ಜಿಲ್ಲಾ ಸುದ್ದಿ:
ಹೊಸನಗರದ ಜೆಸಿಐ ಅಧ್ಯಕ್ಷೆ ಸೀಮಾ ಕಿರಣ್ ತೆಂಡೂಲ್ಕರ್ ಗೆ ಒಲಿದ ಬೆಸ್ಟ್ ಫರ್ಫಾರ್ಮೆನ್ಸ್ ಆವಾರ್ಡ್ :
ಹೊಸನಗರ : ಇದೇ ತಿಂಗಳ 26-27 ರಂದು ಬಳ್ಳಾರಿಯಲ್ಲಿ ಜೆಸಿಐ ಸಂಸ್ಥೆಯಿಂದ ರಾಜ್ಯದಲ್ಲಿನ ಜೆಸಿಐ ನ ಎಲ್ಲಾ ಅಧ್ಯಕ್ಷ ಸದಸ್ಯರಿಗೆ 24 ಜೋನ್ ಪ್ರೆಸಿಡೆಂಟ್ ಜೆಸಿ ದೀಪಿಕಾ ಎನ್ ಬಿದಿರಿ ಮತ್ತು 24 ಜೋನ್ ಡೈರೆಕ್ಟರ್ ಮ್ಯಾನೆಜ್ ಮೆಂಟ್ ಜೆಸಿ ಅನುಷ್ ಗೌಡ ಇವರುಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಸಲಾಯಿತು. ಹೊಸನಗರ ತಾಲ್ಲೂಕಿನಲ್ಲಿ ಮೊದಲ ಮಹಿಳಾ ಅಧ್ಯಕ್ಷರಾಗಿ ಕೇವಲ 1 ತಿಂಗಳಿನಲ್ಲಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿ ಉತ್ತಮ ಸಮಾಜ ಸೇವೆಯನ್ನು ಮಾಡಿದ್ದಕ್ಕೆ ಅಧ್ಯಕ್ಷೆ ಸೀಮಾ ಕಿರಣ್…
ಕೃಷ್ಣ ಮೃಗದ ಚರ್ಮ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಮಾಲು ಸಮೇತ ಬಂಧನ
ಶಿವಮೊಗ್ಗ ಜಿಲ್ಲೆಯ ಆನಂದಪುರದ ದಾಸಕೊಪ್ಪ ಬಸ್ ನಿಲ್ದಾಣದ ಬಳಿ ಕೃಷ್ಣ ಮೃಗ ಚರ್ಮಗಳ ಮಾರಾಟದಲ್ಲಿ ತೊಡಗಿರುವ ವ್ಯಕ್ತಿಯನ್ನು ಅರಣ್ಯ ಸಂಚಾರಿದಳದ ಪೋಲೀಸರು ಬಂಧಿಸಿದ್ದಾರೆ. ಆನಂದಪುರದ ದಾಸಕೊಪ್ಪ ಬಸ್ ನಿಲ್ದಾಣದಲ್ಲಿ ಕೃಷ್ಣ ಮೃಗದ ಚರ್ಮ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಾಗರ ಅರಣ್ಯ ಸಂಚಾರಿ ದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶಿಕಾರಿಪುರ ತಾಲೂಕಿನ ಮಳವಳ್ಳಿ ತಾಂಡದ ಮುರಳೀಧರ್ ನಾಯ್ಕ್ ಬಂಧಿತ ವ್ಯಕ್ತಿ. ಈತನಿಂದ ಕೃಷ್ಣ ಮೃಗದ ಚರ್ಮಗಳನ್ನು ಮಾಲು ಸಮೇತ ವಶಪಡಿಸಿಕೊಂಡು,ಪ್ರಕರಣ ದಾಖಲಿಸಿದ್ದಾರೆ. ಪೋಲೀಸ್ ಅರಣ್ಯ ಸಂಚಾರಿದಳದ ಸಬ್…
ಮಾ.4 ರವರೆಗೆ ಶಿವಮೊಗ್ಗ ನಗರದಲ್ಲಿ ನಿಷೇದಾಜ್ಞೆ ವಿಸ್ತರಣೆ : ಶಾಲಾ ಕಾಲೇಜು ನಾಳೆಯಿಂದ ಆರಂಭ
ಶಿವಮೊಗ್ಗ ನಗರದಲ್ಲಿ ಮಾರ್ಚ್ 4ರವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ. ವ್ಯಾಪಾರ, ವಹಿವಾಟಿಗೆ ಅವಧಿಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶದಲ್ಲಿ ತಿಳಿಸಿದ್ದಾರೆ. ಮಾರ್ಚ್ 4ರವರೆಗೆ ಶಿವಮೊಗ್ಗ ನಗರದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಿಷೇಧಾಜ್ಞೆ ಸಡಿಲಗೊಳಿಸಲಾಗಿದೆ. ಈ ಅವಧಿಯಲ್ಲಿ ವ್ಯಾಪಾರ, ವಹಿವಾಟು ಮಾಡಿಕೊಳ್ಳಬಹುದಾಗಿದೆ. ರಾತ್ರಿ 7 ಗಂಟೆ ಬಳಿಕ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ನಾಳೆಯಿಂದ ಶಾಲೆ, ಕಾಲೇಜುಗಳು ಪ್ರಾರಂಭ ಹರ್ಷ ಹಿಂದೂ…
ಬೆಳೆಯುವ ಮಕ್ಕಳಲ್ಲಿ ಸಂಸ್ಕಾರ ಅರಳಬೇಕು: ಆರಗ ಜ್ಞಾನೇಂದ್ರ
ರಿಪ್ಪನ್‌ಪೇಟೆ: ಒಂದು ಶಾಲೆ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆ ಶಾಲೆಯಿಂದ ಮಕ್ಕಳ ಮನಸ್ಸಿನಲ್ಲಿ ಸಂಸ್ಕಾರ ಅರಳುವಂತಾಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಹೆದ್ದಾರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 25 ಲಕ್ಷ ರೂ ವೆಚ್ಚದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಶಾಲೆಗಳು ದೇವಸ್ಥಾನಕ್ಕೆ ಸಮ. ದೇವಸ್ಥಾನಕ್ಕೆ ಕೊಡುವುದನ್ನು ಶಾಲೆಗಳಿಗೆ ಕೊಟ್ಟರೆ ಅಂತಹ ದಾನಿಗಳಿಗೆ ಹತ್ತು ಪಟ್ಟು ಹೆಚ್ಚು ಪುಣ್ಯಪ್ರಾಪ್ತಿಯಾಗುತ್ತದೆ. ಭಾಷಣದಿಂದ ಸಮಾಜ ಪರಿವರ್ತನೆಯಾಗವುದಿಲ್ಲ. ಅಧ್ಯಾಪಕರ ಪ್ರಮಾಣಿಕ ಪ್ರಯತ್ನದಿಂದ ಇಲ್ಲಿನ ಹಣತೆಗಳನ್ನು ದೇಶ ಬೆಳಗಲು ಪ್ರೇರೇಪಿಸಬಹುದು…
ಹರ್ಷ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಜಿಲ್ಲಾ ಕಾಂಗ್ರೆಸ್ ನಾಯಕರುಗಳು: ಇಂತಹ ನೀಚ ಕೃತ್ಯಗಳನ್ನು ಎಸಗುವವರನ್ನು ಮರಣದಂಡನೆಗೆ ಗುರಿಪಡಿಸಿ : ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು !!!
ಇತ್ತೀಚೆಗೆ ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಮನೆಗೆ ಭೇಟಿ ನೀಡಿದ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಹರ್ಷ ರವರ ಕುಟುಂಬಕ್ಕೆ ಸಾಂತ್ವನ ಹೇಳಿದರು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಕೊಲೆ ಮಾಡುವಂತಹ ವ್ಯಕ್ತಿಗಳು ಯಾವುದೇ ಜಾತಿ ಧರ್ಮದವರಾಗಿರಲಿ ಅಂಥವರಿಗೆ ಶಿಕ್ಷೆಯನ್ನು ನೀಡಬೇಕು. ಪ್ರತಿಯೊಬ್ಬರ ಜೀವಕ್ಕೂ ಬೆಲೆಯಿದೆ.ಅವರ ಅಕ್ಕ ಹಾಗೂ ತಂಗಿ ಮತ್ತು ತಾಯಿಯ ನೋವು ನಿಜಕ್ಕೂ ಮನ ಕಲಕುವಂತಿದೆ.ಇಂತಹ ಘಟನೆಗಳು ಮರುಕಳಿಸಬಾರದು. ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ವಹಿಸಬೇಕು. ಇಂತಹ ಕೆಟ್ಟ…
ಇದೇ ತಿಂಗಳ 27ರಂದು ಅದ್ದೂರಿಯಾಗಿ “ಕೆಳದಿ ರಾಣಿ ಚೆನ್ನಮ್ಮ ಉತ್ಸವ” : ಶಾಸಕ ಹರತಾಳು ಹಾಲಪ್ಪ
ಸಾಗರ : ಈ ತಿಂಗಳ 27ರಂದು ಕೆಳದಿ ರಾಣಿ ಚೆನ್ನಮ್ಮ ಉತ್ಸವವನ್ನು ಅದ್ದೂರಿಯಾಗಿ ಆಚರಿಸುವ ವಿಚಾರವಾಗಿ ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರದ ಉಪವಿಭಾಗಧಿಕಾರಿ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನೆಡೆಸಿದರು. ಸದರಿ ಕಾರ್ಯಕ್ರಮ ನಡೆಸಲು ಕೈಗೊಳ್ಳಬೇಕಾದ ರೂಪುರೇಷಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ಸುದ್ದಿಗೋಷ್ಟಿ ನಡೆಸಿದ ಶಾಸಕರು “ಕೆಳದಿ ರಾಣಿ ಚೆನ್ನಮ್ಮ ಉತ್ಸವ” ವನ್ನು ಪ್ರತಿ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು 25 ಲಕ್ಷ ರೂ ಅನುದಾನ ಮಂಜೂರಾತಿಯಾದ ಬಗ್ಗೆ ಮಾಹಿತಿ ನೀಡಿದ…
ಹರ್ಷನ ಕೊಲೆ ಆರೋಪಿಗಳಿಗಳಿಗೆ ಪೊಲೀಸರ ಗುಂಡಿನ ಮೂಲಕವೇ ಉತ್ತರ ನೀಡಬೇಕು : ಹರತಾಳು ಹಾಲಪ್ಪ
ಶಿವಮೊಗ್ಗ : ಹರ್ಷನ ಸಾವು ವ್ಯರ್ಥವಾಗಲು ಬಿಡುವುದಿಲ್ಲ ಹಾಗೆಯೇ ಈ ತರಹದ ಕೃತ್ಯಗಳನ್ನು ಎಸಗುವವರಿಗೆ ಪೊಲೀಸರ ಗುಂಡಿನ ಮೂಲಕವೇ ಉತ್ತರ ನೀಡಬೇಕು ಎಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಹೇಳಿದರು. ಇಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು ನೇರವಾಗಿ ಇತ್ತೀಚೆಗೆ ದುಷ್ಕರ್ಮಿಗಳ ಕುಕೃತ್ಯದಿಂದ ಹುತಾತ್ಮರಾದ ಹಿಂದೂಪರ ಸಂಘಟನೆಯ ಕಾರ್ಯಕರ್ತ ಹರ್ಷ ರವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು ಪೊಲೀಸರು…
ಶಿವಮೊಗ್ಗ ಜಿಲ್ಲೆ ಎಸ್ಪಿ ವರ್ಗಾವಣೆ ಸುದ್ದಿ ಕೇವಲ ಊಹಾಪೋಹ : ಗೃಹ ಸಚಿವ ಆರಗ ಜ್ಞಾನೇಂದ್ರ
ಜಿಲ್ಲೆಯ ಧಕ್ಷ ರಕ್ಷಣಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀ ಪ್ರಸಾದ್ ವಿರುದ್ಧ ಹಬ್ಬಿರುವ ಊಹಾಪೂಹಗಳಿಗೆ ಬ್ರೇಕ್ ಬಿದ್ದಿದೆ. ಹಿಂದೂ ಯುವಕ ಹರ್ಷನ ಕಗ್ಗೊಲೆಯಲ್ಲಿ ನಡೆದ ಗಲಭೆ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ನಗರ ಪೊಲೀಸ್ ಠಾಣೆಯ ಆಡಿಟಿಂಗ್ ವರದಿಗಳನ್ನ ಕೇಳಿರುವ ಹಿನ್ನಲೆಯಲ್ಲಿ ಎಸ್ಪಿ ತಲೆದಂಡವಾಗಲಿದೆ ಎಂಬ ವದಂತಿಗೆ ಖುದ್ದು ಗೃಹಸಚಿವರೇ ಅಲ್ಲಗೆಳೆದಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಠಾಣೆಗಳಲ್ಲಿ ಆಡಿಟಿಂಗ್ ವರದಿ ಕೇಳಿರುವುದು ಹರ್ಷನ ಕೊಲೆಯನ್ನ ಒಂದು ಗ್ಯಾಂಗ್ ನಡೆಸಿದೆ. ಶಿವಮೊಗ್ಗ ಎಂದರೆ ರೌಡಿಗಳ ಬ್ರೀಡಿಂಗ್…
ಕಳೆದ ಐದು ತಿಂಗಳುಗಳಿಂದ ಪಡಿತರ ವ್ಯವಸ್ಥೆಯಲ್ಲಿ ಸೀಮೆ ಎಣ್ಣೆ ಇಲ್ಲ : ಜಾಣ ಕುರುಡು ಪ್ರದರ್ಶಿಸುತ್ತಿರುವ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರು
ರಿಪ್ಪನ್ ಪೇಟೆ: ಪಡಿತರ ವ್ಯವಸ್ಥೆಯಲ್ಲಿ ನೀಡುತ್ತಿದ್ದ ಸೀಮೆ ಎಣ್ಣೆಯನ್ನು ಸರ್ಕಾರ ಅಕ್ಟೋಬರ್ ತಿಂಗಳಿನಿಂದ ಸ್ಥಗಿತಗೊಳಿಸಿದ್ದು, ಗ್ರಾಮೀಣ ಜನತೆ ಬೆಳಕಿಗೆ, ಸಣ್ಣ ಕೃಷಿಕರು ತೋಟಕ್ಕೆ ನೀರು ಹಾಯಿಸಲು ಪರದಾಡುವಂತಾಗಿದೆ. ನಮ್ಮ ಹೊಸನಗರ ತಾಲೂಕು ಮಲೆನಾಡ ಪ್ರದೇಶವಾಗಿರುವುದರಿಂದ ಪಡಿತರ ಚೀಟಿದಾರರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಸೀಮೆ ಎಣ್ಣೆ ವಿತರಣೆಯನ್ನು ಕಳೆದ ನಾಲ್ಕೈದು ತಿಂಗಳುಗಳಿಂದ ಸರ್ಕಾರ ನಿಲ್ಲಿಸಿದೆ. ಇದಕ್ಕೆ ಕಾರಣವೇನು ಎಂದು ತಿಳಿದುಕೊಳ್ಳಬೇಕಾಗಿರುವ ಜನಪ್ರತಿನಿಧಿಗಳು ಹಾಗೂ ಸೋಕಾಲ್ಡ್ ಹೋರಾಟಗಾರರು ಬಾಯಿಗೆ ಬೆರಳಿಟ್ಟುಕೊಂಡು ಕುಳಿತಿದ್ದಾರೆಯೇ ಹೊರತು ಪ್ರಶ್ನೆ ಮಾಡುವ ಗೋಜಿಗೆ ಹೋಗಿಲ್ಲ. ಸೀಮೆಎಣ್ಣೆ ಬಹು…
ಹೊಸನಗರದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ನಿಧಿ ಸಂಗ್ರಹಣೆಗಾಗಿ ಮೆರವಣಿಗೆ :
ಹೊಸನಗರ ಪಟ್ಟಣದ ಭಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ, ಭಾನುವಾರ ಶಿವಮೊಗ್ಗದಲ್ಲಿ ಕಿಡಿಗೇಡಿಗಳಿಂದ ಕೊಲೆಯಾದ ಭಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕಾಗಿ ಪಟ್ಟಣದಲ್ಲಿ ಮೆರವಣಿಗೆ ಮಾಡಿ ಪ್ರಮುಖ ಅಂಗಡಿ, ಹೋಟೆಲ್ ಗಳಲ್ಲಿ ನಿಧಿ ಸಂಗ್ರಹಣೆ ಮಾಡಲಾಯಿತು. ಈ ಮೆರವಣಿಗೆಯಲ್ಲಿ ಅಂಬೈಡ್ಕರ್ ನಿಗಮದ ನಿರ್ದೇಶಕ ಎನ್.ಆರ್ ದೇವಾನಂದ್,ಬಿ.ಜೆ.ಪಿ.ಮುಖಂಡರು ಸೇರಿದಂತೆ, ವಿಶ್ವ ಹಿಂದೂ ಪರಿಷತ್ತ್ ಮತ್ತು ಭಜರಂಗದಳದ ಕಾರ್ಯಕರ್ತರು ಭಾಗವಹಿಸಿದ್ದರು. ವರದಿ : ಫುಷ್ಪಾ ಜಾಧವ್