ಕ್ರೈಂ ಸುದ್ದಿ:
Hosanagara |ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟ – ಮನೆ ಸಂಪೂರ್ಣ ಬೆಂಕಿಗಾಹುತಿ : ಗ್ಯಾಸ್ ಸಿಲಿಂಡರ್ ಏಜೆನ್ಸಿ ವಿರುದ್ದ ಕ್ರಮಕ್ಕೆ ಆಗ್ರಹ
Hosanagara |ಎಲ್ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟ – ಮನೆ ಸಂಪೂರ್ಣ ಬೆಂಕಿಗಾಹುತಿ : ಗ್ಯಾಸ್ ಸಿಲಿಂಡರ್ ಏಜೆನ್ಸಿ ವಿರುದ್ದ ಕ್ರಮಕ್ಕೆ ಆಗ್ರಹ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು ಶಿಕ್ಷಕರಾದ ಬಸವನಾಯ್ಕ ಎಂಬುವವರಿಗೆ ಸೇರಿದ ಮನೆ ಬೆಂಕಿಗಾಹುತಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಜೇನಿ ಗ್ರಾಪಂ ವ್ಯಾಪ್ತಿಯ ಜಂಬಳ್ಳಿ ಗ್ರಾಮದ ಭೀಮನಕೆರೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಶನಿವಾರ ಸಂಜೆ ಹೊಸನಗರದ ಬಾಲಾಜಿ ಇಂಡೇನ್ ಗ್ಯಾಸ್ ಏಜೆನ್ಸಿಯಿಂದ ಸರಬರಾಜಾದ ಸಿಲಿಂಡರ್ ಅನ್ನು ಭಾನುವಾರ ಬೆಳಗ್ಗೆ 8:30 ರ ಸುಮಾರಿಗೆ ರೆಗ್ಯುಲೇಟರ್…
ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಲೈಂಗಿಕ ಕಿರುಕುಳ – 19 ವರ್ಷದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ
ಪೋಕ್ಸೋ ಕೇಸ್ನಲ್ಲಿ ಆರೋಪಿಯೊಬ್ಬನಿಗೆ ಶಿವಮೊಗ್ಗ ಕೋರ್ಟ್ 20 ವರ್ಷ ಶಿಕ್ಷೆ ವಿಧಿಸಿದೆ. 2022 ನೇ ಸಾಲಿನಲ್ಲಿ ಭದ್ರಾವತಿ ನಗರದಲ್ಲಿ ನಡೆದ ಘಟನೆ ಇದು. ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿರುವಂತೆ 19 ವರ್ಷದ ಯುವಕನೊಬ್ಬ, 15 ವರ್ಷದ ಬಾಲಕಿಗೆ ಮದುವೆಯಾಗ್ತೀನಿ ಎಂದು ಪುಸಲಾಯಿಸಿದ್ದ. ಅಷ್ಟೆಅಲ್ಲದೆ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಈ ಸಂಬಂಧ ಬಾಲಕಿ ತಂದೆ ದೂರು ಕೊಟ್ಟಿದ್ದರು. ಘಟನೆಯ ಬಗ್ಗೆ ದೂರು ಪಡೆದಿದ್ದ ಭದ್ರಾವತಿ ನ್ಯೂಟೌನ್ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ…
SAGARA | ಅಪರಿಚಿತರಿಂದ ಹೊಲಕ್ಕೆ ನೀರು ಬಿಡಲು ಹೋದವನಿಗೆ ಗುಂಡೇಟು – ಕಾಲಿಗೆ ತೀವ್ರ ಪೆಟ್ಟು
ಬೇಟೆಗೆ ಬಂದವರಿಂದ ಹೊಲಕ್ಕೆ ಹೋಗಿದ್ದವರಿಗೆ ಗುಂಡೇಟು ಸಾಗರ : ಹೊಲಕ್ಕೆ ನೀರು ಬಿಡಲು ಹೋದಾಗ ವ್ಯಕ್ತಿಯೊಬ್ಬರಿಗೆ ಗುಂಡೇಟು ತಗುಳಿ ಗಾಯಗೊಂಡಿರುವ ಘಟನೆ ಮಾಲ್ವೆ ಗ್ರಾಮದಲ್ಲಿ ನಡೆದಿದೆ. ಶುಂಠಿ ಬೆಳೆಗೆ ನೀರು ಬಿಡಲು ಹೊಲಕ್ಕೆ ಹೋಗಿದ್ದ ಸಮಯದಲ್ಲಿ ಪಕ್ಕದ ಗುಡಿಸಲಿನ ಎದುರು ನಿಂತಿದ್ದ ವ್ಯಕ್ತಿಗೆ ಬೇಟೆಗೆ ಬಂದಿದ್ದ ಅಪರಿಚಿತರು ಗುಂಡು ಹೊಡೆದು ಕಾಲಿಗೆ ಗಾಯ ಮಾಡಿದ್ದಾರೆ ಎಂದು ಹೇಳಲಾಗುತಿದೆ. ಗಾಯಗೊಂಡಿರುವ ರವಿಯನ್ನು ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಲ್ವೆ ಗ್ರಾಮದ ಬಿಂದುರವರು ಸ್ನೇಹಿತ ರವಿಯೊಂದಿಗೆ ಹೊಲಕ್ಕೆ…
Ripponpete | ಸೂಡೂರು ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಇಬ್ಬರ ಸ್ಥಿತಿ ಗಂಭೀರ
Ripponpete | ಸೂಡೂರು ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಇಬ್ಬರ ಸ್ಥಿತಿ ಗಂಭೀರ ರಿಪ್ಪನ್ಪೇಟೆ : ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ರಿಪ್ಪನ್ಪೇಟೆ ಸಮೀಪದ ಸೂಡೂರು ಚೆಕ್ ಪೋಸ್ಟ್ ಬಳಿಯ ತಿರುವಿನಲ್ಲಿ ನಡೆದಿದೆ. ಮಹೀಂದ್ರಾ XYLO ಕಾರಿನಲ್ಲಿ ಐವರು ಪ್ರಯಾಣಿಸುತಿದ್ದು ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಮೆಗ್ಗಾನ್ ಗೆ ಕರೆದೊಯ್ಯಲಾಗಿದೆ. ಭದ್ರಾವತಿ ಮೂಲದವರು ರಿಪ್ಪನ್ಪೇಟೆ ಸಮೀಪದ ಕೆಂಚನಾಲ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಬಂದು ಕುರಿ…
Ripponpete | ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು – ತಪ್ಪಿದ ಭಾರಿ ಅನಾಹುತ
Ripponpete | ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು – ತಪ್ಪಿದ ಭಾರಿ ಅನಾಹುತ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿ ಉರುಳಿ ಬಿದ್ದಿರುವ ಘಟನೆ ರಿಪ್ಪನ್ಪೇಟೆಯ ಹೊಸನಗರ ರಸ್ತೆಯ ತಾವರೆಕೆರೆ ಸಮೀಪದಲ್ಲಿ ನಡೆದಿದೆ. ರಿಪ್ಪನ್ಪೇಟೆ ಕಡೆಯಿಂದ ಹೊಸನಗರ ಕಡೆಗೆ ತೆರಳುತಿದ್ದ ಮಾರುತಿ ಸ್ವಿಫ್ಟ್ ಕಾರು ತಾವರೆಕೆರೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಕೆಳಗೆ ಇಳಿದ ಪರಿಣಾಮ ಲೈಟ್ ಕಂಬಕ್ಕೆ ಡಿಕ್ಕಿಯಾಗಿ, ಮೋಟಾರ್ ಪಂಪ್ ಹೌಸ್ ಗೆ ಡಿಕ್ಕಿಯಾಗಿ…
Thirthahalli | ತುಂಗಾ ನದಿಯಲ್ಲಿ ನೀರು ಪಾಲಾಗಿದ್ದ ಯುವಕ ಶವವಾಗಿ ಪತ್ತೆ!
ತುಂಗಾ ನದಿಯಲ್ಲಿ ನೀರು ಪಾಲಾಗಿದ್ದ ಯುವಕ ಶವವಾಗಿ ಪತ್ತೆ! ತೀರ್ಥಹಳ್ಳಿ : ಜಾತ್ರಾ ಮಹೋತ್ಸವಕ್ಕೆ ಅಂಗಡಿ ಮುಂಗಟ್ಟು ಇಡಲು ಬಂದಿದ್ದ ಬಿಹಾರ್ ಮೂಲದ ಆರಿಫ್ (13 ವರ್ಷ ) ಬುಧವಾರ ತುಂಗಾ ನದಿಗೆ ಈಜಲು ತೆರಳಿದ್ದಾಗ ಕಾಲು ಜಾರಿ ನೀರು ಪಾಲಾಗಿದ್ದ. ಅಗ್ನಿ ಶಾಮಕದಳ ಹಾಗೂ ಸ್ಥಳೀಯರು ತೀವ್ರ ಶೋಧ ಕಾರ್ಯ ನಡೆದಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ. ಗುರುವಾರ ಸಂಜೆ ಯುವಕನ ಮೃತದೇಹ ಪತ್ತೆಯಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
Ripponpete | ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ – ಆರೋಪಿಯ ಬಂಧನ
Ripponpete | ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ – ಆರೋಪಿಯ ಬಂಧನ ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಹರತಾಳು ಗ್ರಾಮದ ವ್ಯಕ್ತಿಯೊಬ್ಬ ಪಕ್ಕದ ಮನೆಯ ಮಹಿಳೆಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಹರತಾಳು ಗ್ರಾಮದ ರಾಘವೇಂದ್ರ ಬಂಧಿತ ಆರೋಪಿಯಾಗಿದ್ದಾನೆ. ಘಟನೆಯ ಹಿನ್ನಲೆ : ಹರತಾಳು ಗ್ರಾಮದ ಮಹಿಳೆಯೊಬ್ಬರು ಪ್ರತಿ ನಿತ್ಯ ಕೂಲಿ ಕೆಲಸಕ್ಕೆ ಹೋಗುವಾಗ ಅವರ ಪಕ್ಕದ ಮನೆಯ ರಾಘವೇಂದ್ರ ಎಂಬಾತ ಕಾಡಿನ ಹತ್ತಿರ ಬಂದು ನೀನು ನನಗೆ ಇಷ್ಟ…
ತೀರ್ಥಹಳ್ಳಿ – ತುಂಗಾ ನದಿಯಲ್ಲಿ ಬಿಹಾರ ಮೂಲದ ಬಾಲಕ ನೀರುಪಾಲು – ಅಗ್ನಿಶಾಮಕ ದಳದಿಂದ ತೀವ್ರ ಶೋಧ | Thirthahalli
ತೀರ್ಥಹಳ್ಳಿ – ತುಂಗಾ ನದಿಯಲ್ಲಿ ಬಿಹಾರ ಮೂಲದ ಬಾಲಕ ನೀರುಪಾಲು – ಅಗ್ನಿಶಾಮಕ ದಳದಿಂದ ತೀವ್ರ ಶೋಧ | Thirthahalli ತೀರ್ಥಹಳ್ಳಿ : ಜಾತ್ರೆಯಲ್ಲಿ ವ್ಯಾಪರಕ್ಕಾಗಿ ಅಂಗಡಿ ಮುಂಗಟ್ಟು ಹಾಕಲು ಬಂದಿದ್ದ ಬಿಹಾರಿ ಮೂಲದ ಆರಿಫ್ (13) ಎಂಬ ಬಾಲಕ ತುಂಗಾ ನದಿಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆಯೊಂದು ನಡೆದಿದೆ. ತಂದೆಯ ಜೊತೆ ಸ್ನಾನಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಜಾತ್ರೆಯ ತಯಾರಿ ಬಿರುಸಿನಿಂದ ಸಾಗುತ್ತಿರುವ ಹಿನ್ನಲೆಯಲ್ಲಿ ಅಂಗಡಿ ಮಳಿಗೆ ಹಾಕಲು ದೇಶಾದ್ಯಂತ ವ್ಯಾಪಾರಿಗಳು ಪ್ರತಿ ವರ್ಷವೂ…
Hosanagara | ಬೈಕ್ ಹಾಗೂ ಲಾರಿ ನಡುವೆ ಅಪಘಾತ ಪ್ರಕರಣ – ಬೈಕ್ ಸವಾರ ಗರ್ತಿಕೆರೆಯ ಶಮಂತ್ ಸ್ಥಳದಲ್ಲಿಯೇ ಸಾವು
Hosanagara | ಬೈಕ್ ಹಾಗೂ ಲಾರಿ ನಡುವೆ ಅಪಘಾತ ಪ್ರಕರಣ – ಬೈಕ್ ಸವಾರ ಗರ್ತಿಕೆರೆಯ ಶಮಂತ್ ಸ್ಥಳದಲ್ಲಿಯೇ ಸಾವು ಹೊಸನಗರ ಸಮೀಪದ ಮಾವಿನಹೊಳೆ ಕ್ರಾಸ್ ನಲ್ಲಿ ಕಂಟೇನರ್ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ಯುವಕನನ್ನು ಗರ್ತಿಕೆರೆ ಮೂಲದ ಸುಮಂತ್ ಎಂದು ಗುರುತಿಸಲಾಗಿದೆ. ಹೊಸನಗರ ಕಡೆಯಿಂದ ಸಾಗರ ಕಡೆಗೆ ತೆರಳುತ್ತಿದ್ದ ಕಂಟೇನರ್ ಲಾರಿ ಮತ್ತು ಸಾಗರ ಕಡೆಯಿಂದ ಹೊಸನಗರ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ…
Hosanagara | ಬೈಕ್ ಮತ್ತು ಲಾರಿ ನಡುವೆ ಅಪಘಾತ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು
Hosanagara | ಬೈಕ್ ಮತ್ತು ಲಾರಿ ನಡುವೆ ಅಪಘಾತ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು ಹೊಸನಗರ : ಇಲ್ಲಿನ ಮಾವಿನಹೊಳೆ ಕ್ರಾಸ್ ನಲ್ಲಿ ಬೈಕ್ ಹಾಗೂ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಸನಗರ ಕಡೆಯಿಂದ ಸಾಗರ ಕಡೆಗೆ ತೆರಳುತ್ತಿದ್ದ ಕಂಟೇನರ್ ಲಾರಿ ಮತ್ತು ಸಾಗರ ಕಡೆಯಿಂದ ಹೊಸನಗರ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್ ಸವಾರ ಹೊಂಬುಜ ಸಮೀಪದ ಗರ್ತಿಕೆರೆ ಮೂಲದವನೆಂದು…