ಕ್ರೈಂ ಸುದ್ದಿ:
ಇನ್ಸ್ಟಾಗ್ರಾಮ್ ನಲ್ಲಿ ಯುವತಿಯ ಬೆತ್ತಲೆ ವೀಡಿಯೋ ಪಡೆದು ಆಕೆಯ ಆತ್ಮಹತ್ಯೆಗೆ ಕಾರಣವಾಗಿದ್ದ ಕಾಮುಕನ ಬಂಧನ :
ಇದೇ ತಿಂಗಳು 6ನೇ ತಾರೀಖಿನಂದು ಇನ್ ಸ್ಟಾಗ್ರಾಮ್ ನಲ್ಲಿ ಯುವತಿಯ ಫೋಟೊ ಪಡೆದು ಆಕೆಯ ಫೋಟೊವನ್ನ ಡಿಪಿ ಗೆ ಹಾಕಿಕೊಂಡ ಕಾಮುಕ ಯುವಕನಿಂದ ಬ್ಲಾಕ್ ಮೇಲ್ ಗೆ ಒಳಗಾಗಿದ್ದ ಶಿರಾಳಕೊಪ್ಪ ಪೊಲೀಸ್ ಠಾಣೆಯ ತೊಗರ್ಸಿಯ ಗ್ರಾಮದ ಯುವತಿ ತನ್ನ ಬೆತ್ತಲೆ ವಿಡಿಯೋವನ್ನ ನೀಡಿ ಕಾಮುಕನ ಬ್ಲಾಕ್ ಮೇಲ್ ನಿಂದ ಪರದಾಡಿ ಆತ್ಮ ಹತ್ಯೆಗೆ ಶರಣಾಗಿದ್ದಳು. ಈ ಸುದ್ದಿ ಶಿರಾಳಕೊಪ್ಪದಲ್ಲಿ ತಲ್ಲಣಗೊಳಿಸಿತ್ತು. ಯುವತಿಯ ತಂದೆ ಈ ಬಗ್ಗೆ ದೂರು ನೀಡಿದ್ದರು ದೂರು ಪಡೆದ ಶಿರಾಳಕೊಪ್ಪ ಪೊಲೀಸರು ಕಾಮುಕನ ಹೆಡೆಮುರಿ…
ಶಿವಮೊಗ್ಗ ಹರ್ಷನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ನಡೆದಿತ್ತು ವಿಫಲ ಸಂಚು!!!!! : ಎಸ್ಪಿ ಖಡಕ್ ಕಾರ್ಯಾಚರಣೆಯಲ್ಲಿ 13 ಜನರ ಮೇಲೆ FIR
ಹರ್ಷನ ಕೊಲೆಗೆ ಪ್ರತಿಕಾರವಾಗಿ ಮತ್ತೊಂದು ಕೊಲೆಗೆ ಸಂಚು ರೂಪಿಸಲಾಗಿತ್ತಾ ಎಂಬ ಅನುಮಾನಕ್ಕೆ ಈ ಘಟನೆ ಕಾರಣವಾಗಿದೆ.ಹರ್ಷ ಕೊಲೆಯ ಪ್ರತೀಕಾರವಾಗಿ ಮುಸ್ಲಿಂ ಯುವಕನೊಬ್ಬನ ಕೊಲೆಗೆ ಸಂಚನ್ನು ರೂಪಿಸಿದ ಖತರ್ನಾಕ್ ಗ್ಯಾಂಗ್ ನ್ನು ನಿಷ್ಕ್ರಿಯಗೊಳಿಸುವಲ್ಲಿ ಪೊಲೀಸ್ ಇಲಾಖೆ ಸಫಲವಾಗಿದೆ. ಹರ್ಷನ ಕಗ್ಗೊಲೆ ಸಮಯದಲ್ಲಿ ಪತ್ರಕರ್ತರೊಬ್ಬರ ಮೇಲೆ ನಡೆದ ಹಲ್ಲೆ ನಡೆಸಿದ್ದ ಆರೋಪಿ ಜೇಟ್ಲಿಯನ್ನ ಬಂಧಿಸಿದಾಗ ಕೊಲೆಯ ಸಂಚನ್ನು ಬಾಯಿಬಿಟ್ಟಿದ್ದಾನೆ. ಈ ಹಿನ್ನಲೆಯಲ್ಲಿ 13 ಜನರ ವಿರುದ್ಧ ಎಫ್ಐಅರ್ ದಾಖಲಾಗಿದೆ. ರಾಖಿ, ವಿಶ್ವಾಸ್, ವಾಸನೆ, ಬೆಂಗಳೂರು, ಕಟ್ಟೆ, ಕೋಟಿ, ಕುಲ್ಡ, ಅಪ್ಪು…
ಮನೆಗಳ್ಳತನ ಮಾಡುತ್ತಿದ್ದ ಆರೋಪಿಯ ಹೆಡೆಮುರಿ ಕಟ್ಟಿದ ಸಾಗರ ಪೊಲೀಸರು :
ಸಾಗರ: ಟೌನ್ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಚಂದ್ರ ಬಳೆಗಾರ್ ತಂದೆ ಲೇಟ್, ಅಣ್ಣಪ್ಪ, 28 ವರ್ಷ, ಸೆಂಟಿಂಗ್ ಕೆಲಸ ವಾಸ ಉಳವಿ ಗ್ರಾಮ ಸೊರಬ ತಾಲ್ಲೂಕು ಈತನನ್ನು ದಸ್ತಗಿರಿ ಮಾಡಿ, ವಿಚಾರಣೆ ಮಾಡಿದಾಗ, ಆರೋಪಿತನು ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ 2 ಮತ್ತು ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗೌತಮಪುರ ಗ್ರಾಮದಲ್ಲಿ 1 ಮನೆಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಿಕೆ ನೀಡಿದ್ದರಿಂದ, ಆರೋಪಿತನನ್ನು…
ಬೆಂಗಾಲ್ ಮಾನಿಟರ್ ಹಲ್ಲಿಯ ಮೇಲೆ ಅತ್ಯಾಚಾರ ಮಾಡಿದ ನಾಲ್ವರ ಬಂಧನ!!!!!
ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಗೊಠಾಣೆ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ(Sahydari Tiger Reserve) ಬಂಗಾಳ ಮಾನಿಟರ್ ಹಲ್ಲಿಯ (bengal monitor lizard ) ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬೇಟೆಗಾರರು ಎಂದು ಗುರುತಿಸಲಾಗಿದ್ದು, ಗೊಠಾಣೆಯಲ್ಲಿರುವ ಗಭಾ ಪ್ರದೇಶದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ಝೋನ್ಗೆ ಪ್ರವೇಶಿಸಿ ಅಪರಾಧ ಎಸಗಿದ್ದಾರೆ.ಅಪರಾಧಿಗಳನ್ನು ಸಂದೀಪ್ ತುಕ್ರಾಮ್, ಪವಾರ್ ಮಂಗೇಶ್, ಜನಾರ್ದನ್ ಕಾಮ್ಟೇಕರ್ ಮತ್ತು ಅಕ್ಷಯ್ ಸುನಿಲ್ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರ…
ಮರಕ್ಕೆ ಡಿಕ್ಕಿ ಹೊಡೆದ ಟಾಟಾ ಏಸ್ ವಾಹನ : ಸ್ಥಳದಲ್ಲೇ ಮೂವರ ದುರ್ಮರಣ
ಟಾಟಾಏಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೊರಬ ತಾಲೂಕಿನ ಚಿತ್ರಟ್ಟಹಳ್ಳಿ ಗ್ರಾಮದ ಬಳಿ ಮಂಗಳವಾರ ತಡ ರಾತ್ರಿ ನಡೆದಿದೆ. ತವನಂದಿ ಗ್ರಾಮದ ಯೋಗರಾಜಪ್ಪ ನಿಂಗಪ್ಪ (57), ತಿಮ್ಮಪ್ಪ ಈರಪ್ಪ (45) ಹಾಗೂ ಆಕಾಶ್ ಹನುಮಂತಪ್ಪ (13) ಮೃತ ದುರ್ಧೈವಿಗಳು. ಅಪಘಾತದಿಂದ ತೀವ್ರವಾಗಿ ಗಾಯಗೊಂಡಿರುವ ಬಸವರಾಜ್, ಹುಚ್ಚರಾಯಪ್ಪ, ಪರಶುರಾಮ, ಕೃಷ್ಣಪ್ಪ, ಜಗದೀಶ, ಚಂದ್ರಪ್ಪ, ಭೀಮಪ್ಪ, ಹನುಮಂತಪ್ಪ ಹಾಗೂ ಮಹಾದೇವಪ್ಪ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದು, ವಾಹನ ಚಾಲಕ…
ಹುಂಚಾದಲ್ಲಿ ನಡೆದ ಬಾಲ್ಯ ವಿವಾಹ : ಅರ್ಚಕ,ಫೋಟೋಗ್ರಾಫರ್ ಸೇರಿದಂತೆ ಎಲ್ಲಾರ ಮೇಲೂ ದಾಖಲಾಯಿತು ಕೇಸ್
ಇತ್ತೀಚೆಗೆ ರಿಪ್ಪನ್ಪೇಟೆ ಸಮೀಪದ ಹುಂಚಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಆನೆಗದ್ದೆ ಗ್ರಾಮದಲ್ಲಿ ನಡೆದ ಬಾಲ್ಯವಿವಾಹದ ವಿರುದ್ಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ. ಮದುವೆ ಗಂಡು ವಯಸ್ಕನಾಗಿದ್ದು ಮದುವೆ ಹೆಣ್ಣು ಅಪ್ರಾಪ್ತ ವಯಸ್ಸಿನವಳಾಗಿದ್ದಳು.ಈಗ ವಧುವರ, ಮದುವೆ ಮಾಡಿಸಿದ್ದ ಅರ್ಚಕ, ಆಹ್ವಾನ ಪತ್ರಿಕೆ ಮುದ್ರಿಸಿದ ವ್ಯಕ್ತಿ, ಫೋಟೋಗ್ರಾಫರ್, ವಧು ವರರ ಪೋಷಕರ ವಿರುದ್ಧ ದೂರು ದಾಖಲಾಗಿದೆ. ಆನಗದ್ದೆ ಗ್ರಾಮದ ಯಲ್ಲದೋಣೆಯ ರಮೇಶ್ ಎಂಬುವವನು ಬಳ್ಳಾರಿ ತಾಲೂಕಿನ ಕೂಡ್ಲಿಗಿ ಗ್ರಾಮದ ಅಪ್ರಾಪ್ತೆ ಬಾಲಕಿಯನ್ನ ಮಾ.28 ರಂದು ಮದುವೆಯಾಗಿರುತ್ತಾನೆ. ಈ ಬಗ್ಗೆ ಬಂದ ದೂರು…
ಹೊಸನಗರ ಸಮೀಪ ಮನೆಗೆ ನುಗ್ಗಿ ಹಲ್ಲೆ ನಡೆಸಿ ಹಣ ದೋಚಿದ ದರೋಡೆಕೋರರು!!!! : ದರೋಡೆ ಹಿಂದೆ ಇದೀಯಾ ಐಪಿಎಲ್ ಬೆಟ್ಟಿಂಗ್ ನಂಟು?????
ಹೊಸನಗರ ಸಮೀಪದ ಮಾವಿನಕೊಪ್ಪ – ಹೊಸನಗರ ರಸ್ತೆಯಲ್ಲಿ ಮೊನ್ನೆ ರಾತ್ರಿ ಮನೆಗೆ ಮೂವರು ದರೋಡೆಕೋರರು ನುಗ್ಗಿ ಯುವಕನ ಮೇಲೆ ಹಲ್ಲೆ ನಡೆಸಿ ಹಣ ದೋಚಿರುವ ಬಗ್ಗೆ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಂತ್ ಎಂಬ ಉಡುಪಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಹೊಸನಗರದ ಮಾವಿನಕೊಪ್ಪ ಮತ್ತು ಸಾಗರ ರಸ್ತೆಯಲ್ಲಿರುವ ತಂದೆಯ ಮನೆಗೆ ಬಂದಿದ್ದಾನೆ. ಮೊನ್ನೆ ಕಾರ್ಯಕ್ರಮವೊಂದಕ್ಕೆ ಸುಮಂತ್ ನ ತಂದೆ ತಾಯಿ ಉಡುಪಿ ಜಿಲ್ಲೆಯ ಅಮಾವಾಸೆ ಬೈಲ್ ತೆರಳಿದ ವೇಳೆ ಕಳ್ಳತನದ ಘಟನೆ ನಡೆದಿದೆ ಎಂದು ಹೊಸನಗರ ಪೊಲೀಸ್…
ಬಟ್ಟೆಮಲ್ಲಪ್ಪ ಸಮೀಪದಲ್ಲಿ ಸಾಲಕ್ಕೆ ಹೆದರಿ ವಿಷ ಸೇವಿಸಿ ರೈತ ಆತ್ಮಹತ್ಯೆ :
ಹೊಸನಗರ: ತಾಲೂಕಿನ ಮಂಡ್ರಿ ಗ್ರಾಮದ ರೈತರೊಬ್ಬರು ಸಾಲಬಾಧೆಯಿಂದ ವಿಷ ಸೇವಿಸಿ ಮೃತಪಟ್ಟಿದ್ದಾರೆ. ನಾಗರಾಜ್(58) ಮೃತ ರೈತ. ಇವರು ಮನೆಯ ಸಮೀಪದ ಕಾಡಿನಲ್ಲಿ ವಿಷ ಸೇವಿಸಿದ್ದರು. ತಕ್ಷಣ ಅಸ್ವಸ್ಥಗೊಂಡ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ. ಜಮೀನು ಅಭಿವೃದ್ಧಿಗೋಸ್ಕರ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಸಾಲ ಮಾಡಿದ್ದರು. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳೆಬಾಗಿಲು ಸಮೀಪ ಮೀನು ಹಿಡಿಯಲು ಹೋದ ವ್ಯಕ್ತಿ ಸಾವು :
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಳೆಬಾಗಿಲು ಸಮೀಪದ ಕಣಿಕೆ ಗ್ರಾಮದಲ್ಲಿ ತೆಪ್ಪದಲ್ಲಿ ಮೀನು ಹಿಡಿಯಲು ಹೋಗಿ ತೆಪ್ಪ ಮಗುಚಿದ ಕಾರಣ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ನಿನ್ನೆ ಸಂಜೆ ವೇಳೆಗೆ ಯಲ್ಲಪ್ಪ ( 55 ) ಮೀನು ಹಿಡಿಯಲು ಕಣಿಕೆ ಗ್ರಾಮದ ಶರಾವತಿ ಹಿನ್ನೀರಿಗೆ ತೆರಳಿದ್ದಾರೆ.ದುರದೃಷ್ಟವಶಾತ್ ಮೀನು ಹಿಡಿಯಲು ಹೋದಾಗ ತೆಪ್ಪ ಮಗುಚಿ ಬಿದ್ದಿದ್ದರಿಂದ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಕಣಿಕೆ ಗ್ರಾಮದ ಬಳಿ ಶವ ತೇಲಿ ಬಂದಿದೆ. ಸಾಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ…
ಸಾಗರ ತಾಲ್ಲೂಕು ಬಿಜೆಪಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಬೈಕ್ ಅಪಘಾತದಲ್ಲಿ ಸಾವು :
ಸಾಗರ ತಾಲೂಕಿನ ಯಳವರಸಿಯ ರೈಲ್ವೆ ಗೇಟ್ ಬಳಿ ಚಲಿಸುತ್ತಿದ್ದ ಬೈಕ್ನಿಂದ ಬಿದ್ದು ಹಿಂಬದಿ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ. ತ್ಯಾಗರ್ತಿ ನಿವಾಸಿ ಹಾಗೂ ಬಿಜೆಪಿ ತಾಲ್ಲೂಕು S.C ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಪರಶುರಾಮ್ ಇಂದು ಬೈಕ್ ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಬೈಕ್ ಚಾಲಕ ಮಂಜುಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳುವಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಜು ಹಾಗೂ ಪರಾಶುರಾಮ್ ಬೈಕ್ ನಲ್ಲಿ ಸಾಗರಕ್ಕೆ ಬರುತ್ತಿದ್ದಾಗ ರೈಲ್ವೆ ಗೇಟ್ ಬಳಿ…