ಜಿಲ್ಲಾ ಸುದ್ದಿ:
Humcha | ಆನೆಗದ್ದೆ ಸರ್ಕಾರಿ ಶಾಲೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸಂಕ್ರಾಂತಿ ಆಚರಣೆ
Humcha | ಆನೆಗದ್ದೆ ಸರ್ಕಾರಿ ಶಾಲೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸಂಕ್ರಾಂತಿ ಆಚರಣೆ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ನಮ್ಮ ಹಬ್ಬ ಹರಿದಿನಗಳು ಹಾಗೂ ಸಂಸ್ಕೃತಿ ಸಂಪ್ರದಾಯಗಳ ಮಹತ್ವ, ಆಚಾರ ವಿಚಾರಗಳನ್ನು ತಿಳಿಸಿಕೊಟ್ಟು ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು ಎಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಸಮೀಪದ ಆನೆಗದ್ದೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಟ್ಟಡ ಕಾರ್ಮಿಕರ ಸಂಘ ಹಾಗೂ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದವರು ಶಾಲೆಯ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಸಹಕಾರದಿಂದ ನಡೆಸಿದ ಸಂಕ್ರಾಂತಿ…
Koduru | ಸಂಸ್ಕಾರಯುತ ಶಿಕ್ಷಣವೇ ವ್ಯಕ್ತಿತ್ವ ನಿರ್ಮಾಣಕ್ಕೆ ಭದ್ರ ಅಡಿಪಾಯ ; ಕಲಗೋಡು ರತ್ನಾಕರ್
ಸಂಸ್ಕಾರಯುತ ಶಿಕ್ಷಣವೇ ವ್ಯಕ್ತಿತ್ವ ನಿರ್ಮಾಣಕ್ಕೆ ಭದ್ರ ಅಡಿಪಾಯ ; ಕಲಗೋಡು ರತ್ನಾಕರ್ ರಿಪ್ಪನ್‌ಪೇಟೆ : ಸಂಸ್ಕಾರವಿಲ್ಲದ ವಿದ್ಯೆ ಉಪಯೋಗಕ್ಕೆ ಬಾರದೆಂದು ಜಿಪಂ ಮಾಜಿ ಅಧ್ಯಕ್ಷ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ಹೇಳಿದರು. ಕೋಡೂರು ಗ್ರಾಮದ ಬ್ಲಾಸಂ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಜೀವನದ ಮೌಲ್ಯಗಳನ್ನು ಬೆಳೆಸುವ ಸಂಸ್ಕಾರಯುತ ಶಿಕ್ಷಣವೇ ವ್ಯಕ್ತಿತ್ವ ನಿಮಾರ್ಣಕ್ಕೆ ಭದ್ರ ಅಡಿಪಾಯ. ವಿದ್ಯೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಬೆಳೆಯಬೇಕು. ಶಿಕ್ಷಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ…
ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಅಂದರ್ ಬಾಹರ್!!! – ಹಲವರು ವಶಕ್ಕೆ..!!|crime news
ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯೇ ಅಂದರ್ ಬಾಹರ್!!! – ಹಲವರು ವಶಕ್ಕೆ..!! ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅದ್ದೂರಿ ಜಾತ್ರೆ ನಡೆಯುತ್ತಿದೆ. ನೂರಾರು ಕಡೆಗಳಿಂದ ಈ ಜಾತ್ರೆಗೆ ಸಾವಿರಾರು ಮಂದಿ ಬಂದಿದ್ದಾರೆ. ಆದರೆ ಜಾತ್ರೆಯಲ್ಲಿ ಇಸ್ಪೀಟ್ ಅಂದರ್ ಬಾಹರ್ ಶುರುವಾಗಿದ್ದು ಜನರನ್ನು ಆಡಿಸುವ ಮೂಲಕ ಅಲ್ಪ ಸ್ವಲ್ಪ ಹಣವನ್ನು ಖಾಲಿ ಮಾಡಿಸಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಬೆಜ್ಜವಳ್ಳಿ ಜಾತ್ರೆಯಲ್ಲಿ ಕೆಲವು ವ್ಯಕ್ತಿಗಳು ಇಸ್ಪೀಟ್ ಆಟವನ್ನು ಬಹಿರಂಗವಾಗಿಯೇ ಆಡಿಸಿದ್ದಾರೆ. ದೇವಸ್ಥಾನದ…
Konanduru | ರಾಷ್ಟ್ರದ ಸಂಸ್ಕೃತಿಯ ಸಂವರ್ಧನೆಯೊಂದಿಗೆ ಧರ್ಮಪೀಠಗಳ ಕಾರ್ಯ ಮುಖ್ಯ ; ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಶ್ರೀಗಳು
Konanduru | ರಾಷ್ಟ್ರದ ಸಂಸ್ಕೃತಿಯ ಸಂವರ್ಧನೆಯೊಂದಿಗೆ ಧರ್ಮಪೀಠಗಳ ಕಾರ್ಯ ಮುಖ್ಯ ; ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಶ್ರೀಗಳು ಸಂಸ್ಕೃತಿಯ ಸಂವರ್ಧನೆಯೊಂದಿಗೆ ಧರ್ಮಪೀಠಗಳ ಕಾರ್ಯ ಮುಖ್ಯ ; ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಶ್ರೀಗಳು ರಿಪ್ಪನ್‌ಪೇಟೆ : ಧಾರ್ಮಿಕ ಮತ್ತು ಚಾರಿತ್ರಿಕ ಉತ್ತೃಷ್ಟ ಪರಂಪರೆಯು ನಮ್ಮ ಸಂಸ್ಕೃತಿಯ ಭಗವೇ ಅಗಿದೆ. ರಾಷ್ಟ್ರದ ಸಂಸ್ಕೃತಿ ಸಂವರ್ಧನೆ ಧರ್ಮ ಪೀಠಗಳ ಪರಮ ಕರ್ತವ್ಯವಾಗಿದೆ ಎಂದು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಶ್ರೀಶಿವಲಿಂಗೇಶ್ವರ ಬೃಹನ್ಮಠದಲ್ಲಿ ಆಯೋಜಿಸಲಾದ ಮಕರ…
Ripponpete | ರಾಷ್ಟ್ರ ಮಟ್ಟದ ‘ನೆಟ್ ಬಾಲ್’ ಪಂದ್ಯಾವಳಿಗೆ ಆಲುವಳ್ಳಿಯ ವಿಕ್ರಮ್ ರಾಜಾಮಣಿ ಆಯ್ಕೆ
Ripponpete | ರಾಷ್ಟ್ರ ಮಟ್ಟದ ‘ನೆಟ್ ಬಾಲ್’ ಪಂದ್ಯಾವಳಿಗೆ ಆಲುವಳ್ಳಿಯ ವಿಕ್ರಮ್ ರಾಜಾಮಣಿ ಆಯ್ಕೆ ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಯುವಕ ವಿಕ್ರಮ್ ರಾಜಾಮಣಿ ಕಿರಿಯರ ರಾಷ್ಟ್ರ ಮಟ್ಟದ ನೆಟ್ ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ. ಆಲುವಳ್ಳಿ ಗ್ರಾಮದ ನಿವಾಸಿಗಳಾದ ತೇಜಸ್ವಿ ಆಲವಳ್ಳಿ ಮತ್ತು ಶ್ವೇತಾ ದಂಪತಿಗಳ ಪುತ್ರನಾದ ವಿಕ್ರಮ್ ರಾಜಾಮಣಿ ಪ್ರಸ್ತುತ ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತಿದ್ದಾನೆ. ಜನವರಿ 25 ರಿಂದ 28 ರವರೆಗೆ ಮಧ್ಯಪ್ರದೇಶದಲ್ಲಿ ನಡೆಯುವ 36ನೇ…
ಶರಾವತಿ ನದಿಯಿಂದ ಹೊಸನಗರ, ಸಾಗರಕ್ಕೆ 24 ಗಂಟೆ ನೀರು ಕೊಡಲಿ ಆಮೇಲೆ ಬೆಂಗಳೂರಿಗೆ ತೆಗೆದುಕೊಂಡು ಹೋಗಲಿ – ಶಾಸಕ ಬೇಳೂರು
ಶರಾವತಿ ನದಿಯಿಂದ ಹೊಸನಗರ, ಸಾಗರಕ್ಕೆ 24 ಗಂಟೆ ನೀರು ಕೊಡಲಿ ಆಮೇಲೆ ಬೆಂಗಳೂರಿಗೆ ತೆಗೆದುಕೊಂಡು ಹೋಗಲಿ – ಶಾಸಕ ಬೇಳೂರು ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕಾದರೆ ಸಾಗರ, ಹೊಸನಗರ ಭಾಗದ ಜನರಿಗೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ರಾಜ್ಯ ಸರ್ಕಾರವು ‘ಅಗ್ರಿಮೆಂಟ್’ ಮಾಡಿಕೊಳ್ಳಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಸಾಗರ ಪಟ್ಟಣದ ಸೊರಬ ರಸ್ತೆ ಮತ್ತು ಬೈಪಾಸ್ ರಸ್ತೆ ಕಾಮಗಾರಿಯನ್ನು ಶನಿವಾರ ಪರಿಶೀಲನೆ ಮಾಡಿ ಪತ್ರಕರ್ತರ ಜೊತೆ…
Ripponpete | ಮುಂದಿನ ದಿನಗಳಲ್ಲಿ ರಿಪ್ಪನ್‌ಪೇಟೆ ಪಟ್ಟಣವನ್ನು ಉನ್ನತಮಟ್ಟದ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು – ಶಾಸಕ ಬೇಳೂರು ಗೋಪಾಲಕೃಷ್ಣ
ರಿಪ್ಪನ್‌ಪೇಟೆ : ಸುಮಾರು 5.50 ಕೋಟಿ ರೂ. ವೆಚ್ಚದಲ್ಲಿ ಸಾಗರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ವೀಕ್ಷಿಸಿದರು. ವಿನಾಯಕ ವೃತ್ತದಿಂದ ಎಪಿಎಂಸಿ ವರೆಗೆ ಚತುಷ್ಪತ ರಸ್ತೆ ಕಾಮಗಾರಿಯು ಸುಮಾರು 5.50 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತಿದ್ದು ಈ ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಂಡು ಕೆಲಸ ನಿರ್ವಹಿಸುವಂತೆ ಗುತ್ತಿಗೆದಾರನಿಗೆ ಎಚ್ಚರಿಕೆ ನೀಡಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ 5.50 ಕೋಟಿ ರೂ…
Hosanagara | ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಹೊಸನಗರದ ಮೇಘನಾ ರವರಿಗೆ ತೃತೀಯ ಸ್ಥಾನ
Hosanagara | ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಹೊಸನಗರದ ಮೇಘನಾ ರವರಿಗೆ ತೃತೀಯ ಸ್ಥಾನ ಹೊಸನಗರ : ಇಲ್ಲಿನ ಕುಸ್ತಿಪಟು ಮೇಘನಾ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಅದ್ಬುತ ಸಾಧನೆಗೈದಿದ್ದಾರೆ. ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಾಲಕೃಷ್ಣ ಹಾಗೂ ಕರಿಬಸಮ್ಮ ದಂಪತಿಗಳ ಪುತ್ರಿ ಯಾದ ಕುಮಾರಿ ಮೇಘನಾ ಇಂದು ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಗಳಿಸಿ ಮಲೆನಾಡಿನ ಹಿರಿಮೆಗೆ ಗರಿ ಮೂಡಿಸಿದ್ದಾರೆ. ಫೆಬ್ರವರಿ ಮೂರರಂದು…
Heddaripura | ಸಾಧನೆಯ ಹಾದಿಯಲ್ಲಿ ಎಡವಿದಾಗ ಮತ್ತೆ ಎದ್ದು ನಿಲ್ಲುವ ಛಲವೂ ಇರಬೇಕು – ಮಳಲಿ ಶ್ರೀಗಳು
Heddaripura | ಸಾಧನೆಯ ಹಾದಿಯಲ್ಲಿ ಎಡವಿದಾಗ ಮತ್ತೆ ಎದ್ದು ನಿಲ್ಲುವ ಛಲವೂ ಇರಬೇಕು – ಮಳಲಿ ಶ್ರೀಗಳು ರಿಪ್ಪನ್‌ಪೇಟೆ : ಶ್ರೇಷ್ಠವಾದದನ್ನು ಸಾಧಿಸುವ ತುಡಿತ ಇರಬೇಕು ಜೊತೆಗೆ ಸಾಧನೆಯ ಹಾದಿಯಲ್ಲಿ ಎಡವಿದಾಗ ಮತ್ತೆ ಎದ್ದು ನಿಲ್ಲುವ ಛಲವೂ ಇರಬೇಕು ಎಂದು ಎಂದು ಮಳಲಿ ಮಠದ ಡಾ ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳಿದರು. ಇಲ್ಲಿನ ಸಮೀಪದ ಹೆದ್ದಾರಿಪುರ ಸಾವಿತ್ರಮ್ಮ ಶ್ರೀ ರಾಮಕೃಷ್ಣ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಪ್ರತಿಯೊಬ್ಬರಲ್ಲಿ ಒಂದು ಗುರಿ…
Ripponpete | ತೋಟೋತ್ಪನ್ನ ಬೆಳೆಗಳ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್ ಎಸ್ ಗಣಪತಿ ಅವಿರೋಧ ಆಯ್ಕೆ
Ripponpete | ತೋಟೋತ್ಪನ್ನ ಬೆಳೆಗಳ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್ ಎಸ್ ಗಣಪತಿ ಅವಿರೋಧ ಆಯ್ಕೆ ರಿಪ್ಪನ್‌ಪೇಟೆ : ಇಲ್ಲಿನ ತೋಟೋತ್ಪನ್ನ ಬೆಳೆಗಳ ಅಭಿವೃದ್ಧಿ,ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗಣಪತಿ ಹೆಚ್ ಎಸ್ ಮತ್ತು ಉಪಾಧ್ಯಕ್ಷರಾಗಿ ದೇವೇಂದ್ರ ಕೆ ಎನ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಗುರುವಾರ ನಡೆದ ಸಭೆಯಲ್ಲಿ ತೋಟೋತ್ಪನ್ನ ಸಹಕಾರ ಸಂಘದ ಅಧ್ಯಕ್ಷರನ್ನಾಗಿ ಗ್ರಾಪಂ ಸದಸ್ಯರೂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಗಣಪತಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಕಲ್ಲೂರು ಗ್ರಾಮದ…