ಆಯತಪ್ಪಿ ಗುಂಡಿಗೆ ಬಿದ್ದ ಹಸು – ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ
ಶಿವಮೊಗ್ಗ: ಮೇವು ಅರಸಿ ಹೊರಟ ಹಸುವೊಂದು ಆಯ ತಪ್ಪಿ ಗುಂಡಿಗೆ ಬಿದ್ದಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳ ಸಿಬ್ಬಂದಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದ್ದಾರೆ.
ಶಿವಮೊಗ್ಗದ ಹರಿಗೆ ಹಾತಿನಗರದ ಟಿಎಸ್ ಡಬ್ಲ್ಯೂ ಕಾಲೋನಿಯಲ್ಲಿ ಬುಧವಾರ ಮಧ್ಯಾಹ್ನ 2.25ರ ಸುಮಾರಿಗೆ ಹಸುವೊಂದು ಮೇವು ಅರಸಿ ಹೋಗುವಾಗ ಮನೆ ಹಿಂದೆ ನೀರಿಗಾಗಿ ತೋಡಿದ್ದ ಸಣ್ಣ ಗುಂಡಿಗೆ ಬಿದ್ದಿದೆ.
ಈ ಕುರಿತು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿತ್ತು ದೂರು ಬಂದ ಕೂಡಲೇ ಕಾರ್ಯಪ್ರವೃತ್ತರಾದ ಶಿವಮೊಗ್ಗ ಅಗ್ನಿಶಾಮಕ ದಳ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ಹೋಗಿ ಹಗ್ಗ ಕಟ್ಟಿ ಹಸುವನ್ನು ಮೇಲೆತ್ತಿ ರಕ್ಷಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಅಗ್ನಿಶಾಮಕ ದಳದ ಡಿಎಫ್‌ಎ ಅಶೋಕ್ ಕುಮಾರ್, ಎಎಸ್‌ಒ ಮುಕ್ತಮ್ ಹುಸೇನ್, ಚೇತನ್, ಗಣೇಶ್, ಶರತ್‌ಕುಮಾರ್, ನಿಹಾರ್, ಯರ‍್ರಿ ಸ್ವಾಮಿ, ಪ್ರಸಾದ್ ನಾಯಕ್, ಯಶವಂತ್ ಭಾಗವಹಿಸಿದ್ದರು.