ಕ್ರೈಂ ಸುದ್ದಿ:
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸ್ಥಳದಲ್ಲಿಯೇ ಸಾವು,ಇಬ್ಬರು ಗಂಭೀರ |accident
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸ್ಥಳದಲ್ಲಿಯೇ ಸಾವು,ಇಬ್ಬರು ಗಂಭೀರ |accident (Sagara-anandapura) ಸಾಗರ – ಆನಂದಪುರದ ಹೆದ್ದಾರಿಯಲ್ಲಿ ಮಾರುತಿ ಓಮ್ನಿ(omini) ಹಾಗೂ ಟಾಟಾ ಇಂಡಿಕಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಭದ್ರಾವತಿ ಗ್ರಾಮದ ಅಜಯ್ (21) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಧೈವಿಯಾಗಿದ್ದಾರೆ. ಉಳ್ಳೂರು ಸಮೀಪದ ಮಂಚಾಲೆ ಗ್ರಾಮದ ಸಮೀಪದಲ್ಲಿ ಈ ದುರ್ಘಟನೆ ನಡೆದಿದ್ದು ಸಾಗರದ ಟೌನ್ ನಿವಾಸಿ ಸೈಯದ್ ನೂರುಲ್ಲಾ ಎಂಬುವವನು ಉಳ್ಳೂರು ಗ್ರಾಮದ…
ಊಟಕ್ಕೆ ಬಂದ ಗ್ರಾಹಕನ 4 ಲಕ್ಷ ರೂ ಇದ್ದ ಬ್ಯಾಗ್ ಎಗರಿಸಿ ಓಡಿದ ಸಪ್ಲೈಯರ್ – ಬ್ರೈಟ್ ಹೊಟೇಲ್ ನಲ್ಲಿ ನಡೆದಿದ್ದೇನು..???
ಊಟಕ್ಕೆ ಬಂದ ಗ್ರಾಹಕನ 4 ಲಕ್ಷ ರೂ ಇದ್ದ ಬ್ಯಾಗ್ ಎಗರಿಸಿ ಓಡಿದ ಸಪ್ಲೈಯರ್ – ಬ್ರೈಟ್ ಹೊಟೇಲ್ ನಲ್ಲಿ ನಡೆದಿದ್ದೇನು..??? ಶಿವಮೊಗ್ಗ ನಗರದ ಬ್ರೈಟ್ ಹೊಟೆಲಿನಲ್ಲ್ಲಿ ಗ್ರಾಹಕ ಬಿಟ್ಟು ಹೋದ 4 ಲಕ್ಷ ರೂ. ಇದ್ದ ಹಣದ ಚೀಲವನ್ನು ಅಲ್ಲಿನ ಸರ್ವರ್ ಎತ್ತಿಕೊಂಡು ಹೋದ ಘಟನೆ ಸಂಭವಿಸಿದ್ದು, ಆತನನ್ನು ಬಂಧಿಸಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರ ತಾಲೂಕು ಜಂಬಾನಿ ಗ್ರಾಮದ ವಾಸಿ ಲೋಕೇಶ್ ಎನ್ನುವವರು ತನ್ನ ಸ್ನೇಹಿತನೊಂದಿಗೆ ಹೋಟೇಲ್ ನಲ್ಲಿ ಊಟ ಮಾಡುತ್ತಿದ್ದಾಗ 4…
ಲಂಚ ಪಡೆಯುತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ | lokayukta
ಲಂಚ ಪಡೆಯುತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ | lokayukta ವ್ಯಕ್ತಿಯೊಬ್ಬರಿಂದ 2000 ಲಂಚ ಸ್ವೀಕರಿಸುತ್ತಿದ್ದಾಗಲೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಲೋಕಾಯುಕ್ತದಿಂದ ಮಾಹಿತಿ ಹಂಚಿಕೊಂಡಿದ್ದು, ಪತ್ರಿಕಾ ಪ್ರಕಟಣೆ ಪಿರಾದುದಾರರಾದ ಅಸೀಬ್ ಚಿನ್ ಬಸೀರ್, 32 ವರ್ಷ ವಾಸ ಎಸ್.ಎನ್ ನಗರ, ಸಾಗರ ಟೌನ್ ರವರ ಸ್ನೇಹಿತರಾದ ತೋಹಿದ್ ಅಬ್ದುಲ್ ರವರಿಗೆ ಸೇರಿದ ಸಾಗರ ತಾಲ್ಲೂಕ್…
ಆಗುಂಬೆ ಸಮೀಪದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು | Lighting
ಸಿಡಿಲು ಬಡಿದು ವ್ಯಕ್ತಿ ಸಾವು | lighting ತೀರ್ಥಹಳ್ಳಿ : ತಾಲೂಕಿನ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಮಳೆ ಜೊತೆಗೆ ಸಿಡಿಲ ಆರ್ಭಟವು ಹೆಚ್ಚಾಗಿದೆ. ಇದೆ ವೇಳೆ ಸಿಡಿಲು ಬಡಿದು ಓರ್ವ ವ್ಯಕ್ತಿ ದುರ್ಮರಣ ಹೊಂದಿರುವ ಘಟನೆ ತಾಲೂಕಿನ ಆಗುಂಬೆ ಬಳಿ ನಡೆದಿದೆ. ಮೃತ ದುರ್ದೈವಿ ನಾಗೇಂದ್ರ ಬಿನ್ ಸಿನ್ ಪೂಜಾರಿ ( 40 ವರ್ಷ ) ಎಂದು ಗುರುತಿಸಲಾಗಿದ್ದು ಇವರು ಬೀದರಗೋಡು ಗ್ರಾಮದವರು. ಇವರು ಬಾಳೆಹಳ್ಳಿ ಗ್ರಾಮದ ಗುಜುಗೊಳ್ಳಿ ಕೇಶವ ಕಿಣಿ ಬಿನ್ ವಿಠಲ್ ಕಿಣಿ…
ಸಿಗಂದೂರು ದೇವಸ್ಥಾನಕ್ಕೆ ತೆರಳುತಿದ್ದವರ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ | Accident
ಸಿಗಂದೂರು ದೇವಸ್ಥಾನಕ್ಕೆ ತೆರಳುತಿದ್ದವರ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ | Accident ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿರುವ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಜೇನಿ ಗ್ರಾಮದ ತಿರುವಿನಲ್ಲಿ ನಡೆದಿದೆ. ಮಾರುತಿ ಸ್ವಿಫ್ಟ್ ಕಾರಿನಲ್ಲಿ ತುಮಕೂರು ಮೂಲದ ನಾಲ್ವರು ಸಿಗಂದೂರು ದೇವಸ್ಥಾನಕ್ಕೆ ದರ್ಶನಕ್ಕೆಂದು ತೆರಳುತಿದ್ದಾಗ ಮಾರ್ಗ ಮಧ್ಯದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿರುವುದಿಲ್ಲ ಎಂದು ತಿಳಿದುಬಂದಿದೆ. ತುಂಬಾ ಅಪಾಯಕಾರಿಯಾದ ಈ ತಿರುವಿನಲ್ಲಿ ಕಾರು ಚಾಲಕ…
ಮಚ್ಚಿನಿಂದ ನಾಯಿಯನ್ನು ಕೊಲ್ಲಲು ಹೋಗಿ ಎದುರುಮನೆ ಅಜ್ಜಿಯನ್ನು ಹತ್ಯೆಗೈದ ಯುವಕ – ನಡೆದಿದ್ದೇನು..??? Crime News
ಮಚ್ಚಿನಿಂದ ನಾಯಿಯನ್ನು ಕೊಲ್ಲಲು ಹೋಗಿ ಎದುರುಮನೆ ಅಜ್ಜಿಯನ್ನು ಹತ್ಯೆಗೈದ ಯುವಕ – ನಡೆದಿದ್ದೇನು..??? Crime News ಯುವಕನೊಬ್ಬ ನಾಯಿಯನ್ನು ಕೊಲ್ಲಲು ಹೋಗಿ ಎದುರುಗಡೆ ಮನೆಯ ಅಜ್ಜಿಯನ್ನು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ವಿಚಿತ್ರ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಅರಳಿಹಳ್ಳಿ ಗ್ರಾಮ ಮಂಜುನಾಥ ಎದುರು ಮನೆಯ ಅಜ್ಜಿಯನ್ನೇ ಕೊಂದಿರುವ ಆರೋಪಿಯಾಗಿದ್ದಾನೆ. ಯುವಕನ ಮನೆಯ ಬಳಿ ಬಂದಿದ್ದ ನಾಯಿಯನ್ನು ಕೊಲ್ಲಲು ಮಚ್ಚಿನ ಸಮೇತನಾಗಿ ನಿನ್ನೆಯಿಂದಲೇ ಓಡಾಡುತ್ತಿದ್ದನಂತೆ. ಆಗ ಗ್ರಾಮದ ಕೆಲವರು ಯುವಕನಿಗೆ ಥಳಿಸಿ ಬುದ್ದಿಹೇಳಿ…
ಮಟನ್ ನಲ್ಲಿ ಮೂಳೆ ಹಾಕಬೇಡ ಎಂದಿದ್ದಕ್ಕೆ ಗ್ರಾಹಕನ ಮೇಲೆ ಅಪ್ರಾಪ್ತ ಯುವಕನಿಂದ ಮಾರಣಾಂತಿಕ ಹಲ್ಲೆ | Crime News
ಮಟನ್ ನಲ್ಲಿ ಮೂಳೆ ಹಾಕಬೇಡ ಎಂದಿದ್ದಕ್ಕೆ ಗ್ರಾಹಕನ ಮೇಲೆ ಅಪ್ರಾಪ್ತ ಯುವಕನಿಂದ ಮಾರಣಾಂತಿಕ ಹಲ್ಲೆ | Crime News ಶಿವಮೊಗ್ಗ : ಮೂಳೆ ಬದಲು ಮಟನ್ ಹೆಚ್ಚಿಗೆ ಹಾಕುವಂತೆ ಕೇಳಿದ್ದಕ್ಕೆ ಅಪ್ರಾಪ್ತ ಯುವಕ ಗ್ರಾಹಕನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿರುವ ಘಟನೆ ನಗರದಲ್ಲಿ ಸಂಭವಿಸಿದೆ. ಗಾಡಿಕೊಪ್ಪ ನಿವಾಸಿ ಮಲ್ಲೇಶ್ (40) ಗಂಭೀರವಾಗಿ ಗಾಯಗೊಂಡಿದ್ದಾರೆ. ಮಲ್ಲೇಶಪ್ಪ ಮಟನ್ ಖರೀಸಿದ್ದು ಮೂಳೆಯನ್ನು ಹೆಚ್ಚಾಗಿ ಹಾಕಲಾಗಿತ್ತು. ಹಾಗಾಗಿ ಅಪ್ರಾಪ್ತನ ತಂದೆಯನ್ನು ಕರೆದು ಮಲ್ಲೇಶಪ್ಪ ದೂರಿದ್ದರು. ಆಗ ಅಪ್ರಾಪ್ತನು ಮಲ್ಲೇಶಪ್ಪನ ಮೇಲೆ ಹರಿತವಾದ…
ಅನೈತಿಕ ಸಂಬಂಧ | ವಿವಾಹಿತ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ | Crime News
ಅನೈತಿಕ ಸಂಬಂಧ | ವಿವಾಹಿತ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಹಿಳೆಯೊಬ್ಬರನ್ನು ವ್ಯಕ್ತಿಯೊಬ್ಬ ಆಯುಧದಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದ್ದು ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸವಿತ(35) ಎಂಬ ವಿವಾಹಿತ ಮಹಿಳೆಯ ಮೇಲೆ ಶಿವನಾಯ್ಕ್(35) ಎಂಬ ವ್ಯಕ್ತಿ ವಡ್ಡಿನಕೊಪ್ಪದಲ್ಲಿ ಮನೆಗೆ ನುಗ್ಗಿ ಕುತ್ತಿಗೆಯನ್ನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಅನೈತಿಕ ಸಂಬಂದವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಆರೋಪಿ ಶಿವನಾಯ್ಕ್ ಮತ್ತು ಗಾಯಾಳು ಮಹಿಳೆ ಸವಿತಾ ರನ್ನು ಮೆಗ್ಗಾನ್ ಗೆ…
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಮನೆ ಕಳ್ಳತನ ಮಾಡಿದ್ದ ಆರೋಪಿಗಳನ್ನು 24 ಗಂಟೆಯೊಳಗೆ ಮಾಲು ಸಮೇತ ಬಂಧಿಸಿದ ಪೊಲೀಸ್
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಮನೆ ಕಳ್ಳತನ ಮಾಡಿದ್ದ ಆರೋಪಿಗಳನ್ನು 24 ಗಂಟೆಯೊಳಗೆ ಮಾಲು ಸಮೇತ ಬಂಧಿಸಿದ ಪೊಲೀಸ್ ಮನೆ ಕಳ್ಳತನವೆಸಗಿದ್ದ ಆರೋಪಿಗಳನ್ನು 24 ಗಂಟೆಯಲ್ಲಿ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಗುಂಬೆ ಸಮೀಪದ ಶೆಟ್ಟಿಗಳಕೊಪ್ಪ ಗ್ರಾಮದ ಶಿವಪ್ಪ ಹೆಗಡೆ ಎಂಬುವವರ ಮನೆಯ ಕಿಟಕಿಯನ್ನು ಮುರಿದು ಪೆಟ್ಟಿಗೆಯಲ್ಲಿದ್ದ ಬೆಳ್ಳಿ ಮತ್ತು ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನವೆಸಗಿದ್ದ ಪ್ರಕರಣವನ್ನು ಪೊಲೀಸರು ಭೇಧಿಸಿ ಇಬ್ಬರು ಆರೋಪಿಗಳನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ತೀರ್ಥಹಳ್ಳಿಯ ಕೈಮರದ ನಿವಾಸಿ,…
Sudooru | ಕಬ್ಬಿನ ಜ್ಯೂಸ್ ಅಂಗಡಿಯವನ ಮೇಲೆ ಮುಸಿಯಾ ದಾಳಿ – ಮೆಗ್ಗಾನ್ ಗೆ ದಾಖಲು
Sudooru | ಕಬ್ಬಿನ ಜ್ಯೂಸ್ ಅಂಗಡಿಯವನ ಮೇಲೆ ಮುಸಿಯಾ ದಾಳಿ – ಮೆಗ್ಗಾನ್ ಗೆ ದಾಖಲು ಮುಸಿಯಾ ದಾಳಿಯಿಂದ ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೂಡೂರು ಸಮೀಪದ ಐದನೇ ಮೈಲಿಕಲ್ಲು ಬಳಿಯಲ್ಲಿ ನಡೆದಿದೆ. ಲೋಕೇಶ್ ಹೊಸಕೊಪ್ಪ ಎಂಬುವವರಿಗೆ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹನುಮಾನ್ ಲಂಗೂರ್ ಎಂದು ಕರೆಯಲ್ಪಡುವ ಮುಸಿಯಾಗಳು ಈ ಭಾಗದಲ್ಲಿ ಹೆಚ್ಚು ತೊಂದರೆ ಕೊಡುತ್ತಿದೆ ಎಂದು ಸ್ಥಳೀಯರು ಆರೋಪಿಸುತಿದ್ದಾರೆ. ನಡೆದಿದ್ದೇನು..??? ಐದನೇ ಮೈಲಿಕಲ್ಲು ಬಸ್ ನಿಲ್ದಾಣದ ಬಳಿಯಲ್ಲಿ ಕಬ್ಬಿನ…