ಕ್ರೈಂ ಸುದ್ದಿ:
ಪತಿಯ ಅತಿಯಾದ ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.!!kuruvalli
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿಯ ಸಮೀಪ ಕೆರೆಗೆ ಹಾರಿ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಶೃತಿ (36) ಎಂಬ ಯುವತಿ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ ಎಂದು ತಿಳಿದುಬಂದಿದೆ. ಈಕೆ ಕುರುವಳ್ಳಿಯಲ್ಲಿ ಪುಟ್ಟದೊಂದು ಮನೆ ಮಾಡಿಕೊಂಡಿದ್ದು, ಈಕೆಗೆ ನಾಲ್ಕು ಮಂದಿ ಅವಳಿ ಜವಳಿ ಮಕ್ಕಳು ಇವೆ. ಪತಿಯ ಅತಿಯಾದ ಸಾಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಶೃತಿ ಧರ್ಮಸ್ಥಳ ಸಂಘದ ಕಾರ್ಯಕರ್ತೆಯಾಗಿ ಮುತ್ತೂರು ಹೋಬಳಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಅತ್ಯಂತ…
ಹೊಸನಗರ : ಮೇಯಲು ಹೋದ ಹಸುವಿನ ಕಾಲು ಕಡಿದ ದುಷ್ಕರ್ಮಿಗಳು – ದೂರು ದಾಖಲು|hosanagara
ಹೊಸನಗರ ತಾಲೂಕಿನ ನಿಟ್ಟೂರಿನ ಗೌರಿಕೆರೆ ಬಳಿಯಲ್ಲಿ ಹಸುವೊಂದರ ಕಾಲನ್ನು ಕಡಿದು ಹಾಕಿರುವ ಬಗ್ಗೆ ವರದಿಯಾಗಿದೆ. ದುಷ್ಕರ್ಮಿಗಳ ಕೃತ್ಯ ಇದಾಗಿದ್ದು, ಸಿಡ್ಲಕುಣಿ ಸುಭಾಷ್ ಎಂಬುವವರಿಗೆ ಸೇರಿದ ಹಸುವು ಕಾಲಿಗೆ ಕತ್ತಿಯಿಂದ ಏಟು ತಿಂದು ನಡೆಯಲಾಗದೇ ನರಳಾಡುತ್ತಿದೆ. ಘಟನೆಯಲ್ಲಿ ಕಾಲಿನ ನರ ಕಟ್ ಆಗಿದ್ದರಿಂದ ದನ ನೆಲದಿಂದ ಏಳುತ್ತಿಲ್ಲ. ಮಲೆನಾಡಲ್ಲಿ ರಾಸುಗಳನ್ನ ಬೆಳಗ್ಗೆ ಹೊರಗೆ ಅಟ್ಟಲಾಗುತ್ತದೆ. ಅವುಗಳು ಮೇವು ಮುಗಿಸಿ ಸಂಜೆ ಮನೆಗಳಿಗೆ ವಾಪಸ್ ಆಗುತ್ತವೆ.ಸಂಜೆಯಾದರು ಹಸು ಹಟ್ಟಿಗೆ ವಾಪಾಸು ಬರದ ಹಿನ್ನೆಲೆಯಲ್ಲಿ ಸುಭಾಷ್ರವರು ಅದನ್ನು ಹುಡುಕಿಕೊಂಡು ಹೋಗಿದ್ದಾರೆ. ಈ…
ಕಾರು ಡಿಕ್ಕಿಯಾಗಿ ಪಾದಚಾರಿ ಸಾವು – ಚಾಲಕ ಪರಾರಿ|accident
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಶಿವಕುಮಾರ್ (56) ಮೃತ ದುರ್ದೈವಿ. ಪೊಲೀಸರು ಹಿಟ್ ಅಂಡ್ ರನ್ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಶಿವಕುಮಾರ್ ಅವರು ಆನಂದಪುರದಿಂದ ಹೊರಟು ಯಡೆಹಳ್ಳಿಯ ಪೆಟ್ರೋಲ್ ಬಂಕ್‌ನಿಂದ ಸ್ವಲ್ಪವೇ ದೂರದಲ್ಲಿದ್ದ ತಮ್ಮ ಮನೆಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಶಿವಕುಮಾರ್ ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು….
ರಾತ್ರಿ ಅಡಿಗೆ ಯಾಕೆ ಮಾಡಲಿಲ್ಲವೆಂದು ಇಬ್ಬರಿಂದ ಹಲ್ಲೆ – ಕುಪಿತಗೊಂಡ ಅಡಿಗೆಯವ ಮಧ್ಯರಾತ್ರಿ ಇಬ್ಬರ ತಲೆ ಒಡೆದು ಕೊಂದೇ ಬಿಟ್ಟ!!!!!
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಿರ್ಮಾಣ ಹಂತದ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ ಜೋಡಿ ಕೊಲೆಯಾಗಿದ್ದು ಹಣಕ್ಕಾಗಿ ಕೊಲೆಯಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಈ ಘಟನೆ ಬಗ್ಗೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ನೀಡಿದ ಮಾಹಿತಿ ಅಚ್ಚರಿಗೆ ಕಾರಣವಾಗಿದೆ ಮಧ್ಯಾಹ್ನದ ಅಡಿಗೆಯನ್ನು ಸಂಜೆ ನೀಡಿದ್ದಕ್ಕೆ ರಾಜಣ್ಣ ಎಂಬಾತನಿಗೆ ಇಬ್ಬರು ವ್ಯಕ್ತಿಗಳು ಮನಸ್ಸೊ ಇಚ್ಚೆ ಥಳಿಸಿದ್ದಾರೆ ಇದರಿಂದ ಕುಪಿತಗೊಂಡ ಆರೋಪಿ ರಾಜಣ್ಣ ಮಧ್ಯರಾತ್ರಿ ಹಲ್ಲೆ ಮಾಡಿದ್ದ ಇಬ್ಬರನ್ನು ಅಮಾನುಷವಾಗಿ ಹತ್ಯೆಗೈದಿದ್ದಾನೆ. ಘಟನೆಯ ವಿವರ : ತೀರ್ಥಹಳ್ಳಿಯ ವಿಶ್ವಕರ್ಮ ಭವನ ನಿರ್ಮಾಣ…
ತೀರ್ಥಹಳ್ಳಿಯಲ್ಲಿ ಜೋಡಿ ಕೊಲೆ – ಓರ್ವನ ಬಂಧನ|murder
ತೀರ್ಥಹಳ್ಳಿ ತಾಲ್ಲೂಕಿನ, ಕುರುವಳ್ಳಿ ಪುತ್ತಿಗೆ ಮಠದ ಬಳಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಇಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸ್ತಿದ್ಧಾರೆ. ಮೂಲಗಳ ಪ್ರಕಾರ, ಕೊಲೆಯಾದವರು ದಾವಣಗೆರೆ ಜಿಲ್ಲೆ ಕಾರ್ಮಿಕರು ಎನ್ನಲಾಗಿದೆ. ನಿನ್ನೆ ರಾತ್ರಿ ನಡೆದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಕೆಲವೇ ದಿನದಲ್ಲಿ ಸಮುದಾಯ ಭವನ ಉದ್ಘಾಟನೆಯಾಗಬೇಕಿದ್ದು, ಅದರ ನಡುವೆ ಸಮುದಾಯದ ಭವನದಲ್ಲಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಮೂವರು ಕಾರ್ಮಿಕರ…
ರಿಪ್ಪನ್‌ಪೇಟೆ : ಆಟೋ ಮತ್ತು ಬೈಕ್‌ನಡುವೆ ಭೀಕರ ಅಪಘಾತ – ಓರ್ವನ ಸ್ಥಿತಿ ಗಂಭೀರ : ರಕ್ತದ ಮಡುವಿನಲ್ಲಿ ಸಹಾಯಕ್ಕೆ ಅಂಗಲಾಚಿದ ಗಾಯಾಳು|Accident
ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆ ಬಳಿ ಬೈಕ್ ಹಾಗೂ ಲಗೇಜ್ ಆಟೋ ಭೀಕರ ಅಪಘಾತವಾಗಿ ಒಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಬಳಿ ಲಗೇಜ್ ಆಟೋ (KA-15 A 4679) ಹಾಗೂ ಹೀರೋ ಹೋಂಡಾ ಸ್ಪೆಂಡರ್ (KA 01 S 8450) ಬೈಕ್ ಗಳ ನಡುವೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಗವಟೂರು ನಿವಾಸಿ ಗಣೇಶ್ (46) ರವರಿಗೆ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ.ಅಪಘಾತ…
ಸಿಟಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ – ರೊಚ್ಚಿಗೆದ್ದ ಜನರಿಂದ ಬಸ್ ಗ್ಲಾಸ್ ಗೆ ಕಲ್ಲು ತೂರಾಟ|Accident
ದ್ವಿಚಕ್ರ ವಾಹನ ಮತ್ತು ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರನಿಗೆ ಗಾಯಗಳಾಗಿರುವ ಘಟನೆ ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ನಡೆದಿದೆ. ಸಿಟಿ ಬಸ್ಸೊಂದು ಸಿಗ್ನಲ್ ಜಂಪ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ನಡೆದಿದೆ. ಘಟನೆಯಿಂದಾಗಿ ಬೈಕ್ ಸವಾರ ತೀವ್ರ ತರವಾಗಿ ಗಾಯಗೊಂಡಿದ್ದಾನೆ. ಸ್ಥಳದಲ್ಲಿದ್ದ ಆಕ್ರೋಶಿತ ಯುವಕರು ಸಿಟಿ ಬಸ್ಸಿನ ಗಾಜನ್ನು ಒಡೆದು ಹಾಕಿದ್ದಾರೆ. ಅಲ್ಲದೆ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾರೆ. ಇದರಿಂದ ಮಹಾವೀರ ವೃತ್ತದಲ್ಲಿ ಕೆಲ ಕಾಲ ಟ್ರಾಫಿಕ್…
ಕಾರು ಅಪಘಾತ – ಹೊಸನಗರ ಕಾಂಗ್ರೆಸ್ ಮುಖಂಡ ನಾಗರಾಜ್ ಗೌಡ ಸ್ಥಳದಲ್ಲೇ ಸಾವು|accident
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ಕೋಡೂರು ಸಮೀಪದ ತುರುಕೋಡು ನಾಗರಾಜ್ ಗೌಡ (55) ಎಂದು ಗುರುತಿಸಲಾಗಿದೆ. ಶಿಕಾರಿಪುರದಿಂದ ವಾಪಾಸ್ ಆಗುವ ವೇಳೆ ಇಂದು ಮಧ್ಯಾಹ್ನ ಗೌತಮಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಚಾಲಕ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಹೊಸನಗರ ತಾಲೂಕಿನ ಮುಂಬಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯ…
ಹೊಸನಗರ : ಬಾಲಕಿಯನ್ನು ಅಡ್ಡಗಟ್ಟಿ ನಂಬರ್ ಕೊಡುವಂತೆ ಕಿರುಕುಳ – ಇಬ್ಬರು ವಶಕ್ಕೆ|Crime News
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪೊಲೀಸ್ ಸ್ಟೇಷನ್ ಒಂದರಲ್ಲಿ ಅಪ್ತಾಪ್ತೆಯೊಬ್ಬಳನ್ನ ಅಡ್ಡಗಟ್ಟಿ ಫೋನ್ ನಂಬರ್ ಕೇಳಿ ಕಿರುಕುಳ ನೀಡಿದ ಆರೋಪ ಸಂಬಂಧ ಕೇಸ್ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಕೇರಳದಲ್ಲಿ ಓದುತ್ತಿರುವ ಅಪ್ರಾಪ್ತೆಯೊಬ್ಬರು ಹೊಸನಗರ ತಾಲ್ಲೂಕಿನ ಗ್ರಾಮವೊಂದರಲ್ಲಿರುವ ತಮ್ಮ ಅಜ್ಜಿ ಮನೆಗೆ ಬಂದಿದ್ದಾರೆ. ಕಳೆದ ಭಾನುವಾರ ಚರ್ಚ್ವೊಂದರಲ್ಲಿ ಪ್ರಾರ್ಥನೆ ಮುಗಿಸಿ ವಾಪಸ್ ಆಗುವಾಗ ಇಬ್ಬರು ಆಕೆಯನ್ನು ಎರಡು ಬಾರಿ ಅಡ್ಡಗಟ್ಟಿ ಮೊಬೈಲ್ ನಂಬರ್ ಕೇಳಿದ್ಧಾರೆ. ಅಲ್ಲದೆ ಬೈಕ್‌ನಲ್ಲಿ ಬಂದ ಆರೋಪಿಗಳು ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ…
Crime News | ಸಾಗರದಲ್ಲಿ ಲಕ್ಷಾಂತರ ರೂ ಮೌಲ್ಯದ ಸಿಗರೇಟ್ ಕಳ್ಳತನ..!!!
ಶಿವಮೊಗ್ಗ ಜಿಲ್ಲೆ ಸಾಗರ ಟೌನ್ನಲ್ಲಿ ಬರೋಬ್ಬರಿ 17 ಲಕ್ಷ ರೂಪಾಯಿಯ ಸಿಗರೇಟ್ ಕಳ್ಳತನವಾಗಿದೆ. ಈ ಸಂಬಂಧ ಸಾಗರ ಟೌನ್ ಪೊಲೀಸ್ ಸ್ಟೇಷನ್ನಲ್ಲಿ ದೂರು ಕೂಡ ದಾಖಲಾಗಿದೆ. ಇಲ್ಲಿನ ಸೊರಬ ರಸ್ತೆಯ ಯುನೈಟೆಡ್ ಟ್ರೇಡಿಂಗ್ ಕಂಪೆನಿಯಲ್ಲಿ ಭಾನುವಾರ ರಾತ್ರಿ ₹17 ಲಕ್ಷ ಮೌಲ್ಯದ ಸಿಗರೇಟ್ ಬಂಡಲ್‌ಗಳು ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಸಾಗರ ತಾಲ್ಲೂಕಿನ ವಿವಿಧ ಅಂಗಡಿಗಳಿಗೆ ಸಿಗರೇಟ್ ಪೂರೈಕೆ ಮಾಡುವ ಕೆಲಸಮಾಡುತ್ತಿರುವ ಈ ಅಂಗಡಿಯಲ್ಲಿ ರೋಲಿಂಗ್ ಶೆಟ್ಟರ್ ಒಡೆದು ಕಳ್ಳತನ ಮಾಡಲಾಗಿದೆ. ಶೆಟರ್ ಮುರಿದು ಒಳಕ್ಕೆ ಬಂದಿರುವ ಕಳ್ಳರು,…