ಕ್ರೈಂ ಸುದ್ದಿ:
ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ದಾಳಿ: ಏಳು ಮಹಿಳೆಯರ ರಕ್ಷಣೆ|crime news
ಶಿವಮೊಗ್ಗ ನಗರದಲ್ಲಿ ಅರ್ಬನ್ ಪ್ರೊಫೆಷನ್ ಫ್ಯಾಮಿಲಿ ಸಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿ ದಂಧೆಯಲ್ಲಿ ತೊಡಗಿದ್ದ ಏಳು ಜನ ಮಹಿಳೆಯರನ್ನು ರಕ್ಷಿಸಿಸಲಾಗಿದೆ. ಶಿವಮೊಗ್ಗ ವಿನೋಬನಗರದಲ್ಲಿ ಸ್ಪಾ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಸುಳಿವು. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪಿಗಳು ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಐಪಿಎಸ್ ಬಿಂದುಮಣಿ ನೇತೃತ್ವದಲ್ಲಿ ಸ್ಪಾ ಮೇಲೆ ದಾಳಿ ನಡೆಸಿದ ಪೊಲೀಸರು. ಸದ್ಯ ಏಳು ಸಂತ್ರಸ್ತ ಮಹಿಳೆಯರನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು ಜಿಲ್ಲೆಯಲ್ಲಿ ವೇಶ್ಯಾವಾಟಿಕೆ…
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯುವಕರ ಮೇಲೆ ಹಲ್ಲೆ – ಆಸ್ಪತ್ರೆಗೆ ದೌಡಾಯಿಸಿದ ಹಿಂದೂ ಕಾರ್ಯಕರ್ತರು|assault
ಶಿವಮೊಗ್ಗ : ಕ್ಷುಲಕ ವಿಚಾರಕ್ಕೆ ಎರಡು ಕೋಮಿನ ಯುವಕರ ಮಧ್ಯೆ ಟಿಪ್ಪು ನಗರದಲ್ಲಿ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಘಟನೆ ಕೋಮು ಸ್ವರೂಪ ಪಡೆದಿತ್ತು. ರಸ್ತೆಯಲ್ಲಿ ಹೋಗುವಾಗ ಬೈಕ್ ಮತ್ತು ಆಟೋ ತಾಗಿವೆ. ಇದೆ ವಿಚಾರಕ್ಕೆ ಗಲಾಟೆಯಾಗಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಸಂದೇಶ್ ಎಂಬಾತನ ಕಣ್ಣಿನ ಬಳಿ ಗಾಯವಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ….
ಬೈಕ್ ಕಳ್ಳತನ ಮಾಡುತಿದ್ದ ಕೋಳಿ ಅರೆಸ್ಟ್|theft
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಎಟಿಎಂ ಮುಂದೆ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಭದ್ರಾವತಿ ಪೊಲೀಸರು ಭೇದಿಸಿದ್ದಾರೆ. ಇಲ್ಲಿನ ನಿವಾಸಿಯೊಬ್ಬರು ನಿಲ್ಲಿಸಿದ್ದ ಟಿವಿಎಸ್ ವಿಕ್ಟರ್ ಬೈಕ್ ನ್ನು ಕಳ್ಳರು ಕಳ್ಳತನ ಮಾಡಿದ್ದರು ಈ ಸಂಬಂಧ 379 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ ತನಿಖಾ ತಂಡವು ದಿನಾಂಕ:24/6/2023 ರಂದು ಆರೋಪಿಯನ್ನ ಬಂಧಿಸಿದ್ಧಾರೆ. ಪ್ರಭು @ ಕೋಳಿ, 28 ವರ್ಷ, ಬೆಳಕಟ್ಟೆ ಗ್ರಾಮ ಶಿವಮೊಗ್ಗ ಬಂಧಿತ…
ರಿಪ್ಪನ್‌ಪೇಟೆ : ಸಾಲ ಭಾದೆಗೆ ತತ್ತರಿಸಿದ ರೈತ ವಿಷ ಸೇವಿಸಿ ಅತ್ಮಹತ್ಯೆ|crime news
ರಿಪ್ಪನ್‌ಪೇಟೆ : ಸಾಲ ಭಾದೆಗೆ ತತ್ತರಿಸಿ ರೈತ ವಿಷ ಸೇವಿಸಿ ಅತ್ಮಹತ್ಯೆ ರಿಪ್ಪನ್‌ಪೇಟೆ;-ಕೆನರಾ ಬ್ಯಾಂಕ್ ಮತ್ತು ಸಹಕಾರ ಸಂಘ ಹಾಗೂ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸುಮಾರು 8 ಲಕ್ಷ ರೂ ಸಾಲ ಮಾಡಿ ತಿರುವಳಿ ಮಾಡಲಾಗದೇ ಮನನೊಂದು ವಿಷ ಸೇವಿಸಿ ಆತ್ಯಹತ್ಯೆಗೆ ಶರಣಾದ ಘಟನೆ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಅರಸಾಳು ಗ್ರಾಮದಲ್ಲಿ ನಡೆದಿದೆ. ಅರಸಾಳು ಗ್ರಾಮದ ಸುರೇಶ (55) ಎಂದು ಗುರುತಿಸಲಾಗಿದ್ದು ಮೃತನಿಗೆ ಪತ್ನಿ ಓರ್ವ ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆನ್ನಲಾಗಿದೆ. ಕೆನರಾಬ್ಯಾಂಕ್ ಸಾಲಕ್ಕೆ ರೈತ ಸುರೇಶನಿಗೆ…
ರಿಪ್ಪನ್‌ಪೇಟೆ ಪೊಲೀಸರ ಮಿಂಚಿನ ಕಾರ್ಯಾಚರಣೆ : ಹದಿನೈದು ದಿನಗಳೊಳಗೆ ಮನೆ ಕಳ್ಳತನದ ಅರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು|theft
ರಿಪ್ಪನ್‌ಪೇಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ 15 ದಿನಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮಿಂಚಿನ ಕಾರ್ಯಾಚರಣೆಯ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುದರ್ಶನ ಕೆ.ಎನ್ 23 ವರ್ಷ, ಆದರ್ಶ ಎಸ್ 23 ವರ್ಷ, ಮಧುಸೂದನ್ 30 ವರ್ಷ ಇವರನ್ನು ಬಂಧಿಸಿ ಐಪಿಸಿ ಸೆಕ್ಷನ್ 457.380 ರಡಿಯಲ್ಲಿ ಕೇಸ್ ದಾಖಲಿಸಿ ಆರೋಪಿತರಿಂದ ಕಳುವಾದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ತಿಂಗಳು 8 ರಂದು ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ…
ರಿಪ್ಪನ್‌ಪೇಟೆ – ಬಸ್ ನಿಲ್ದಾಣದಲ್ಲಿ ಅಪರಿಚಿತ ಶವ ಪತ್ತೆ|Rpet
ರಿಪ್ಪನ್‌ಪೇಟೆ : ಪಟ್ಟಣದ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ವಿನಾಯಕ ವೃತ್ತದಲ್ಲಿರುವ ಬಸ್ ನಿಲ್ದಾಣದಲ್ಲಿ ಸುಮಾರು 60 ವರ್ಷದ ಪಟ್ಟಣದಲ್ಲಿ ಛತ್ರಿ ರಿಪೇರಿ ಮಾಡಿಕೊಂಡಿದ್ದ ವ್ಯಕ್ತಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಸ್ಥಳಕ್ಕೆ ಪಿಎಸ್ ಐ ಎಸ್ ಪಿ ಪ್ರವೀಣ್ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಮೃತನನ್ನು ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಾರೆಹೊಂಡದ ಗಂಗಪ್ಪ ಎನ್ನಲಾಗುತ್ತಿದೆ.
ಮನೆಯಲ್ಲಿಯೇ ಗಾಂಜಾ ಬೆಳೆದ ಮೆಡಿಕಲ್ ವಿದ್ಯಾರ್ಥಿಗಳು – ಹೈಟೆಕ್ ಕೃಷಿಗೆ ಪೊಲೀಸರೇ ಶಾಕ್|crime news
ಕರ್ನಾಟಕ ರಾಜ್ಯದ ನೂತನ ಸರ್ಕಾರ ಮಾದಕ ವಸ್ತುಗಳ ದಂಧೆಗೆ ಕಡಿವಾಣ ಹಾಕುವಂತೆ ಸೂಚಿಸಿದ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ನಡುವೆ , ಶಿವಮೊಗ್ಗದಲ್ಲಿ ಈ ಹಿಂದೆ ಬೆಂಗಳೂರಿನಲ್ಲಿ ಕಂಡುಬಂದಂತೆ ವ್ಯಕ್ತಿಯೊಬ್ಬ, ಖುದ್ದು ತನ್ನ ಮನೆಯಲ್ಲಿ ಗಾಂಜಾ ಕೃಷಿ ಆರಂಭಿಸಿದ್ದರ ಬಗ್ಗೆ ವರದಿಯಾಗಿದೆ. ವಿದೇಶಿ ಹೂವುಗಳನ್ನ ಬೆಳಸಲು ನೆಟ್ ಹಾಕಿ ಫಾರ್ಮಿಂಗ್ ಮಾಡುವ ಹಾಗೆ, ಈತ ಮನೆಯಲ್ಲಿಯೇ ನೆಟ್ ಬಳಸಿ , ಫ್ಯಾನು ಲೈಟು ಅಳವಡಿಸಿ ಗಾಂಜಾವನ್ನು ಪಾಟ್ಗಳಲ್ಲಿ ಬೆಳೆಯುತ್ತಿದ್ದ. ಸದ್ಯ ಈ ಬಗ್ಗೆ ಮಾಹಿತಿ…
ಬಸ್ಸು ಮತ್ತು ಕಾರಿನ ನಡೆವೆ ಭೀಕರ ಅಪಘಾತ – ಓರ್ವ ಗಂಭೀರ|accident
ಬಸ್ಸಿಗೆ ಡಿಕ್ಕಿ ಹೊಡೆದ ಕಾರು – ಒಬ್ಬರಿಗೆ ಗಂಭೀರ ಗಾಯ ಶಿವಮೊಗ್ಗ : ಗಾಜನೂರು ಸಮೀಪ ಕಾರು ಮತ್ತು ಬಸ್ ಮುಖಾಮುಖಿ ಡಿಕ್ಕಿಯಾಗಿವೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಕಾರು, ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಮಧ್ಯೆ ಅಪಘಾತವಾಗಿದೆ. ಗಾಜನೂರಿನ ಮೊರಾರ್ಜಿ ಶಾಲೆ ಬಳಿ ಓವರ್ ಟೇಕ್ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಒಬ್ಬರಿಗೆ ಗಂಭೀರ…
ರಿಪ್ಪನ್‌ಪೇಟೆ : ಅಕ್ರಮ ಗಣಿಗಾರಿಕೆ ಮೇಲೆ ದಾಳಿ – ಎರಡು ಲಾರಿ,ಟ್ರಾಕ್ಟರ್ ಮತ್ತು ಜಂಬಿಟ್ಟಿಗೆ ಕೊಯ್ಯುವ ಯಂತ್ರ ವಶಕ್ಕೆ|illegal mining
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಯಂತ್ರ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಮದೂರು ಮತ್ತು ಹೊನಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಜಂಬಿಟ್ಟಿಗ್ಗೆ ಗಣಿಗಾರಿಕೆ ನಡೆಸುತಿದ್ದ ಪ್ರದೇಶಕ್ಕೆ ದಾಳಿ ನಡೆಸಿ ಎರಡು ಲಾರಿ ,ಒಂದು ಟ್ರಾಕ್ಟರ್ ಮತ್ತು ಜಂಬಿಟ್ಟಿಗ್ಗೆ ಕೊಯ್ಯುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಭೂ ಮತ್ತು ಗಣಿ…
ತೀರ್ಥಹಳ್ಳಿ ಪಟ್ಟಣದ ಮಧ್ಯ ಭಾಗದಲ್ಲೇ ವೇಶ್ಯಾವಾಟಿಕೆ : ತಡರಾತ್ರಿ ದಾಳಿ,ಮೂವರು ಮಹಿಳೆಯರ ರಕ್ಷಣೆ – ಹಲವರ ಬಂಧನ..??|TTH
ತೀರ್ಥಹಳ್ಳಿ: ರಾಜ್ಯಾದ್ಯಂತ ಸುದ್ದಿಯಾಗಿದ್ದ ಎಬಿವಿಪಿ ಅಧ್ಯಕ್ಷನ ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಪ್ರತೀಕ್ ಗೌಡನ ಮೇಲೆ ತೀರ್ಥಹಳ್ಳಿ ಪೊಲೀಸರು ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಇದರ ನಡುವೆ ತೀರ್ಥಹಳ್ಳಿ ಪಟ್ಟಣದಲ್ಲಿ ಮತ್ತೊಂದು ವೇಶ್ಯಾವಾಟಿಕೆ ದಂಧೆ ಬುಧವಾರ ರಾತ್ರಿ ಬಯಲಾದ ಬಗ್ಗೆ ಮೂಲಗಳು ತಿಳಿಸಿವೆ. ಸಿಟಿ ಮದ್ಯದಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಿದ ಪ್ರಕರಣದಲ್ಲಿ ಮೂವರು ಮಹಿಳೆಯರನ್ನು ರಕ್ಷಿಸಿದ್ದು ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರಿಂದ ಮಾಹಿತಿ ಇನ್ನಷ್ಟೇ ತಿಳಿದು…