ತೀರ್ಥಹಳ್ಳಿ ತಾಲೂಕಿನಲ್ಲಿ ಅಶ್ಲೀಲ ವಿಡಿಯೋ ,ವೇಶ್ಯಾವಾಟಿಕೆ ಜಾಲ ಬಯಲು ಬಳಿಕ ಇದೀಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆಮಿಷವೊಡ್ಡಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಹನಿಟ್ರ್ಯಾಪ್ ಎಂದು ಹೆಸರಿಡಲಾಗಿದ್ದು ಈ ಪ್ರಕರಣದಲ್ಲಿ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನಲೆ :
ಅರಣ್ಯ ಇಲಾಖೆಯ ಅಧಿಕಾರಿಗೆ ಕರೆ ಮಾಡಿದ ಮಹಿಳೆಯೊಬ್ಬರು ನೀವು ನಮ್ಮ ಸ್ಟುಡಿಯೋ ದಲ್ಲಿ ಫೋಟೊ ತೆಗೆಸಿಕೊಂಡಿದ್ದು ಫೋಟೋ ತೆಗೆದುಕೊಂಡು ಹೋಗಿ ಎಂದು ಕರೆ ಮಾಡಿರುತ್ತಾಳೆ.ಈ ಕರೆ ಅಧಿಕಾರಿ ಮತ್ತು ಮಹಿಳೆಯ ಜೊತೆ ಸಲುಗೆಯಿಂದ ಇರುವಂತೆ ಮಾಡಿದೆ.
ಸಲುಗೆ ಹೆಚ್ಚಾಗಿ ಮಹಿಳೆಯೊಂದಿಗೆ ಮನೆಯಲ್ಲಿ ಇದ್ದಾಗ ಈ ಮಹಿಳೆಯ ಮತ್ತೊಂದು ಗ್ಯಾಂಗ್ ಬಂದು ಕದ ತಟ್ಟಿದ್ದಾರೆ. ಆಗ ಅಧಿಕಾರಿಯ ನಗ್ನ ಫೋಟೊ ತೆಗೆದು ಅಧಿಕಾರಿಗೆ 15 ಲಕ್ಷದ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.ಈ ಗ್ಯಾಂಗ್ ಹಂತ ಹಂತವಾಗಿ ಅಧಿಕಾರಿಗಳಿಂದಹಣ ಪೀಕಿದ್ದಾರೆ. ಗ್ಯಾಂಗ್ ನ ಹಣದ ವಸೂಲಿಬಾಜಿ ಅಧಿಕಾರಿಯನ್ನು ಜಿಗುಪ್ಸೆಗೆ ಒಳಪಡಿಸಿದೆ.
ಕೊನೆಗೆ ಬೇಸತ್ತ ಅಧಿಕಾರಿ ತೀರ್ಥಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಧನುಷ್, ಅನ್ಸರ್, ಕಾರ್ತಿಕ್, ಪುಂಡ, ಸಿದ್ದಿಕಿ ಮೋಹಿತ್ ಗೌಡ ಹಾಗೂ ಅನನ್ಯ ಯಾನೆ ಸೌರಭ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ಅನನ್ಯ, ಮೋಹಿತೆ ಗೌಡ ಹಾಗೂ ಸಿದ್ದಿಕ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಏಳು ಜನ ಆರೋಪಿತರಲ್ಲಿ ಮೂವರು ಬಂಧಿತರಾಗಿದ್ದು ಉಳಿದ ನಾಲ್ವರು ತಲೆಮರೆಸಿಕೊಂಡಿದ್ದಾರೆ.