w
Headlines
Home » ದ್ವಿಚಕ್ರ ವಾಹನ ಸವಾರರ ಮೇಲೆ ಏಕಾಏಕಿ ಜೇನುನೊಣಗಳ ದಾಳಿ – ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ,ಓರ್ವ ಗಂಭೀರ | bee bite

ದ್ವಿಚಕ್ರ ವಾಹನ ಸವಾರರ ಮೇಲೆ ಏಕಾಏಕಿ ಜೇನುನೊಣಗಳ ದಾಳಿ – ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ,ಓರ್ವ ಗಂಭೀರ | bee bite

ದ್ವಿಚಕ್ರ ವಾಹನ ಸವಾರರ ಮೇಲೆ ಏಕಾಏಕಿ ಜೇನುನೊಣಗಳ ದಾಳಿ – ಹತ್ತಕ್ಕೂ ಹೆಚ್ಚು ಮಂದಿಗೆ ಗಾಯ,ಓರ್ವ ಗಂಭೀರ | bee ಬಿತೆ


ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಮೂಗೂಡ್ತಿಯಲ್ಲಿ ದಿಢೀರ್ ಜೇನುನೊಣಗಳ ದಾಳಿಯಿಂದ ಹತ್ತಕ್ಕೂ ಅಧಿಕ ಜನರು ಅಸ್ವಸ್ಥರಾಗಿ, ಓರ್ವನಿಗೆ ಗಂಭೀರ ಗಾಯಗೊಂಡಿರುವ ನಡೆದಿದೆ.

ಮೂಗೂಡ್ತಿ ಗ್ರಾಮದಲ್ಲಿ ಜೇನು ನೊಣಗಳ ದಾಳಿಯಿಂದ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತಿದ್ದ ಪ್ರಯಾಣಿಕರು ಹಾಗೂ ಪಾದಚಾರಿಗಳ ಮೇಲೆ ಜೇನು ನೊಣ ಏಕಾಏಕಿ ದಾಳಿ ನಡೆಸಿದೆ.

ಘಟನೆಯಲ್ಲಿ ತಳಲೆ ಗ್ರಾಮದ ಮಂಜುನಾಥ ,ಲೋಹಿತ್ , ಕಳಸೆ ಗ್ರಾಮದ ಮೋಹನ್ ಕೋಣಂದೂರಿನ ನಾಗರಾಜ್ ,ಗಿರಿಜಾ ಹಾಗೂ ಧನಂಜಯ್ ಕುಮಾರ್ , ಸುಹಾಸ್ ರವರಿಗೆ ಗಾಯಗಳಾಗಿದ್ದು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ತಳಲೆಯ ಕೃಷ್ಣಮೂರ್ತಿ ಎಂಬುವವರಿಗೆ ಗಂಭೀರ ಗಾಯಗೊಂಡಿದ್ದು ಶಿವಮೊಗ್ಗಕ್ಕೆ ರವಾನಿಸಲಾಗಿದೆ.

ಮೂಗೂಡ್ತಿಯಲ್ಲಿ ಜೇನು ನೊಣಗಳ ದಿಢೀರ್ ದಾಳಿಯಿ೦ದ ಜನರು ಒಮ್ಮೆ ಭಯಗೊಳ್ಳುವಂತಾಯಿತು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.