ಕ್ರೈಂ ಸುದ್ದಿ:
ಕ್ಯಾಂಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರಿಗೆ ತೀವ್ರ ಗಾಯ|accident
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪ ಕ್ಯಾಂಟರ್ ಹಾಗೂ ಕಾರಿನ ನಡುವೆ ಡಿಕ್ಕಿ…!!! ಸಾಗರ ತಾಲೂಕಿನ ಆನಂದಪುರ ಪೊಲೀಸ್ ಸ್ಟೇಷನ್ ಸಮೀಪದಲ್ಲಿ ಕ್ಯಾಂಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಆನಂದಪುರದಿಂದ ಸಾಗರದ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಹಾಗೂ ಸಿದ್ದೇಶ್ವರ ಕಾಲೋನಿಯಿಂದ ಆನಂದಪುರದ ಕಡೆಗೆ ಸಾಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ(KA 17 M 9578) ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಈ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರಿಗೆ ತೀವ್ರವಾದ ಗಾಯವಾಗಿದ್ದು…
ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ತೀರ್ಥಹಳ್ಳಿ ಮೂಲದ ರೋಗಿ|sucide
ಶಿವಮೊಗ್ಗ : ನಗರದ ಪ್ರತಿಷ್ಠಿತ ಮಾನಸಿಕ ಚಿಕಿತ್ಸಾ ಆಸ್ಪತ್ರೆಯಲ್ಲೇ ಮಾನಸಿಕ ಅಸ್ವಸ್ಥ ರೋಗಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಳೆದ 20 ವರ್ಷದಿಂದ ಮಾನಸಿಕ ಅಸ್ವಸ್ಥರಾಗಿದ್ದ ತೀರ್ಥಹಳ್ಳಿ ತಾಲೂಕಿನ ಸಿಂಗನ ಬಿದರಿ ಗ್ರಾಮದ ಶ್ರೀನಿವಾಸ್ ರವರನ್ನು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಹೋದರ ತಿಂಡಿ ತರಲು ಹೊರಗೆ ಹೋದಾಗ ಶ್ರೀನಿವಾಸ್ ಮೇಲೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜ.29 ರಂದು ಆಸ್ಪತ್ರೆಗೆ ದಾಖಲಾದ ಶ್ರೀನಿವಾಸ್ ಆಸ್ಪತ್ರೆಯ ಖಾಲಿ ರೂಂ ಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ….
ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ನವಜಾತ ಶಿಶು ಸಾವು – ಆಸ್ಪತ್ರೆಯ ಗಾಜು ಒಡೆದು ಕುಟುಂಬಸ್ಥರ ಆಕ್ರೋಶ|hospital
ಶಿವಮೊಗ್ಗ: ನಗರದ ಸುಬ್ಬಯ್ಯ ಆಸ್ಪತ್ರೆಯಲ್ಲಿ ಹೆರಿಗೆಯಾದ ಕೆಲವೇ ಗಂಟೆಯಲ್ಲಿ ನವಜಾತ ಶಿಶು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವಿಗೀಡಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಪೂಜಿ ನಗರದ ಭಾಗ್ಯ ಮತ್ತು ನಾಗರಾಜ್ ದಂಪತಿಗಳಿಗೆ ಚೊಚ್ಚಲ ಗಂಡು ಮಗುವಿಗೆ ನಿನ್ನೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ತಕ್ಷಣ ತೂಕಹಾಕಿಲ್ಲ ಮಗುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ವೈದ್ಯರೇ ಸಾವಿಗೆ ಕಾರಣವಾಗಿದ್ದಾರೆ ಎಂದು ಪೋಷಕರು ಮತ್ತು ಪೋಷಕರ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ಸಾವಿಗೆ ಮುಂಚೆ ವೈದ್ಯರು ಉಸಿರಾಟ ತೊಂದರೆ…
ಬಸ್ ಮತ್ತು ಬೈಕ್ ನಡುವೆ ಅಪಘಾತ – ಇಬ್ಬರು ಯುವಕರು ಸ್ಥಳದಲ್ಲೇ ಸಾವು|accident
ಶಿವಮೊಗ್ಗದ ಕುಂಸಿ ಬಳಿಯ ಕೆರೆ ಎರಿ ಮೇಲೆ ಶ್ರೀನಿವಾಸ್ ಬಸ್ ಹಾಗೂ ಬೈಕ್ ನಡುವೆ ರಸ್ತೆ ಅಪಘಾತ ವಾಗಿದ್ದು ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ವರದಿಯಾಗಿದೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುತ್ತಿದ್ದ ಶ್ರೀನಿವಾಸ್ ಬಸ್ ಹಾಗೂ ಹೊಸನಗರ ದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬೈಕ್ ಗಳ ನಡುವೆ ಈ ಘಟನೆ ನಡೆದಿದೆ. ಮೃತಪಟ್ಟ ಯುವಕರು ಶಿವಮೊಗ್ಗದ ಗುರುಪುರ ಮತ್ತು ಇಂದಿರಾ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ. ಮೃತದೇಹವನ್ನು ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಕುಂಸಿ ಠಾಣೆ…
ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಯ ಮೇಲೆ ದಾಳಿ – ಓರ್ವನ ಬಂಧನ|arrest
ಶಿವಮೊಗ್ಗ : ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಯ ಮೇಲೆ ವಿನೋಬ ನಗರ ಪೊಲೀಸರು ದಾಳಿ ನಡೆಸಿ ಎರಡು ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್, ಎರಡು 3 ಕೆಜಿಯ ಸಿಲಿಂಡರ್, ರೀಫಿಲ್ಲಿಂಗ್ ರಾಡು ಪೈಪ್ ಗಳನ್ನ ವಶಪಡಿಸಿಕೊಳ್ಳಲಾಗಿದೆ ಓರ್ವನನ್ನ ಬಂಧಿಸಲಾಗಿದೆ. ವಿನೋಬ ನಗರದ 5 ನೇ ತಿರುವಿನಲ್ಲಿ ಬಸವೇಶ್ವರ ಎಂಟರ್ ಪ್ರೈಸಸ್ ನಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕವಾಗಿ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಜಾಗದ ಮೇಲೆ ಪಿಐ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಸಣ್ಣ ಪೈಪ್ ಮೂಲಕ ದೊಡ್ಡ ಸಿಲಿಂಡರ್ ನಿಂದ…
ಚಿರತೆ ಉಗುರು ಅಕ್ರಮ ಮಾರಾಟಕ್ಕೆ ಯತ್ನ – ಮಾಲು ಸಮೇತ ಆರೋಪಿ ಬಂಧನ|leopard
ಅಕ್ರಮವಾಗಿ ಚಿರತೆಯ ಉಗುರು ಮಾರಾಟ ಮಾಡಲು ಯತ್ನಿಸುತಿದ್ದ ವೇಳೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡ ಘಟನೆ ಶಿವಮೊಗ್ಗದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಬಳಿ ನಡೆದಿದೆ. ಖಚಿತ ಮಾಹಿತಿಯನ್ನು ಆಧರಿಸಿ ಶಿವಮೊಗ್ಗದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಬಳಿ ದಾಳಿ ನಡೆಸಿದ ಪೊಲೀಸ್ ಅರಣ್ಯ ಸಂಚಾರಿ ದಳ ಅಕ್ರಮವಾಗಿ ಚಿರತೆ ಉಗುರನ್ನು ಮಾರಾಟ ಮಾಡಲು ಯತ್ನಿಸುತಿದ್ದ ಸಿದ್ದಾಪುರ ನಿವಾಸಿ ಗಣಪತಿ ಬಿನ್ ಲಕ್ಷಣನಾಯ್ಕ್ ಎಂಬಾತನನ್ನು ಬಂಧಿಸಿ ಆರೋಪಿಯಿಂದ…
ರಿಪ್ಪನ್‌ಪೇಟೆ : ನವೀಕರಣಗೊಳ್ಳುತಿದ್ದ ದೇವಸ್ಥಾನದ ಕಟ್ಟಡ ಧ್ವಂಸ – ಪ್ರಕರಣ ದಾಖಲು|Crime
ರಿಪ್ಪನ್‌ಪೇಟೆ : ಇಲ್ಲಿನ ಮೂಗುಡ್ತಿ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಂಬಂದಿಸಿದ ನವೀಕರಣಗೊಳ್ಳುತಿದ್ದ ದೇವಸ್ಥಾನದ ಕಟ್ಟಡವನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಸಂಬಂದಪಟ್ಟವರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಗುಡ್ತಿ ಗ್ರಾಮದ ಪವನ್ ಕುಮಾರ್ ಎಂಬುವವರು ತಮ್ಮ ಜಾಗದಲ್ಲಿ ಮನೆ ದೇವರಾದ ಪಂಜುರ್ಲಿ ಹಾಯ್ ಗುಳಿ ಮತ್ತು ಮರ್ಲುಚಿಕ್ಕು ದೇವರುಗಳನ್ನು ಹಲವಾರು ವರ್ಷಗಳಿಂದ ಆರಾಧನೆ ಮಾಡಿಕೊಂಡು ಬರುತ್ತಿದ್ದು ಇತ್ತೀಚಿಗೆ ದೇವರ ಅಣತಿಯಂತೆ ನೂತನ ಕಟ್ಟಡವನ್ನು ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಲಾಗುತಿತ್ತು.ಇನ್ನೂ ಹದಿನೈದು…
ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ..!!! ತೀರ್ಥಹಳ್ಳಿಯ ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ,57 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶ
2019 ನೇ ಸಾಲಿನಲ್ಲಿ 26 ವರ್ಷದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ನೊಂದ ಯುವತಿಯ ತಾಯಿ ನೀಡಿದ್ದರು. ಈ ದೂರಿನ ಮೇರೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಪ್ರಕರಣದ ತೀರ್ಪು ಹೊರಬಿದ್ದಿದೆ. 11111 ಸಂಬಂಧ ತನಿಖಾಧಿಕಾರಿಗಳಾದ ಜಿ.ವಿ. ಗಣೇಶಪ್ಪ, ಪೊಲೀಸ್ ವೃತ್ತ ನಿರೀಕ್ಷಕರು, ತೀರ್ಥಹಳ್ಳಿ ವೃತ್ತ (ಹಾಲಿ ನಿವೃತ್ತಿ) ರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ 3ನೇ ಹೆಚ್ಚುವರಿ ಜಿಲ್ಲಾ…
ಯುವಕನ ಮೇಲೆ ಪೊಲೀಸರಿಂದ ಹಲ್ಲೆ – ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ|assault
ಶಿಕಾರಿಪುರ : ಪೊಲೀಸರು ಯುವಕನ ಮೇಲೆ ಹಲ್ಲೆ ನೆಡೆಸಿದ್ದಾರೆ ಎಂದು ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಅರಶಿಣಗೆರೆಯಲ್ಲಿ ನೆಡೆದಿದೆ. ಅರಶಿಣಗೆರೆ ಸಚ್ಚಿನ್ (24) ವಿಷ ಸೇವಿಸಿದ ಯುವಕ. ಕಳೆದ ಎರಡು ದಿನಗಳ ಹಿಂದೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯುವಕನ ಮೇಲೆ ಏಕಾಏಕಿ ಪೊಲೀಸರು ಹಲ್ಲೆ ಮಾಡಿದ್ದೂ ಊರಿನ ಜನರ ಮುಂದೆ ಅವಮಾನ ಸಹಿಸದೆ ಯುವಕ ಸಚಿನ್ ವಿಷ ಸೇವನೆ ಮಾಡಿದ್ದಾನೆ. ವಿಷಯ ತಿಳಿದ ತಕ್ಷಣ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ…
ಅಕ್ರಮ ಮರ ಕಡಿತಲೆ – ಲಕ್ಷಾಂತರ ರೂ ಮೌಲ್ಯದ ಸಾಗುವಾನಿ ನಾಟ ಹಾಗೂ ವಿದ್ಯುತ್ ಚಾಲಿತ ಮರ ಕೊಯ್ಯುವ ಯಂತ್ರ ವಶಕ್ಕೆ|Teak
ಅಕ್ರಮವಾಗಿ ಸಾಗುವನಿ ಮರ ಕಡಿತಲೆ ಮಾಡುತಿದ್ದ ವೇಳೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ನಾಟ ಹಾಗೂ ವಿದ್ಯುತ್ ಚಾಲಿತ ಯಂತ್ರವನ್ನು ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡ ಘಟನೆ ಸಾಗರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ನಡೆದಿದೆ. ಖಚಿತ ಮಾಹಿತಿಯನ್ನು ಆಧರಿಸಿ ಕಲ್ಮನೆ ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸ್ ಅರಣ್ಯ ಸಂಚಾರಿ ದಳ ಅಕ್ರಮವಾಗಿ ಸಾಗುವಾನಿ ಮರವನ್ನು ಕಡಿದು ವಿದ್ಯುತ್ ಚಾಲಿತ ಯಂತ್ರದಿಂದ ಕೊಯ್ಯುತ್ತಿರುವಾಗ ದಾಳಿ ನಡೆಸಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ಲಕ್ಷಾಂತರ…