ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ನಲ್ಲಿ ಬಸ್ಗೆ ಕಾಯುತ್ತಿದ್ದಾಗ ಮಹಿಳೆಯೊಬ್ಬರ ಚಿನ್ನಾಭರಣ ಕಳುವಾಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ ಅಲ್ಲದೆ ಈ ಸಂಬಂಧ IPC 1860 (U/s-379) ಅಡಿಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ.
ಕಳೆದ 10 ನೇ ತಾರೀಖು ನಡೆದ ಘಟನೆ ಇದಾಗಿದ್ದು, ಈ ಸಂಬಂಧ ಹಿರೇಕರೂರು ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಶಿವಮೊಗ್ಗದಲ್ಲಿರುವ ತಮ್ಮ ಅಕ್ಕನ ಮನೆಗೆ ಬಂದಿದ್ದ ಮಹಿಳೆ ವಾಪಸಾಗಲು KSRTC ಬಸ್ ಸ್ಟ್ಯಾಂಡ್ನಲ್ಲಿ ಬಸ್ ಹತ್ತಲು ಪ್ಲ್ಯಾಟ್ ಫಾರಂ ನಂಬರ್ 10 ರಲ್ಲಿ ಬಸ್ ಗಾಗಿ ಕಾಯುತ್ತಿದ್ದಾರೆ. ಸಮಯ ಸುಮಾರು 03-30 ಗಂಟೆಯಾಗಿತ್ತು. ಬಳಿಕ ಶಿರಾಳಕೊಪ್ಪ-ಶಿರಸಿ ರೂಟ್ ನ ಬಸ್ ಬಂದಿದೆ. ಬಸ್ ಹತ್ತಿ ಟಿಕೆಟ್ ಮಾಡಿಸಲು ಹೊರಟಾಗ ವ್ಯಾನಿಟಿ ಬ್ಯಾಗ್ ಜಿಪ್ ಓಪನ್ ಆಗಿರುವುದು ಕಂಡು ಬಂದಿದೆ. ಅನುಮಾನ ಬಂದು ನೋಡಿದಾಗ, ಮೂರು ಚೈನ್, ಎರಡು ಬಳೆ, ಉಂಗುರ ಸೇರಿ ಮೂರು ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳುವು ಮಾಡಿರುವುದು ಗೊತ್ತಾಗಿದೆ.
ಈ ಸಂಬಂಧ ಕುಟುಂಬಸ್ಥರನ್ನ ವಿಚಾರಿಸಿ ಮಹಿಳೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.
