ಜಿಲ್ಲಾ ಸುದ್ದಿ:
ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ತೀರ್ಥಹಳ್ಳಿಯ ನಾಲ್ವರಿಗೆ ನೋಟಿಸ್|NIA
ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ತೀರ್ಥಹಳ್ಳಿಯ ನಾಲ್ವರಿಗೆ ನೋಟಿಸ್ ಶಿವಮೊಗ್ಗದ ತುಂಗಾ ತೀರದಲ್ಲಿ ಟ್ರಯಲ್ ಬ್ಲ್ಯಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ಮೂಲದ ನಾಲ್ವರಿಗೆ ಎನ್ಐಎ (NIA) ನೋಟಿಸ್ ಜಾರಿ ಮಾಡಿದೆ. ತೀರ್ಥಹಳ್ಳಿ ಮೂಲದ ಶಂಸುದ್ದೀನ್, ರಿಜ್ವಾನ್, ನಜೀಬ್ ವುಲ್ಲಾ ಹಾಗೂ ತಮೀಮ್ಗೆ ವಿಚಾರಣೆಗೆ ಹಾಜರಾಗುವಂತೆ ಎನ್ಐಎ ನೋಟಿಸ್ ನೀಡಿದೆ. ಅಕ್ಟೋಬರ್ 19ರ ಮಧ್ಯಾಹ್ನದೊಳಗೆ ಬೆಂಗಳೂರಿನ ಎನ್ಐಎ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ಸೂಚನೆ ನೀಡಲಾಗಿದೆ. 2022ರ ಆ.26ರಂದು ಶಿವಮೊಗ್ಗ ತುಂಗಾ ನದಿ ತೀರದಲ್ಲಿ…
ಕಾರ್ಯಕರ್ತರ ಪರಿಶ್ರಮದಿಂದಲೇ ಮಾತ್ರ ಪಕ್ಷಗಳ ಸಂಘಟನೆ ಸಾಧ್ಯ : ಆರ್. ಎಂ. ಮಂಜುನಾಥ್ ಗೌಡ|rpet
ಕಾರ್ಯಕರ್ತರ ಪರಿಶ್ರಮದಿಂದಲೇ ಮಾತ್ರ ಪಕ್ಷಗಳ ಸಂಘಟನೆ ಸಾಧ್ಯ : ಆರ್. ಎಂ. ಮಂಜುನಾಥ್ ಗೌಡ ರಿಪ್ಪನ್ ಪೇಟೆ : ಯಾವುದೇ ಒಂದು ರಾಜಕೀಯ ಪಕ್ಷಗಳು ಸಂಘಟನೆ ಆಗಬೇಕಾದರೆ ಆ ಪಕ್ಷದ ಕಾರ್ಯಕರ್ತರ ಪರಿಶ್ರಮ, ನಿಷ್ಠೆ ಮತ್ತು ಪ್ರಾಮಾಣಿಕತನ ಮೂಲ ಕಾರಣವಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡ ಆರ್ ಎಂ ಮಂಜುನಾಥ್ ಗೌಡ ಹೇಳಿದರು. ಪಟ್ಟಣದ ಸಾಗರ ರಸ್ತೆಯಲ್ಲಿನ ಶ್ರೀರಾಮ ಮಂದಿರದಲ್ಲಿ ಆಯೋಜಿಸಲಾಗಿದ್ದ ರಿಪ್ಪ ನ್ ಪೇಟೆ ಕಾಂಗ್ರೆಸ್ ಘಟಕದ ನೂತನ…
ಪದವೀಧರ ಕ್ಷೇತ್ರದ ಚುನಾವಣೆಯ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹೇಗೆ.? ದಾಖಲೆಗಳೇನು? ಇಲ್ಲಿದೆ ಮಾಹಿತಿ|election
ರಿಪ್ಪನ್‌ಪೇಟೆ : ಕೆಲವೇ ದಿನಗಳಲ್ಲಿ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗೋ ಸಾಧ್ಯತೆ ಇದೆ. ಇದಕ್ಕೂ ಮುನ್ನಾ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿ ತಯಾರಿಕೆ ಕೂಡ ಆರಂಭಗೊಂಡಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆಗಾಗಿ ಮತದಾರರ ಪಟ್ಟಿ ತಯಾರಿಕೆಗೆ ಸಿದ್ಧತೆಯನ್ನು ಚುನಾವಣಾ ಆಯೋಗ ಆರಂಭಿಸಿದೆ. ಇಂತಹ ಮತದಾರರ ಪಟ್ಟಿಗೆ ಪದವೀಧರರಾದಂತ ನೀವು ಅರ್ಜಿಯನ್ನು ಸಲ್ಲಿಸೋದು ಹೇಗೆ.? ಅರ್ಹತೆಗಳು ಏನು ಅನ್ನೋ ಬಗ್ಗೆ ಕೂಡ ಮಾಹಿತಿ ನೀಡಿದೆ. ಈ ಹಿನ್ನಲೆಯಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ಬಳಗದ ವತಿಯಿಂದ…
ಕೆಂಚನಾಲ ವ್ಯಾಪ್ತಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ|kenchanal
ಕೆಂಚನಾಲ ವ್ಯಾಪ್ತಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ ಕಾಡಾನೆಗಳು ಪ್ರತ್ಯಕ್ಷವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗಾಳಿಬೈಲ್ ಗ್ರಾಮದಲ್ಲಿ ನಡೆದಿದೆ. ಗಾಳಿಬೈಲು ಗ್ರಾಮದ ರೈತರೊಬ್ಬರ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು,ಬಾಳೆ ಮತ್ತು ಅಡಿಕೆ ಗಿಡಗಳನ್ನು ನಾಶಗೊಳಿಸಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಇತ್ತೀಚೆಗೆ ಚಿರತೆ ಹಾವಳಿಯಿಂದ ಭಯಭೀತರಾಗಿದ್ದ ಗ್ರಾಮಸ್ಥರಿಗೆ ಈಗ ದಿಢೀರ್ ಪ್ರತ್ಯಕ್ಷವಾದ ಕಾಡಾನೆಯ ಭೀತಿಯೂ ಆವರಿಸಿದೆ. ಕಳೆದ 2-3 ದಿನಗಳ ಹಿಂದೆ ಆಲುವಳ್ಳಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಆನೆಗಳು ನಿನ್ನೆಯ…
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ|job alert
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 12 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ಅರವಳಿಕೆ ತಜ್ಞರ 04 ಹುದ್ದೆಗಳು ಹಾಗೂ ಪ್ರಸೂತಿ ತಜ್ಞರ 03 ಹುದ್ದೆಗಳಿಗೆ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ರೋಸ್ಟರ್ ಮತ್ತು ಮೆರಿಟ್ ಆಧಾರದಲ್ಲಿ ನೇಮಕ ಮಾಡಲು ಅರ್ಹ ಎಂ.ಬಿ.ಬಿ.ಎಸ್. ಪದವೀಧರರು…
ಈಡಿಗ ಸಮಾಜದ ಶಕ್ತಿ ಪ್ರದರ್ಶನಕ್ಕೆ ಎಲ್ಲಾರೂ ಸಜ್ಜಾಗಬೇಕು: ಶಾಸಕ ಬೇಳೂರು ಗೋಪಾಲಕೃಷ್ಣ ಕರೆ|beluru
ಈಡಿಗ ಸಮಾಜದ ಶಕ್ತಿ ಪ್ರದರ್ಶನಕ್ಕೆ ಸಜ್ಜು: ಶಾಸಕ ಬೇಳೂರು ಗೋಪಾಲಕೃಷ್ಣ ಕರೆ ಸಾಗರ : ರಾಜ್ಯದಲ್ಲಿ ಈಡಿಗ ಸಮಾಜದ ಶಕ್ತಿ ಪ್ರದರ್ಶನಕ್ಕೆ ಎಲ್ಲರೂ ಸಜ್ಜಾಗಬೇಕು. ಕನಿಷ್ಠ 20 ಲಕ್ಷ ಈಡಿಗ ಸಮುದಾಯದವರನ್ನು ಒಳಗೊಂಡ ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಸರ್ಕಾರಕ್ಕೆ ನಮ್ಮ ಹಕ್ಕುಗಳನ್ನು ಈಡೇರಿಸುವಂತೆ ಒತ್ತಾಯಿಸುವತ್ತ ನಾವು ಗಮನ ಹರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕರೆ ನೀಡಿದ್ದಾರೆ. ಇಲ್ಲಿನ ಈಡಿಗರ ಸಮುದಾಯ ಭವನದಲ್ಲಿ ಭಾನುವಾರ ಆರ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಭಿನಂದನೆ ಹಾಗೂ…
ಮಾನವೀಯ ಧರ್ಮಕ್ಕಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ – ಧರ್ಮಗುರು ಮುನೀರ್ ಸಖಾಫಿ|eid milad
ರಿಪ್ಪನ್ ಪೇಟೆ : ಮಾನವೀಯ ಧರ್ಮಕ್ಕಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ,ಭಾವೈಕ್ಯತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ,ಎಂದು ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಮುನೀರ್ ಸಖಾಫಿ ಹೇಳಿದರು. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪಟ್ಟಣದ ವಿನಾಯಕ ವೃತದಲ್ಲಿ ಆಯೋಜಿಸಲಾಗಿದ್ದ ಭಾವೈಕ್ಯತ ರ್ಯಾಲಿಯ ಸಭೆಯಲ್ಲಿ ಮಾತನಾಡಿದ ಅವರು ನಾವು ಭಾರತೀಯರು ನಾವೆಲ್ಲರೂ ಸೋದರಂತೆ ಇದ್ದು ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಎಲ್ಲರಲ್ಲೂ ಬೆರೆತು ರಾಷ್ಟ್ರದ ಸೇವೆಯನ್ನು ಮಾಡುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯ ಮತ್ತು ಉದ್ದೇಶವಾಗಿರಬೇಕು. ಈ…
ಅಮ್ಮನಘಟ್ಟವನ್ನು ಪ್ರೇಕ್ಷಣಿಯ ಮಾದರಿ ಯಾತ್ರಾ ಸ್ಥಳವನ್ನಾಗಿಸುವ ಸಂಕಲ್ಪ ನನ್ನದಾಗಿತ್ತು : ಹರತಾಳು ಹಾಲಪ್ಪ|ammanaghatta
ಅಮ್ಮನಘಟ್ಟವನ್ನು ಪ್ರೇಕ್ಷಣಿಯ ಮಾದರಿ ಯಾತ್ರಾ ಸ್ಥಳವನ್ನಾಗಿಸುವ ಸಂಕಲ್ಪ ನನ್ನದಾಗಿತ್ತು : ಹರತಾಳು ಹಾಲಪ್ಪ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯದೇವಸ್ಥಾನವನ್ನು ರಾಜ್ಯದಲ್ಲಿ ಆತ್ಯುತ್ತಮ ಮಾದರಿ ಪ್ರೇಕ್ಷಣಿಯ ಯಾತ್ರಾ ಕ್ಷೇತ್ರವನ್ನಾಗಿಸುವ ಮಹಾದಾಸೆ ಹೊಂದಿದ್ದೆ ಈ ಹಿಂದಿನ ಅವಧಿಯಲ್ಲಿ ಈ ದೇವಸ್ಥಾನವನ್ನು ಶಿಲಾಮಯ ದೇವಸ್ಥಾನವನ್ನಾಗಿಸಲು ಸರ್ಕಾರದಿಂದ ೧.೫೦ ಕೋಟಿ ಆನುದಾನವನ್ನು ಬಿಡುಗಡೆ ಮಾಡಲಾಗಿದ್ದು ನನ್ನ ಅವಧಿಯಲ್ಲಿಯೇ ಪೂರ್ಣವಾಗಬೇಕಾಗಿತ್ತು ಆದರೆ ರಾಜಕೀಯ ವ್ಯತ್ಯಾಸದಿಂದಾಗಿ ಪೂರ್ಣವಾಗಿಲ್ಲ ಎಂದು ಮಾಜಿ ಮಂತ್ರಿ ಹರತಾಳು ಹಾಲಪ್ಪ ಹೇಳಿದರು. ಕೋಡೂರು ಗ್ರಾಮ…
ಕೆಂಚನಾಲದಲ್ಲಿ ಈದ್ ಮಿಲಾದ್ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ|eid milad
ಕೆಂಚನಾಲದಲ್ಲಿ ಈದ್ ಮಿಲಾದ್ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದ ಜಾಮೀಯಾ ಮಸೀದಿ ಆವರಣದಲ್ಲಿ ಈದ್ ಮಿಲಾದ್ ಸಮಿತಿ ಹಾಗೂ ರಿಪ್ಪನ್‌ಪೇಟೆ ರೋಟರಿ ಕ್ಲಬ್ ಸಹಯೋಗದಲ್ಲಿ ಈದ್ ಮಿಲಾದ್ ಪ್ರಯುಕ್ತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಮಾತನಾಡಿ, ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದು.ರಕ್ತಕ್ಕೆ ಪರ್ಯಾಯ ಯಾವುದೇ ವಸ್ತು ಇಲ್ಲ. ರಕ್ತದಾನ ಮಾಡುವುದರಿಂದ ಮೂವರಿಗೆ ಜೀವದಾನ ಮಾಡಿದಂತಾಗುತ್ತದೆ. ಇದರಿಂದ ರಕ್ತದಾನಿಗಳ ಆರೋಗ್ಯವೂ ಸುಧಾರಿಸುತ್ತದೆ ಹಾಗಾಗಿ ಆರೋಗ್ಯವಂತ…
ಮಾನವೀಯತೆ ಸಮಾಜ ಸೇವೆಗೆ ಪ್ರೇರಣೆ : ಡಿವೈಎಸ್ಪಿ ಗಜಾನನ ವಾಮನ ಸುತಾರ
ಮಾನವೀಯತೆ ಸಮಾಜ ಸೇವೆಗೆ ಪ್ರೇರಣೆ : ಡಿವೈಎಸ್ಪಿ ಗಜಾನನ ವಾಮನ ಸುತಾರ “ಸರ್ಕಾರಿ ಶಾಲೆ ಅಭಿಮಾನ – ಸುಣ್ಣಬಣ್ಣ ಅಭಿಯಾನಕ್ಕೆ ಚಾಲನೆ ನೀಡಿದ ಕೆಚ್ಚೆದೆಯ ಕನ್ನಡತಿ ಅಕ್ಕ ಅನು” ರಿಪ್ಪನ್ ಪೇಟೆ : ಸಮಾಜ ಸೇವೆಯಲ್ಲಿ ಮಾನವೀಯತೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಮಾಜ ಸೇವೆಯಲ್ಲಿ ತೊಡಗಿಕೊಂಡವರಿಗೆ ಮಾನವೀಯ ಪ್ರೇರಣೆ ಯಾಗಿರುತ್ತದೆ. ಎಂದು ಡಿ ವೈ ಎಸ್ ಪಿ ಗಜಾನನ ವಾಮನಸುತಾರ ಹೇಳಿದರು. ಪಟ್ಟಣದ ಸಮೀಪದ ಚಂದವಳ್ಳಿ ಸರ್ಕಾರಿ ಶಾಲೆಯಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ…