ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ನಡೆದ ಯುವತಿಯ ಅಪಹರಣ ಪ್ರಕರಣ – ಯುವಜೋಡಿಯ ಪೂರ್ವನಿಯೋಜಿತ ಕೃತ್ಯ|kidnap
ಶಿವಮೊಗ್ಗ : ರಾಜ್ಯಾದ್ಯಂತ ಸಂಚಲನ ಸೃಷ್ಠಿ ಮಾಡಿದ್ದ ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಯುವತಿಯನ್ನ ಅಪಹರಿಸಲಾದ ಪ್ರಕರಣ ಪೊಲೀಸ್ ಠಾಣೆಯಲ್ಲಿ ಸುಖಾಂತ್ಯಗೊಂಡಿದೆ. ಘಟನೆ ಹಿನ್ನಲೆ ಏನು? ಸೋಮವಾರ ಬೆಳಗ್ಗೆ ತಾಯಿಯೊಂದಿಗೆ ಸಾಗರಕ್ಕೆ ಪೂಜೆಗೆಂದು ಶಿವಮೊಗ್ಗ ಬಸ್ ನಿಲ್ದಾಣದ ಬಳಿ ತಾಯಿ ಮಗಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಇನ್ನೋವಾ ಕಾರೊಂದರಲ್ಲಿ ಬಂದ ಪತಿ ತನ್ನ ಪತ್ನಿಯನ್ನೇ ಅಪಹರಣ ಮಾಡಿದ್ದಾನೆ ಎಂಬ ಸುದ್ದಿ ಎಲ್ಲಡೆ ಹರಡಿತ್ತು. ಈ ವಿಚಾರವಾಗಿ ದೊಡ್ಡಪೇಟೆ ಠಾಣೆ ಮೆಟ್ಟಿಲು ಹತ್ತಿದ ತಾಯಿ ಪ್ರಕರಣ ದಾಖಲಿಸಿದ್ದರು. ಈ…