ಜಿಲ್ಲಾ ಸುದ್ದಿ:
ರಿಪ್ಪನ್‌ಪೇಟೆ : ಈದ್ ಮಿಲಾದ್ ಅಂಗವಾಗಿ ನಾಳೆ(11-10-2023) ಸೌಹಾರ್ದ ಸಮಾವೇಶ
ರಿಪ್ಪನ್‌ಪೇಟೆ : ಈದ್ ಮಿಲಾದ್ ಹಬ್ಬದ ಅಂಗವಾಗಿ ಬುಧವಾರ ಸೌಹಾರ್ದ ಸಮಾವೇಶ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾದ ಮೈದಿನ್ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬುಧವಾರ ಮೊಹಿಯುದ್ದೀನ್ ಜುಮ್ಮಾ ಮಸೀದಿ,ಮೆಕ್ಕಾ ಮಸೀದಿ ,ಈದ್ ಮಿಲಾದ್ ಸಮಿತಿ ,ತಾಅಜಿಜುಲ್ ಅರಬ್ಬಿಕ್ ಮದರಸ ,ಬದ್ರಿಯಾ ಮದರಸ ಗವಟೂರು ,SYS ಹಾಗೂ SSF ರಿಪ್ಪನ್‌ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರವಾದಿಯವರ 1498 ನೇ ಜನ್ಮ ದಿನದ ಪ್ರಯುಕ್ತ ಹುಬ್ಬುನ್ನಬಿ ಮಿಲಾದ್ ಕಾನ್ಪರೆನ್ಸ್ ಅಂಗವಾಗಿ ಸೌಹಾರ್ಧ…
ಅರಳಸುರುಳಿ ಸಜೀವ ದಹನ ಪ್ರಕರಣ – ಚಿಕಿತ್ಸೆ ಫಲಿಸದೇ ಭರತ್ ಆಸ್ಪತ್ರೆಯಲ್ಲಿ ಸಾವು|aralasurali
ಅರಳಸುರುಳಿಯಲ್ಲಿ ಮೂವರು ಸಜೀವ ದಹನ ಪ್ರಕರಣ – ಚಿಕಿತ್ಸೆ ಫಲಿಸದೇ ಮತ್ತೊಬ್ಬ ಕೂಡ ಸಾವು ತೀರ್ಥಹಳ್ಳಿ : ಭಾನುವಾರ ಬೆಳ್ಳಂಬೆಳಗ್ಗೆ ಮನೆಯೊಂದರಲ್ಲಿ ಮೂರು ಮಂದಿ ಸಜೀವ ದಹನವಾಗಿದ್ದ ಘಟನೆ ತಾಲೂಕಿನ ಅರಳಸುರುಳಿಯಲ್ಲಿ ನೆಡೆದಿತ್ತು. ಮನೆಯ ಒಳಗಿನ ಕೋಣೆಯೊಳಗೆ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ದಹನವಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಪುತ್ರ ಭರತ್ (28) ಕೂಡ ಚಿಕಿತ್ಸೆ ಫಲಿಸದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ….
ಅಮ್ಮನಘಟ್ಟ ಜಾತ್ರಾ ಮಹೋತ್ಸವಕ್ಕೆ ನಿರೀಕ್ಷೆಗೂ ಮೀರಿ ಹರಿದು ಬಂದ ಜನಸಾಗರ|ammanaghatta
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪುರಾಣ ಪ್ರಸಿದ್ದ ಏಕಶೀಲೆಯ ಹೆಬ್ಬಂಡೆಯಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಾ ಬೇಡಿ ಬರುವ ಭಕ್ತರ ಇಷ್ಟಾರ್ಥಗಳನ್ನು ಪರಿಹರಿಸುವ ಶ್ರೀ ಜೇನುಕಲ್ಲಮ್ಮ ದೇವಿಯ ದರ್ಶನಕ್ಕೆ ಇಂದು 3ನೇ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ. ಬೆಳಗ್ಗೆ 06 ಗಂಟೆಯಿಂದಲೇ ದೇವಿ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದು 08 ಗಂಟೆ ಹೊತ್ತಿಗೆ ಒಂದು ಕಿ.ಮೀ. ಗೂ ಅಧಿಕ ದೂರದಿಂದ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿತು. ಕಿರಿದಾದ ರಸ್ತೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ…
ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿಗೆ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಆಯ್ಕೆ|hosanagara
ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿಗೆ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಆಯ್ಕೆ ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ ಕೊಡಮಾಡುವ ವಿಶೇಷ ಪ್ರಶಸ್ತಿಗೆ ಹೊಸನಗರ ತಾಲೂಕಿನ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಭಾಜನರಾಗಿದ್ದಾರೆ. ಚುಟುಕು, ಹನಿಗವನ ರಚನೆ ಮೂಲಕ ವಿದ್ಯಾರ್ಥಿ ದಿಸೆಯಲ್ಲೇ ಸಾಹಿತ್ಯ ಆಸಕ್ತಿ ಹೊಂದಿದ್ದ ನಾರವಿ ಕನ್ನಡ ಜನಾಂತರಂಗದ ಮೂಲಕ ಪತ್ರಿಕಾ ವರದಿಗಾರರಾಗಿ ಕೆಲಸ ಆರಂಭಿಸಿದರು. ಬಳಿಕ ವಿಜಯಕರ್ನಾಟಕ, ವಿಜಯವಾಣಿಯ ಬಳಿಕ ಪ್ರಸ್ತುತ ಪ್ರಜಾವಾಣಿಯ ಹೊಸನಗರ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸನಗರ…
ಶಾಸಕ ಬೇಳೂರು ಬಹಿರಂಗ ಕ್ಷಮೆಯಾಚನೆಗೆ ತಾಲೂಕ್ ವೀರಶೈವ ಲಿಂಗಾಯಿತ ಮಹಾಸಭಾ ಆಗ್ರಹ|rpet
ರಿಪ್ಪನ್‌ಪೇಟೆ : ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ರವರು ನಮ್ಮ ಸಮಾಜದ ಹಿರಿಯರಾದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮತ್ತು ಅಖಿಲ ಭಾರತ ರಾಷ್ಟ್ರೀಯ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ರವರ ಬಗ್ಗೆ ಹಗುರವಾಗಿ ಮಾತಾನಾಡಿರುವುದನ್ನ ಹೊಸನಗರ ತಾಲ್ಲೂಕು ಅಖಿಲಭಾರತ ವೀರಶೈವ ಮಹಾಸಭಾ ಘಟಕ ಖಂಡಿಸುತ್ತದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಹೇಳಿಕೆಯಲ್ಲಿ ತಿಳಿಸಿದ ಬಿ.ಎಸ್.ಯಡಿಯೂರಪ್ಪನವರು ನಾಲ್ಕು ಬಾರಿ ಈ ರಾಜ್ಯದ…
ಉದ್ಯಮಶೀಲತೆಯಿಂದ ಮಹಿಳೆಯರು ಸಾವಲಂಬನೆಯ ಬದುಕನ್ನು ಕಂಡುಕೊಳ್ಳಬಹುದು :ಸಿ.ಎಲ್.ರಮೇಶ್|rpet
ಉದ್ಯಮಶೀಲತೆಯಿಂದ ಮಹಿಳೆಯರು ಸಾವಲಂಬನೆಯ ಬದುಕನ್ನು ಕಂಡುಕೊಳ್ಳಬಹುದು :ಸಿ.ಎಲ್.ರಮೇಶ್ ರಿಪ್ಪನ್ ಪೇಟೆ : ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಉದ್ಯಮಶೀಲತೆ ಅವಶ್ಯಕ, ಉದ್ಯಮ ಶೀಲತೆಯಿಂದ ಮಹಿಳೆಯರು ಸಾವಲಂಬನೆಯ ಬದುಕನ್ನು ಕಂಡುಕೊಳ್ಳಬಹುದು.ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯದ ಬಗ್ಗೆ ಪ್ರತಿಯೊಬ್ಬ ಮಹಿಳೆ ಅರಿವನ್ನು ಹೊಂದಿರಬೇಕು ಎಂದು ಸಂಪನ್ಮೂಲ ವ್ಯಕ್ತಿ ರಮೇಶ್ ಸಿ.ಎಲ್. ಹೇಳಿದರು. ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಹಾಗೂ ಮಲೆನಾಡು ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಬೆಳಂದೂರು ಇವರ ಸಂಯುಕ್ತ…
ಗುಂಡು ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆಲುವಳ್ಳಿ ಶಾಲೆಯ ವಿದ್ಯಾರ್ಥಿನಿ ಸುರಕ್ಷಾ|rpet news
ಗುಂಡು ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆಲುವಳ್ಳಿ ಶಾಲೆಯ ವಿದ್ಯಾರ್ಥಿನಿ ಸುರಕ್ಷಾ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸುರಕ್ಷಾ ಗುಂಡು ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಸುರಕ್ಷಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಪ್ರದೇಶವಾದ ಆಲುವಳ್ಳಿ ಸರ್ಕಾರಿ…
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಮನೆ ಮೇಲೆ ಈಡಿ ದಾಳಿ ರಾಜಕೀಯ ಪ್ರೇರಿತ|ED
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ ರಿಪ್ಪನ್‌ಪೇಟೆ : ಸಹಕಾರಿ ಧುರೀಣ ಆರ್ ಎಂ ಮಂಜುನಾಥ್ ಗೌಡ ಅವರ ಮನೆ ಮೇಲೆ ನಡೆದ ಈಡಿ ದಾಳಿಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತವಾಗಿದ್ದು, ರಾಜಕೀಯವಾಗಿ ಅವರನ್ನು ಎದುರಿಸಲು ಸಾಧ್ಯವಾಗದೆ ಇಂತಹ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂಎಂ ಪರಮೇಶ್ ಜಂಟಿ ಪತ್ರೀಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ….
ರಿಪ್ಪನ್ ಪೇಟೆ : ಗುಡ್ ಶೆಪರ್ಡ್ ಶಾಲೆಯ ವಿದ್ಯಾರ್ಥಿಗಳು ಕಬ್ಬಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ|kabbadi
ರಿಪ್ಪನ್ ಪೇಟೆ : ಗುಡ್ ಶೆಪರ್ಡ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ರಿಪ್ಪನ್‌ಪೇಟೆ : ಪಟ್ಟಣದ ಗುಡ್ ಶೆಪರ್ಡ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಬ್ಬಡ್ಡಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ ನಡೆದ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಪ್ರದೇಶವಾದ ರಿಪ್ಪನ್ ಪೇಟೆ ಪಟ್ಟಣದ ವಿದ್ಯಾರ್ಥಿಗಳ…
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಮಂಜುನಾಥ್ ಗೌಡ ಮನೆ ಮೇಲೆ ಇಡಿ (ED) ದಾಳಿ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಮಂಜುನಾಥ್ ಗೌಡ ಮನೆ ಮೇಲೆ ಇಡಿ (ED) ದಾಳಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರ ಶಿವಮೊಗ್ಗ ಹಾಗೂ ತೀರ್ಥಹಳ್ಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಶರಾವತಿ ನಗರ ಮತ್ತು ತೀರ್ಥಹಳ್ಳಿ ಪಟ್ಟಣದ ಬೆಟ್ಟಮಕ್ಕಿಯಲ್ಲಿರುವ ಆರ್.ಎಂ. ಮಂಜುನಾಥಗೌಡ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆ ಸುತ್ತಮುತ್ತ ಶಸ್ತ್ರಾಸ್ತ್ರ ಪೊಲೀಸರು…