ಕ್ರೈಂ ಸುದ್ದಿ:
ದನದ ಕುತ್ತಿಗೆ ಕಡಿದು ತುಂಗಾ ನದಿಗೆ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು|thirthahalli news
ತೀರ್ಥಹಳ್ಳಿ : ಇಲ್ಲಿನ ಚಕ್ರತೀರ್ಥದಲ್ಲಿ ಕಿಡಿಗೇಡಿಗಳು ಹಸುವಿನ ಕತ್ತನ್ನು ಕಡಿದು ಬಳಿಕ ರುಂಡವನ್ನು ತುಂಗಾ ನದಿಗೆ ಎಸೆದು ಪರಾರಿ ಆಗಿರುವ ಘಟನೆ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಕ್ಷೇತ್ರದಲ್ಲಿ ವಿಕೃತಿ ಮೆರೆದಿದ್ದು, ಸ್ಥಳೀಯರು ದುಷ್ಕೃತ್ಯಕ್ಕೆ ಕಿಡಿಕಾರಿದ್ದಾರೆ. ಸ್ಥಳೀಯರು ಸ್ನಾನ ಮಾಡಲು ಹೊಳೆಗೆ ಇಳಿದಾಗ ವಿಷಯ ಬೆಳಕಿಗೆ ಬಂದಿದ್ದು ತುಂಗಾನದಿಯಲ್ಲಿ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಚಕ್ರತೀರ್ಥದಲ್ಲಿ ಈ ಅಮಾನವೀಯ ಘಟನೆ ಜರುಗಿದೆ. ದನದ ರುಂಡವನ್ನು ಬಿಟ್ಟು ಮಾಂಸ ತೆಗೆದುಕೊಂಡು ಹೋಗಲಾಗಿದೆ. ಇದು ತೀರ್ಥಹಳ್ಳಿ ಪೊಲೀಸರ ವೈಫಲ್ಯ…
ಬಸ್ ಹಾಗೂ ಬೊಲೆರೊ ಪಿಕಪ್ ನಡುವೆ ಮುಖಾಮುಖಿ ಡಿಕ್ಕಿ – ಎರಡು ತುಂಡಾದ ಬೊಲೆರೊ ಪಿಕಪ್,ಮೂವರಿಗೆ ಗಾಯ|accident
ಖಾಸಗಿ ಬಸ್ ಹಾಗೂ ಬೊಲೆರೊ ಪಿಕಪ್ ನಡುವೆ ಮುಖಮುಖಿ ಡಿಕ್ಕಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಪ್ಪರಗುಂಡಿ ಸೇತುವೆ ಬಳಿ ನಡೆದಿದೆ. ಶರ್ಮಣ್ಯಾವತಿ ನರ್ಸರಿ ಹತ್ತಿರ ಶಿವಮೊಗ್ಗದಿಂದ ಕುಂದಾಪುರಕ್ಕೆ ಕಡೆಗೆ ಹೋಗುತಿದ್ದ ದುರ್ಗಾಂಬ ಬಸ್ಸು ಹಾಗೂ ಹೊಸನಗರದಿಂದ ರಿಪ್ಪನ್ ಪೇಟೆಗೆ ಹೊರಟ ಬೊಲೆರೋ ಪಿಕಪ್ ಗಾಡಿ ನಡುವೆ ಮುಖಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೊಲೆರೊ ಪಿಕಪ್ ವಾಹನ ಎರಡು ತುಂಡಾಗಿದೆ. ಬೊಲೆರೊ ಪಿಕಪ್ ನಲ್ಲಿದ್ದ ಮೂವರು ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗಿದ್ದು ಹೊಸನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗುತಿದ್ದು…
ಸಾಗರದಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನ – ಮಾರಕಾಸ್ತ್ರಗಳ ಸಮೇತ ಆರೋಪಿಗಳ ಬಂಧನ|drugs
ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿರುವ ಡ್ರಗ್ಸ್ ದಂಧೆ ಇದೀಗ ಮಲೆನಾಡಿಗೂ ವ್ಯಾಪಿಸಿದೆ. ಮಂಗಳೂರಿನಿಂದ ಮಾದಕ ದ್ರವ್ಯಗಳನ್ನು ತಂದು ಸಾಗರದಲ್ಲಿ ಮಾರಲು ಮಂದಾಗಿದ್ದ ತಂಡವೊಂದನ್ನು ಸಾಗರ ನಗರ ಠಾಣೆ ಪೊಲೀಸರು ಹತ್ತಿಕ್ಕಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಇದರ ಹಿಂದಿರುವ ಒಂದು ಕೊಲೆ ಯತ್ನದ ಪ್ಲ್ಯಾನ್ ಕೂಡಾ ಬಯಲಾಗಿದೆ. ಮಂಗಳೂರಿನಿಂದ ಮಾದಕ ವಸ್ತು ತಂದು ಸಾಗರದಲ್ಲಿ ಮಾರಾಟಕ್ಕೆ ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಾಗರದ ಅಣಲೆಕೊಪ್ಪ ಬಳಿ ಪೊಲೀಸರು ದಾಳಿ ಸಂಘಟಿಸಿದ್ದರು. ಈ ವೇಳೆ, ಸೃಜನ್ ಶೆಟ್ಟಿ, ತಿಲಕ್…
ರಿಪ್ಪನ್‌ಪೇಟೆಯ ಯೋಧ ಸಂದೀಪ್ ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದಾಗ ಸಾವು|Rpet
ರಿಪ್ಪನ್‌ಪೇಟೆ : ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಮಣಿಪುರದ ಅಸ್ಸಾಂ ರೈಫಲ್ಸ್ ನಲ್ಲಿ ಕಾರ್ಯ ನಿರ್ವಹಿಸುತಿದ್ದ ಸಂದೀಪ್ ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರಾದ ವಿನೋದಮ್ಮ ರವರ ಪುತ್ರರಾಗಿದ್ದು ಕಳೆದ 2 ವರ್ಷದಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದರು. ನಕ್ಸಲರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಸಂದೀಪ್ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದೆ ಆದರೆ ಬಲ್ಲ ಮೂಲಗಳ ಪ್ರಕಾರ ಇಂದು ಮುಂಜಾನೆ ತಾನು ಕರ್ತವ್ಯ ನಿರ್ವಹಿಸುತಿದ್ದ ಪ್ರದೇಶದಲ್ಲಿ…
ಜೀವನದಲ್ಲಿ ಜಿಗುಪ್ಸೆಗೊಂಡ ರಿಪ್ಪನ್‌ಪೇಟೆಯ ಆಟೋ ಚಾಲಕ ಕಳೆನಾಶಕ ಸೇವಿಸಿ ಸಾವು|crime news
ರಿಪ್ಪನ್‌ಪೇಟೆ : ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳಕೋಡು ಗ್ರಾಮದಲ್ಲಿ ನಡೆದಿದೆ. ಬೆಳಕೋಡು ನಿವಾಸಿ ಬಿನೋಯ್ ಸ್ಕರಿಯಾ(52) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ರಿಪ್ಪನ್‌ಪೇಟೆ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಆಟೋ ಚಾಲಕನಾಗಿದ್ದ ಬಿನೋಯ್ ಸ್ಕರಿಯಾ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.ಆಟೋ ಓಡಿಸುವುದನ್ನು ಒಂದು ವರ್ಷದಿಂದ ನಿಲ್ಲಿಸಿದ್ದರು.ಅವರು ನಿನ್ನೆ ರಾತ್ರಿ ಬೆಳಕೋಡು ಗ್ರಾಮದಲ್ಲಿರುವ ಮನೆಯಲ್ಲಿ ಕಳೆನಾಶಕ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು. ಈ ವೇಳೆ…
ಹಂದಿ ಅಣ್ಣಿ ಕೊಲೆ ಆರೋಪಿ ಆಂಜನೇಯ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಈ ಸುದ್ದಿ ನೋಡಿ|crime news
ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ನಡೆದಿದ್ದ ಡಬ್ಬಲ್ ಅಟ್ಯಾಕ್ ಸಂಬಂಧ ದಾವಣಗೆರೆ ಪೊಲೀಸರು ಆಂಧ್ರದ ಗುಂಟೂರಿನ ರೈಲ್ವೆ ಸ್ಟೇಷನ್ನಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ಮೂಲಗಳಿಂದಲೇ ಲಭ್ಯವಾಗಿತ್ತು. ಆದರೆ , ಈ ಪ್ರಕರಣ ಇದೀಗ ರೋಚಕ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸ್ ಹಾಗೂ ಭೂಗತ ಲೋಕದ ನಡುವಿನ ಮೈಂಡ್ ಗೇಮ್ ಆಗಿ ಬದಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ದಾವಣೆಗೆರೆ ಪೊಲೀಸ್ ಮೂಲಗಳಿಂದ ಮಾಹಿತಿಯೊಂದು ಲಭ್ಯವಾಗಿದ್ದು, ಡಬ್ಬಲ್ ಅಟ್ಯಾಕ್ನ ಮಾಸ್ಟರ್ ಮೈಂಡ್ ತಮಿಳ್ ರಮೇಶ್ ಅರೆಸ್ಟ್ ಆಗಿಲ್ಲ…
ರಿಪ್ಪನ್‌ಪೇಟೆ : ಜೀವನದಲ್ಲಿ ಜಿಗುಪ್ಸೆಗೊಂಡ ವೀಳ್ಯದೆಲೆ ವ್ಯಾಪಾರಿ ಆತ್ಮಹತ್ಯೆ|crime
ರಿಪ್ಪನ್‌ಪೇಟೆ : ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ಅಕೇಶಿಯ ಪ್ಲಾಂಟೇಷನ್ ನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಣಬಂದೂರು ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೆದ್ದಾರಿ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗೂಡ್ತಿ ಗ್ರಾಮದ ವಾಸಿ, ನಾಗರಾಜ್ (52) ಎಂಬ ವ್ಯಕ್ತಿಯು ಅನಾರೋಗ್ಯ ಕಾರಣದಿಂದ ಮನನೊಂದು ತಮ್ಮ ಮನೆಯ ಸಮೀಪದ ಪ್ಲಾಂಟೇಷನ್ ನಲ್ಲಿ ಇಂದು ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಅನಾರೋಗ್ಯ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ…
ತುಂಗಾ ಸೇತುವೆಯಿಂದ ಹೊಳೆಗೆ ಹಾರಲು ಮುಂದಾದ ಯುವ ಜೋಡಿ – ಯುವತಿ ಬಚಾವ್ ,ಯುವಕ ಗಂಭೀರ|tunga
ಶಿವಮೊಗ್ಗ ನಗರದ ಹಳೆ ಸೇತುವೆಯ ಬಳಿಯಲ್ಲಿ ಯುವ ಜೋಡಿಯೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನೂ ಈ ವೇಳೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ. ಯುವ ಜೋಡಿಗಳು ಹಳೆಸೇತುವೆ ಬಳಿ ಬಂದು ಕೆಲ ಹೊತ್ತು ಮಾತನಾಡ್ತಿದ್ದ ಜೋಡಿ ಬಳಿಕ ಬ್ರಿಡ್ಜ್ನಿಂದ ನದಿಗೆ ಹಾರಲು ಮುಂದಾಗಿದ್ದನ್ನ ಅಲ್ಲಿದ್ದವರು ಗಮನಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಯುವಕ ನದಿಗೆ ಹಾರಿದ್ದಾನೆ. ಯುವತಿಯನ್ನು ಅಲ್ಲಿದ್ದವರು ಹಿಡಿದು ರಕ್ಷಿಸಿದ್ದಾರೆ. ಇನ್ನೂ ನದಿಗೆ ಹಾರಿದ ಯುವಕ ನೇರವಾಗಿ ಹೊಳೆಯ ಬಂಡೆಯ ಮೇಲೆ ಬಿದ್ದಿದ್ದ….
ರಿಪ್ಪನ್‌ಪೇಟೆ : ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಯಾರು ಇಲ್ಲದ ದೇವಸ್ಥಾನದಲ್ಲಿ ತಾಳಿ ಕಟ್ಟಿದ ಯುವಕ – ಪೋಕ್ಸೋ ಪ್ರಕರಣ ದಾಖಲು|pocso
ರಿಪ್ಪನ್‌ಪೇಟೆ : ಇತ್ತೀಚೆಗೆ ಶಿವಮೊಗ್ಗ ಜಿಲ್ಲಾದ್ಯಂತ ಪೋಕ್ಸೋ ಪ್ರಕರಣಗಳು ಹೆಚ್ಚುತಿದ್ದು ಅದರಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದಲ್ಲಿ ಹಲವಾರು ಪೋಕ್ಸೋ ಪ್ರಕರಣ ದಾಖಲಾಗುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ನಂತರ ಲೈಂಗಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿ ಮದುವೆಯಾದ ಯುವಕನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ಘಟನೆ ವರದಿಯಾಗಿದೆ. ನೊಂದ ಬಾಲಕಿಯ ದೂರಿನ ವಿವರ : ನನ್ನ ಊರಿನ ಪರಿಚಯಸ್ಥ ಯುವಕ ಸುಮಾರು ಮೂರ್ನಾಲ್ಕು…
ರಿಪ್ಪನ್‌ಪೇಟೆ : ಕೋಳಿ ಜೂಜಾಟದ ಅಡ್ಡೆ ಮೇಲೆ ಪೊಲೀಸರ ದಾಳಿ|Raid
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಪಂ ವ್ಯಾಪ್ತಿಯ ಆನೆಗದ್ದೆ ಗ್ರಾಮದ ಆನೆಗದ್ದೆ ಗುಡ್ಡದಲ್ಲಿ ಕೋಳಿ ಅಂಕ ನಡೆಸುತ್ತಿರುವ ಮಾಹಿತಿ ಆಧರಿಸಿ ಪಟ್ಟಣದ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ. ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ನಡೆಸುತ್ತಿರುವ ಕುರಿತು ಬಂದ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು.ಈ ಸಂದರ್ಭ ಜೂಜಾಟದಲ್ಲಿ ಭಾಗಿಯಾಗಿದ್ದ 10 ರಿಂದ 12 ಆರೋಪಿಗಳು ಪರಾರಿಯಾಗಿದ್ದು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಕೋಳಿ ಜೂಜಾಟ ನಡೆಸುತ್ತಿರುವ ಖಚಿತ ಮಾಹಿತಿಯನ್ನಾಧರಿಸಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆ…