ಜಿಲ್ಲಾ ಸುದ್ದಿ:
ಉಗ್ರರ ದಾಳಿ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ
ಉಗ್ರರ ದಾಳಿ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ನಿರ್ದಯವಾಗಿ ಹತ್ಯೆಗೈದ ಉಗ್ರರ ಪೈಶಾಚಿಕ ಕೃತ್ಯವನ್ನು ಖಂಡಿಸಿ ಶಿವಮೊಗ್ಗದಲ್ಲಿ ಇಂದು ಸರಣಿ ಪ್ರತಿಭಟನೆಗಳು ನಡೆದವು. ಜಿಲ್ಲಾ ವಕೀಲ ಸಂಘ ಹಾಗೂ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಅವರು ಪ್ರತಿಭಟನೆ ನಡೆಸಿದರೆ, ಜಿಲ್ಲಾ ಕಾಂಗ್ರೆಸ್ನ ಉತ್ತರ ಬ್ಲಾಕ್ನ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಸಲಾಯಿತು. ಜಿಲ್ಲಾ ವಕೀಲರ ಸಂಘವು ಜಿಲ್ಲಾ ವಕೀಲರ ಭವನದಿಂದ ಬಾಲರಾಜ್ ರಸ್ತೆಯಲ್ಲಿ ಸಾಗಿ ಮಹಾವೀರ ವೃತ್ತದ ಮೂಲಕ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟಿಸಿದರು….
RIPPONPETE | ಬಸ್ ಮೇಲೆ ಬಿದ್ದ ಬೃಹತ್ ಮರ – ಇಬ್ಬರಿಗೆ ಗಾಯ
RIPPONPETE | ಬಸ್ ಮೇಲೆ ಬಿದ್ದ ಬೃಹತ್ ಮರ – ಇಬ್ಬರಿಗೆ ಗಾಯ ರಿಪ್ಪನ್ ಪೇಟೆ : ಬಸ್ ಮೇಲೆ ಮರ ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಪಟ್ಟಣದ ಸಾಗರ ರಸ್ತೆಯ ಹೈಸ್ಕೂಲ್ ಮುಂಭಾಗದಲ್ಲಿ ನಡೆದಿದೆ. ಶಿಕಾರಿಪುರದ ಶ್ರುತಿ (34) ಹಾಗೂ ರಿಪ್ಪನ್ ಪೇಟೆಯ ನಿವಾಸಿ ಸತೀಶ್ ಬಿನ್ ಶಿವಾಜಿರಾವ್ (49) ರವರಿಗೆ ಗಾಯಗಳಾಗಿವೆ. ಸಾಗರದಿಂದ ತೀರ್ಥಹಳ್ಳಿಗೆ ಪ್ರಯಾಣಿಸುತಿದ್ದ ಭಾಗ್ಯಲಕ್ಷ್ಮಿ ಬಸ್ ನಲ್ಲಿ ಸುಮಾರು 25 ಪ್ರಯಾಣಿಕರಿದ್ದರು. ಸಾಗರ ರಸ್ತೆಯ ಹೈಸ್ಕೂಲ್ ಮುಂಭಾಗದಲ್ಲಿ ಶಿಕಾರಿಪುರದಿಂದ ರಿಪ್ಪನ್ ಪೇಟೆಗೆ…
ಜನಿವಾರ ಪ್ರಕರಣ – ತಪ್ಪಿತಸ್ತರ ವಿರುದ್ದ ಸೂಕ್ತ ಕ್ರಮಕ್ಕೆ ಶಾಸಕ ಬೇಳೂರು ಆಗ್ರಹ
ಜನಿವಾರ ಪ್ರಕರಣ – ತಪ್ಪಿತಸ್ತರ ವಿರುದ್ದ ಸೂಕ್ತ ಕ್ರಮಕ್ಕೆ ಶಾಸಕ ಬೇಳೂರು ಆಗ್ರಹ ಜನಿವಾರ ತೆಗೆಸಿದ ಪ್ರಕರಣ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ತರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಧರ್ಮದ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವ ಕೆಲಸ ಯಾರೂ ಮಾಡಬಾರದು.ಸಿಇಟಿ ಪರೀಕ್ಷೆ ತಪಾಸಣೆ ನೆಪದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಪ್ರಕರಣವನ್ನು ನಾನು…
ವಿಜೃಂಭಣೆಯ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ
ವಿಜೃಂಭಣೆಯ ಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ ರಿಪ್ಪನ್‌ಪೇಟೆ;-ಇಲ್ಲಿನ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವವು ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯೊಂದಿಗೆ ನೆರವೇರಿತು. ಇಂದು ಅಪರಾಹ್ನ 12. ಗಂಟೆ 45 ನಿಮಿಷದಲ್ಲಿ ಸಿದ್ದಿವಿನಾಯಕ ಸ್ವಾಮಿ ರಥವನ್ನೇರುತ್ತಿದ್ದಂತೆ ಭಕ್ತರ ಜಯಘೋಷಣೆ ಮುಗಿಲು ಮುಟ್ಟಿತು. ಕೋಣಂದೂರು ಬೃಹನ್ಮಠದ ಷ.ಬ್ರ.ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಮತ್ತು ನಿಟ್ಟೂರು ನಾರಾಯಣಗುರು ಮಠದ ರೇಣುಕಾನಂದ ಮಹಾಸ್ವಾಮಿಜಿ ಮತ್ತು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಧರ್ಮದರ್ಶಿ ಸಮಿತಿ ಆಧ್ಯಕ್ಷ ಈಶ್ವರಶೆಟ್ಟಿ ಇವರು ಹಾಜರಿದ್ದು ರಥೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರಾ ಮಹೋತ್ಸವವು ಜನರಲ್ಲಿನ ಶ್ರದ್ದಾ…
HOSANAGARA | ಜನಸ್ಪಂದನ ಕಾರ್ಯಕ್ರಮದಲ್ಲಿ ಅರ್ಜಿಗಳ ಮಹಾಪೂರ |ಆಡಳಿತ ಸುಧಾರಣೆಗೆ ‘ಜನಸ್ಪಂದನ’ ಸಹಕಾರಿ ; ಸಚಿವ ಮಧು ಬಂಗಾರಪ್ಪ
HOSANAGARA | ಜನಸ್ಪಂದನ ಕಾರ್ಯಕ್ರಮದಲ್ಲಿ ಅರ್ಜಿಗಳ ಮಹಾಪೂರ |ಆಡಳಿತ ಸುಧಾರಣೆಗೆ ‘ಜನಸ್ಪಂದನ’ ಸಹಕಾರಿ ; ಸಚಿವ ಮಧು ಬಂಗಾರಪ್ಪ ಹೊಸನಗರ ; ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು ಮತ್ತು ಆಡಳಿತ ಸುಧಾರಣೆಯಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ನಾಗರೀಕರ ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೋಮವಾರ ಇಲ್ಲಿನ ಈಡಿಗರ ಸಭಾ…
ರಸ್ತೆ ಅಪಘಾತ: ಗಾಯಾಳುಗಳಿಗೆ ಸ್ಪಂದಿಸಿ, ಆಸ್ಪತ್ರೆಗೆ ದಾಖಲಿಸಿ ಸಮಯ ಪ್ರಜ್ಞೆ ಮೆರೆದ ಸಚಿವ ಮಧು ಬಂಗಾರಪ್ಪ
ರಸ್ತೆ ಅಪಘಾತ: ಗಾಯಾಳುಗಳಿಗೆ ಸ್ಪಂದಿಸಿ, ಆಸ್ಪತ್ರೆಗೆ ದಾಖಲಿಸಿ ಸಮಯ ಪ್ರಜ್ಞೆ ಮೆರೆದ ಸಚಿವ ಮಧು ಬಂಗಾರಪ್ಪ ಸೊರಬ : ಕುಪ್ಪಗಡ್ಡೆ ಬಳಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದರು. ಅದೇ ಮಾರ್ಗವಾಗಿ ಶಿರಸಿಯಿಂದ ಬಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ , ಗಾಯಾಳುಗಳನ್ನು ಅವರ ಕಾರಿನಲ್ಲಿಯೇ ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಆಪ್ತ ಸಹಾಯಕರನ್ನು ಗಾಯಾಳುಗಳ ಜೊತೆಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟು , ಬಳಿಕ ನೆರೆದಿದ್ದ ಗ್ರಾಮಸ್ಥರ ಬಳಿ ಮಾಹಿತಿ…
RIPPONPETE | ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಂಗ ರಕ್ಷಣೆ
RIPPONPETE | ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಂಗ ರಕ್ಷಣೆ ರಿಪ್ಪನ್ ಪೇಟೆ : ಆಯ ತಪ್ಪಿ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಂಗನನ್ನು ಸ್ಥಳೀಯರು ಹಾಗೂ ಅರಣ್ಯಾಧಿಕಾರಿಗಳು ರಕ್ಷಿಸಿ, ಚಿಕಿತ್ಸೆ ಕೊಡಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಪಟ್ಟಣದ ವಿದ್ಯಾನಗರದ ದುರ್ಗಾ ಸಾಮಿಲ್ ಪಕ್ಕದಲ್ಲಿ ಮರದಿಂದ ಆಯತಪ್ಪಿ ಬಿದ್ದು ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತಿದ್ದ ಮಂಗನನ್ನು ಕಂಡು ಸ್ಥಳೀಯರು ಪೋಸ್ಟ್ ಮ್ಯಾನ್ ನ್ಯೂಸ್ ಗೆ ಸಂಪರ್ಕಿಸಿ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೋಸ್ಟ್…
ರಿಪ್ಪನ್ ಪೇಟೆಯಲ್ಲಿ ಗುಡ್ ಫ್ರೈಡೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ದೇವರ ಮೆರವಣಿಗೆ
ರಿಪ್ಪನ್ ಪೇಟೆಯಲ್ಲಿ ಗುಡ್ ಫ್ರೈಡೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ದೇವರ ಮೆರವಣಿಗೆ ರಿಪ್ಪನ್ ಪೇಟೆ :ಪಟ್ಟಣದ ಗುಡ್ ಶೆಪರ್ಡ್ ದೇವಾಲಯದಲ್ಲಿ ಗುಡ್ ಫ್ರೈಡೆ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಶುಕ್ರವಾರ ಬೆಳಗ್ಗೆಯಿಂದಲೇ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನದ ತನಕ ವಿವಿಧ ಪೂಜೆ ಹಾಗೂ ದೇವರ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು. ಗುಡ್ ಫ್ರೈಡೆ (Good Friday) ಕ್ರೈಸ್ತ ಧರ್ಮದಲ್ಲಿ ಬಹುಮುಖ್ಯವಾದ ಪವಿತ್ರ ದಿನವಾಗಿದ್ದು, ಇದು ಯೇಸು ಕ್ರಿಸ್ತನು ಶಿಲುಬೆಗೇರಿಸಲ್ಪಟ್ಟ ದಿನವೆಂದು ನಂಬಲಾಗುತ್ತದೆ.ಯೇಸು ಕ್ರಿಸ್ತನ ಬಲಿದಾನ:…
ಏ.21 ರಂದು ಹೊಸನಗರದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ
ಏ.21 ರಂದು ಹೊಸನಗರದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಏ.21 ರಂದು ಹೊಸನಗರದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ನಾಗರೀಕರ ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಇವರ ನೇತೃತ್ವದಲ್ಲಿ ಏ.21 ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರದ ಈಡಿಗರ ಸಭಾ ಭವನದಲ್ಲಿ ಬೆಳಿಗ್ಗೆ 9.30 ರಿಂದ ಜಿಲ್ಲಾ ಮಟ್ಟದ ‘ಜನಸ್ಪಂದನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಂಬಂಧಿಸಿದ ಅಧಿಕಾರಿಗಳು…
“ಸಮ ಸಮಾಜದ ಹರಿಕಾರ ಡಾ. ಬಿ ಆರ್ ಅಂಬೇಡ್ಕರ್” -ಡಾ ರಮೇಶ್ ಎನ್ ತೆವರಿ
“ಸಮ ಸಮಾಜದ ಹರಿಕಾರ ಡಾ. ಬಿ ಆರ್ ಅಂಬೇಡ್ಕರ್” -ಡಾ ರಮೇಶ್ ಎನ್ ತೆವರಿ ಸಕಾ೯ರಿ ಪ್ರಥಮ ದರ್ಜೆ ಕಾಲೇಜು, ಬಂಕಾಪುರದಲ್ಲಿ 134ನೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಹಾಗೂ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಆಚರಿಸಲಾಯಿತು. “ಅಂಬೇಡ್ಕರ್ ಅವರ ಸಂವಿಧಾನದ ಆಶಯ” ವಿಷಯದ ಕುರಿತು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ *ಮಂಜುನಾಥ ಬಿ ಅವರು* ಮಾತನಾಡಿ, ಸಂವಿಧಾನದಲ್ಲಿ ನಿರ್ದಿಷ್ಟ ಸಮುದಾಯದ ತುಷ್ಟಿಕರಣಕ್ಕಾಗಿ ಮೀಸಲಾತಿಯನ್ನು ಕಲ್ಪಿಸಿಲ್ಲ. ಸಮ ಸಮಾಜದ ನಿರ್ಮಾಣವೇ ಇದರ ಆಶಯವಾಗಿತ್ತು. ಸಮ ಸಮಾಜ…