲ್ಲಿ ಬಿಗುವಿನ ವಾತಾವರಣ :

ಶಿವಮೊಗ್ಗದ ಸೂಳೆಬೈಲು ಸಮೀಪದ ಇಂದಿರಾ ನಗರದಲ್ಲಿ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಕಾರಿನ ಗಾಜು ಪುಡಿಯಾಗಿದೆ. ಇದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಜನ ಗುಂಪುಗೂಡಿದರು. ಹಾಗಾಗಿ ಸೂಳೆಬೈಲಿನಲ್ಲಿ ಗೊಂದಲ ಸೃಷ್ಟಿಯಾಯಿತು. ಕೂಡಲೆ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಕಾರು ಶಿವಮೊಗ್ಗದಿಂದ ಮತ್ತೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಹಿಂಬದಿಯಿಂದ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರು ಮತ್ತೂರಿನಲ್ಲಿರುವ ತಮ್ಮ ಸಂಬಂಧಿಯ ಮನೆಗೆ…

Read More

ಡ್ರಾಪ್ ಕೇಳುವ ನೆಪದಲ್ಲಿ ಸಿನಿಮೀಯ ಶೈಲಿಯ ಬೈಕ್ ಕಳ್ಳತನ :

ಡ್ರಾಪ್ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ವಂಚಿಸಿ ಬೈಕ್ ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಸಂಭವಿಸಿದೆ. ಬಸ್ ಚಾಲಕ ವೃತ್ತಿ ಮಾಡುವ ರಮೇಶ್ ಸ್ನೇಹಿತನ ಬಜಾಜ್ ಪಲ್ಸರ್ ಬೈಕ್ ಪಡೆದುಕೊಂಡು, ಚೋರಡಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಈ ವೇಳೆ ಸುಮಾರು 25 ವರ್ಷದ ಯುವಕನೊಬ್ಬ ಡ್ರಾಪ್ ಕೇಳಿದ್ದಾನೆ. ಅದೇ ಯುವಕ ರಮೇಶ್ ಅವರು ಚಲಾಯಿಸುತ್ತಿದ್ದ ಪಲ್ಸರ್ ಬೈಕ್ ಕದ್ದು ಪರಾರಿಯಾಗಿದ್ದಾನೆ. ರಮೇಶ್ ಅವರು ಬಸ್ ಚಾಲಕ ವೃತ್ತಿ ಮಾಡುತ್ತಿದ್ದಾರೆ. ತುರ್ತು ಕೆಲಸ ಇದ್ದ ಕಾರಣ ಚೋರಡಿಯಿಂದ ತಮ್ಮ ಸಂಬಂಧಿಯೊಬ್ಬರ…

Read More

ಹಿಂದೂ ಕಾರ್ಯಕರ್ತನಿಗೆ ಕೊಲೆ ಬೆದರಿಕೆ : ಜೈಲ್ ನಿಂದ ಜಾಮೀನಿನ ಮೇಲೆ ಬಂದು ಮತ್ತೆ ಧಮ್ಕಿ ಹಾಕಿದ ಯುವಕರು :

ಶಿವಮೊಗ್ಗ : ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ನಡುವಿನ ಸಂಘರ್ಷ ಇನ್ನು ಮುಂದುವರೆಯುವ ರೀತಿ ಕಾಣುತ್ತಿದೆ. ಕಾರಣ ಭಜರಂಗದಳದ ಯುವಕರು ಎಂದು ಹಿಂಬಾಲಿಸಿ ಕೊಲೆಗೆ ಸಂಚು ಮಾಡಿ ಪೊಲೀಸರಿಂದ ಬಂಧನಕ್ಕೊಳಗಾಗಿ ಬಿಡುಗಡೆ ಹೊಂದಿದ್ದ ಮೂವರು ಹುಡುಗರಲ್ಲಿ ಇಬ್ಬರು ಹುಡುಗರು ಮತ್ತೆ ಪುಂಡಾಟಿಕೆ ಮೆರೆದಿದ್ದಾರೆ. ಈ ಪ್ರಕರಣವನ್ನು ನೋಡುತ್ತಿದ್ದರೆ  ಯಾರೋ ಚಿವುಟಿ ಮಜಾ ತೆಗೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನ ಸಹ ಹುಟ್ಟಲಾರಂಭಿಸಿದೆ. ಹಿಂದೂ ಕಾರ್ಯಕರ್ತ ಎಂದು ನ್ಯೂ ಮಂಡ್ಲಿಯಲ್ಲಿಯಲ್ಲಿ ಸುಮಂತ್ ನನ್ನ ಹುಡುಕಿಕೊಂಡು ಬಂದು ಆತನ ತಮ್ಮ ಭರತನಿಗೆ ಕೊಲೆ…

Read More

ಮಂಗನಕಾಯಿಲೆಗೆ ಗ್ರಾಮಪಂಚಾಯಿತಿ ಸದಸ್ಯ ಬಲಿ!!!

ಸಾಗರ :  ತಾಲ್ಲೂಕಿನ ಅರಳಗೋಡಿನಲ್ಲಿ ಮಂಗನ ಕಾಯಿಲೆಗೆ ಅಲ್ಲಿನ ಗ್ರಾಮಪಂಚಾಯ್ತಿ ಸದಸ್ಯರೊಬ್ಬರು ಸಾವನ್ನಪ್ಪಿದ್ದಾರೆ. 55 ವರ್ಷದ ರಾಮಸ್ವಾಮಿ ಕರುಮನೆ ಎಂಬುವರು ಮೃತರು. ಕಳೆದ ಎಪ್ರಿಲ್​ 24 ರಂದು ಇವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಜ್ವರ ಇನ್ನೂ ಹೆಚ್ಚಾದ ಕಾರಣ ಹೀಗಾಗಿ ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮಸ್ವಾಮಿಯವರು ಇಂದು  ಮಧ್ಯಾಹ್ನ ದ  ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Read More

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ : ಅನೈತಿಕ ಸಂಬಂಧ ಬಯಲಾಗುವ ಭಯಕ್ಕೆ ಸ್ನೇಹಿತನನ್ನೆ ಕೊಲೆ ಮಾಡಿ ಹೊಳೆಗೆ ಬಿಸಾಡಿದ !!!!!!!!!

ಜಮೀನು ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡು ಕೊಲೆ ಪ್ರಕರಣವಾಗಿರುವ ಘಟನೆ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ಹಿನ್ನಲೆ : ಏ.11 ರಂದು ಮನ್ಮನೆ ನಿವಾಸಿ ಲೇಖಪ್ಪ(36) ಜಮೀನು ಕೆಲಸಕ್ಕೆಂದು ಹೋದವನು ಮನೆಗೆ ವಾಪಾಸ್ ಬಾರದ ಹಿನ್ನಲೆಯಲ್ಲಿ ಏ.14ರಂದು ಸೊರಬ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೊಂದು ದಾಖಲಾಗಿತ್ತು. ಇಂದು ಕಡಸೂರು ಗ್ರಾಮದ ಹೊಳೆಯ ಸಮೀಪ ಲೇಖಪ್ಪನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಲೇಖಪ್ಪನ ಸಹೋದರ ಗ್ರಾಮದಲ್ಲಿ ರಾಜಕೀಯ ವಿಚಾರವಾಗಿ ದ್ವೇಷ…

Read More

ಸಾಲಬಾಧೆಗೆ ಹೆದರಿ ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ :

ಶಿವಮೊಗ್ಗ : ಬ್ಲೇಡ್ ನಿಂದ ಕೈಕೊಯ್ದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ನೆಹರೂ ರಸ್ತೆಯ ಖಾಸಗಿ ಲಾಡ್ಜ್ ನಲ್ಲಿ  ಈ ಘಟನೆ ನಡೆದಿದೆ.  ಈ ಯುವಕನ ಸಾವಿನ ಆಯ್ಕೆ ಬಹುತೇಕ ಅಚ್ಚರಿ ಮೂಡಿಸಿದೆ. ಕೈಯ್ಯನ ಬ್ಲೇಡ್ ನಿಂದ ಕೊಯ್ದುಕೊಂಡ ಕಾರಣ ಟಾಯ್ಲೆಟ್ ಎಲ್ಲಾ ರಕ್ತಸಿಕ್ತವಾಗಿದೆ. ಸಾಲಬಾಧೆಯೇ ಆತನ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಮೃತ ವ್ಯಕ್ತಿಯು ಬೆಂಗಳೂರು ನಿವಾಸಿ ನಾಗೇಂದ್ರ ಎಂದು ತಿಳಿದುಬಂದಿದೆ.  ಏ. 28 ರ ಬೆಳಿಗ್ಗೆ 5-30 ಕ್ಕೆ ಲಾಡ್ಜ್ ನಲ್ಲಿ ಚೆಕ್ ಇನ್ ಆದ ನಾಗೇಂದ್ರ…

Read More

ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯ ವರ್ತನೆ: ಯುವಕ ಸುಜಿತ್ ಶೆಟ್ಟಿ ಬಂಧನ

ಮಂಗಳೂರು: ತೊಕ್ಕೊಟ್ಟು ಮಸೀದಿಯಲ್ಲಿ ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಯುವಕನೋರ್ವನನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.. ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಎಂದು‌ ಗುರುತಿಸಲಾಗಿದೆ. ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಲೈಲಾತುಲ ಖದರ್ ನ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಕಳೆದ 28 ರಂದು ಏರ್ಪಡಿಸಲಾಗಿದ್ದು, ಈ ವೇಳೆ ಆರೋಪಿ ಸುಜಿತ್ ಶೆಟ್ಟಿಯು ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌ ನುಗ್ಗಿ ಮಹಿಳೆಯರ ಕೈಹಿಡಿದು ಎಳೆದು, ಅಶ್ಲೀಲವಾಗಿ…

Read More

ವಿದ್ಯುತ್ ತಂತಿ ತಗುಲಿ ಮೂರು ವರ್ಷದ ಮಗು ಸಾವು :

ವಿದ್ಯುತ್  ತಂತಿ ಬೇಲಿಯ ಮೇಲೆ ಕೇಬಲ್ ಬಿದ್ದಿದ್ದು  ಕೇಬಲ್ ನ್ನು ಮೂರು ವರ್ಷದ ಹೆಣ್ಣು ಮಗು ಮುಟ್ಟಿದ್ದರ ಪರಿಣಾಮ  ಮಗು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಮನೆ ಬಳಿ ಹಾಕಿರುವ ವಿದ್ಯುತ್ ತಂತಿ ಬೇಲಿಯ ಮೇಲೆ ಟಿವಿ ಕೇಬಲ್ ಹರಿದು ಬಿದ್ದಿದೆ. ಈ ಕೇಬಲ್ ನ್ನ ಆಟಾಡುವ ವೇಳೆ ಮಗು  ಮುಟ್ಟಿದ ಹಿನ್ನಲೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಸಾವುಕಂಡಿದೆ. ತಂತಿ ಬೇಲಿ ಮೇಲೆ ಕೇಬಲ್ ತುಂಡಾಗಿ ಬಿದ್ದಿದ್ದರಿಂದ ಕೇಬಲ್…

Read More