ರಿಪ್ಪನ್‌ಪೇಟೆ ಪೊಲೀಸರ ಮಿಂಚಿನ ಕಾರ್ಯಾಚರಣೆ : ಹದಿನೈದು ದಿನಗಳೊಳಗೆ ಮನೆ ಕಳ್ಳತನದ ಅರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು|theft

ರಿಪ್ಪನ್‌ಪೇಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ 15 ದಿನಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮಿಂಚಿನ ಕಾರ್ಯಾಚರಣೆಯ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ 
ಸುದರ್ಶನ ಕೆ.ಎನ್  23 ವರ್ಷ, ಆದರ್ಶ ಎಸ್ 23 ವರ್ಷ,  ಮಧುಸೂದನ್ 30 ವರ್ಷ ಇವರನ್ನು ಬಂಧಿಸಿ ಐಪಿಸಿ ಸೆಕ್ಷನ್ 457.380 ರಡಿಯಲ್ಲಿ ಕೇಸ್ ದಾಖಲಿಸಿ ಆರೋಪಿತರಿಂದ ಕಳುವಾದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಇದೇ ತಿಂಗಳು 8 ರಂದು ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಂದ್ರಳ್ಳಿ ಗ್ರಾಮದ ಗೋವಿಂದನಾಯ್ಕ ಎಂಬುವರು ತಮ್ಮ ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕ ಮನೆಮಂದಿಯಲ್ಲ ಮನೆಗೆ ಬೀಗ ಹಾಕಿ ಹೋಗಿರುವುದನ್ನು ನೋಡಿ ಮನೆಯ ಹಿಂಭಾಗದ ಕಡುಮಾಡಿನ ಹಂಚು ಕಿತ್ತು ಇಳಿದು ಮನೆಯಲ್ಲಿದ್ದ ನಗದು ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.

ಕಳ್ಳತನ ಮಾಡಿರುವ ತಂಡದ ಬಗ್ಗೆ ಖಚಿತ ಮಾಹಿತಿಯನ್ನಾದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಎಸ್ ಪಿ ಪ್ರವೀಣ್ ಮತ್ತು ಸಿಬ್ಬಂದಿವರ್ಗ ಪತ್ತೆ ಹಚ್ಚಿ ಕೇವಲ ಹದಿನೈದು ದಿನದೊಳಗೆ ಕಳ್ಳತನದ ಆರೋಪಿಗಳನ್ನು ಪತ್ತೆ ಮಾಡುವುದರೊಂದಿಗೆ ಕಳವು ಮಾಡಲಾದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
 
ರಿಪ್ಪನ್‌ಪೇಟೆ ಠಾಣೆಗೆ  ವರ್ಗಾವಣೆಯಾಗಿ ಬಂದು ಅಧಿಕಾರ ಸ್ವೀಕರಿಸಿ ಕೇವಲ ಒಂದು ವಾರದೊಳಗೆ ಇಲ್ಲಿನ ಪಿಎಸ್‌ಐ ಎಸ್.ಪಿ.ಪ್ರವೀಣ್ ತಮ್ಮ ಕಾರ್ಯದಕ್ಷತೆಯಿಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇವರು 17 ವರ್ಷಗಳ ಕಾಲ ಸೈನಿಕರಾಗಿ ದೇಶ ಸೇವೆ ಮಾಡಿ ಈಗ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಅಗಿ ಸೇವೆ ಸಲ್ಲಿಸುತ್ತಾ ಇರುವ ಎಸ್.ಪಿ.ಪ್ರವೀಣ್ ಇವರು ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಹಿನ್ನೇಲೆಯಲ್ಲಿ ರಕ್ತದಾನ ಶಿಬಿರ.ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗೂ ಪಾರ್ಕಿಂಗ್ ಬಗ್ಗೆ ಜನಜಾಗೃತಿ ಸೇರಿದಂತೆ ಅನೇಕ ಜನಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಿ ಜನರ ವಿಶ್ವಾಸ ಗಳಿಸುವತ್ತಾ ಸಾಗಿದ್ದಾರೆ.

ಅರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಕ್ರೈಂ ಸಿಬ್ಬಂದಿಗಳಾದ ಶಿವಕುಮಾರ್, ಉಮೇಶ್, ಮಧುಸೂದನ್ ಹಾಗೂ ಇನ್ನಿತರ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು. 

Leave a Reply

Your email address will not be published. Required fields are marked *