Headlines

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

ನವಜಾತ ಶಿಶುವನ್ನು ಚೀಲದಲ್ಲಿಟ್ಟು ಬಿಟ್ಟು ಹೋದ ಅಪರಿಚಿತರು

ನವಜಾತ ಶಿಶುವನ್ನು ಚೀಲದಲ್ಲಿಟ್ಟು ಬಿಟ್ಟು ಹೋದ ಅಪರಿಚಿತರು ಶಿವಮೊಗ್ಗ ನಗರದ ಹೊರವಲಯದಲ್ಲಿ ಪುಟ್ಟ ಮಗುವೊಂದನ್ನು ಚೀಲದಲ್ಲಿಟ್ಟು ಹೋಗಿರುವ ಘಟನೆಯೊಂದು ನಡೆದಿದೆ. ಶಿವಮೊಗ್ಗ ನಗರದ ಶ್ರೀರಾಮಪುರದ ಬಳಿಯಲ್ಲಿ ನವಜಾತ ಶಿಶುವೊಂದನ್ನು ಕೈ ಚೀಲದಲ್ಲಿ ಇಟ್ಟು ಹೋಗಿದ್ದಾರೆ. ಸಾಗರ ರಸ್ತೆಯ ಸಮೀಪದಲ್ಲಿಯೇ ಮಗುವನ್ನ ಬಿಟ್ಟು ಹೋಗಲಾಗಿದೆ. ಸ್ಥಳೀಯರು ಮಗುವನ್ನ ಗಮನಿಸಿ ತಕ್ಷಣವೇ ಆರೈಕೆ ಮಾಡಿದ್ದಾರೆ. ಮಗುವಿಗೆ ಬಿಸಿ ನೀರು ತಂದು ಸ್ನಾನ ಮಾಡಿಸಿ, ಚಳಿಯಾಗದಿರಲೆಂದು ಮಪ್ಲರ್‌ ಕಟ್ಟಿದ್ದಾರೆ. ಪಂಚೆಯಲ್ಲಿ ಮಗುವನ್ನ ಸುತ್ತಿ , ಅದಕ್ಕೊಂದು ಚಿಕ್ಕ ಡ್ರೆಸನ್ನ ಸಹ ಹಾಕಿದ್ದಾರೆ….

Read More

SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಯಾವ್ಯಾವ ದಿನ, ಯಾವ ಪರೀಕ್ಷೆ?

SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಯಾವ್ಯಾವ ದಿನ, ಯಾವ ಪರೀಕ್ಷೆ? ಬೆಂಗಳೂರು: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆಗೆ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಮಾರ್ಚ್ 21 ರಿಂದ ಏಪ್ರಿಲ್ 4 ರ ವರೆಗೆ SSLC ಪರೀಕ್ಷೆ- 1 ಹಾಗೂ ಮಾರ್ಚ್ 1 ರಿಂದ, ಮಾರ್ಚ್ 20 ರ ವರೆಗೆ ದ್ವೀತಿಯ ಪಿಯುಸಿ- 1 ಪರೀಕ್ಷೆ ನಡೆಯಲಿದೆ. SSLC ಪರೀಕ್ಷೆ  ವೇಳಾಪಟ್ಟಿ…

Read More

RIPPONPETE | ಬೋರ್ವೆಲ್ ಕೊರೆಯುವಾಗ ಬಿರುಕು ಬಿಟ್ಟ ಭೂಮಿ – ರಸ್ತೆ ಹಾಗೂ ಮನೆಗಳಿಗೆ ಡ್ಯಾಮೇಜ್ ಆರೋಪ

RIPPONPETE | ಬೋರ್ವೆಲ್ ಕೊರೆಯುವಾಗ ಬಿರುಕು ಬಿಟ್ಟ ಭೂಮಿ – ರಸ್ತೆ ಹಾಗೂ ಮನೆಗಳಿಗೆ ಡ್ಯಾಮೇಜ್ ಆರೋಪ ನೀರಿಗಾಗಿ ಕಾದು ಕುಳಿತಿದ್ರು. ಎಷ್ಟೊತ್ತಿಗೆ ಅಂತಾ ಕಾದುಕುಳಿತ್ತಿದ್ದರಿಗೆ ಶಾಕ್ ಅಗಿದ್ದು ಏಕಾಏಕಿ ಬೋರ್ ವೇಲ್ ಕೊರೆಯೋ ಜಾಗದ ಸುತ್ತ ಕಾಣಿಸಿಕೊಂಡ ಬಿರುಕು. ಕೆಲವ್ರು ಶಬ್ದ ಬಂತು ಅಂತಿದ್ರೆ ಇನ್ನೂ ಕೆಲವ್ರು ಇಲ್ಲ ಅಂತಿದ್ದಾರೆ. ಅದ್ರೂ ಡ್ಯಾಮೇಜ್ ಗೆ ಅತಂಕವಂತೂ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಗ್ರಾಪಂ ವ್ಯಾಪ್ತಿಯ ಕೆರೆಹಳ್ಳಿ ಗ್ರಾಮಸ್ಥರಿಗೆ ಮೂಡಿದೆ. ಹೌದು ಕೆರೆಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಮನೆ…

Read More

ವಾಟ್ಸಪ್ ಸ್ಟೇಟಸ್ ಗೆ ವಿ*ಷ ಕುಡಿಯುವ ವೀಡಿಯೋ ಅಪ್ಲೋಡ್ ಮಾಡಿ ಯುವಕ ಆತ್ಮ ಹ*ತ್ಯೆಗೆ ಯತ್ನ

ವಾಟ್ಸಪ್ ಸ್ಟೇಟಸ್ ಗೆ ವಿ*ಷ ಕುಡಿಯುವ ವೀಡಿಯೋ ಅಪ್ಲೋಡ್ ಮಾಡಿ ಯುವಕ ಆತ್ಮ ಹ*ತ್ಯೆಗೆ ಯತ್ನ ಹೊಸನಗರ ತಾಲೂಕು ನಗರ ಹೋಬಳಿಯ ಬೈಸೆ ಗ್ರಾಮದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ಸಂಜೆ ನಡೆದಿದ್ದು, ವಿಷ ಸೇವನೆಯ ವಿಡಿಯೋ ಮಾಡಿ ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡಿರುವ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ರಾಕೇಶ ಜೋಗಿ ಎಂಬ 27 ವರ್ಷದ ಯುವಕ ವಿಷ ಸೇವನೆ ಮಾಡಿರುವ ವಿಡಿಯೋ ಮಾಡಿಕೊಂಡು ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡಿದ್ದಾನೆ.  ಆತನನ್ನ ಮೊದಲು…

Read More

ಅಧಿಕಾರಿಗಳ ದಿಡೀರ್ ದಾಳಿ – 60 ಮೆಟ್ರಿಕ್ ಟನ್ ಮರಳು ವಶಕ್ಕೆ

ಅಧಿಕಾರಿಗಳ ದಿಡೀರ್ ದಾಳಿ – 60 ಮೆಟ್ರಿಕ್ ಟನ್ ಮರಳು ವಶಕ್ಕೆ ಶಿವಮೊಗ್ಗ: ತಾಲೂಕಿನ ಹಾಡೋನಹಳ್ಳಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ವಿಷಯ ತಿಳಿದು ಬರುತ್ತಿದ್ದಂತೆ, ತಹಶೀಲ್ದಾರ್ ರಾಜೀವ್, ಶಿವಮೊಗ್ಗ ಗ್ರಾಮಾಂತರ ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಿಯಾ ನೇತೃತ್ವದಲ್ಲಿ ದಾಳಿ ನಡೆಸಿ 60 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಹಲವು ದಿನಗಳ ಹಿಂದೆ ಹಾಡೋನಹಳ್ಳಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ದಾಳಿ ನಡೆಸಿದ ಗಣಿ ಮತ್ತು ಭೂ…

Read More

ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಅಂಜನಿ ಹುಲಿ ಸಾವು

ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಅಂಜನಿ ಹುಲಿ ಸಾವು ಶಿವಮೊಗ್ಗ : ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ 17 ವರ್ಷದ ಅಂಜನಿ ಎಂಬ ಹೆಣ್ಣು ಹುಲಿ ಅನಾರೋಗ್ಯ ಕಾರಣದಿಂದ ಬುಧವಾರ (ಜ.08) ರಾತ್ರಿ ಮೃತಪಟ್ಟಿದೆ. ತ್ಯಾವರೆ ಕೊಪ್ಪದ ಹುಲಿ ಮತ್ತು ಸಿಂಹ ಧಾಮದ ಹುಲಿ ಅಂಜನಿ, ಬಹು ಅಂಗಾಗ ವೈಫಲ್ಯದಿಂದ ನಿನ್ನೆ ರಾತ್ರಿ ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ತಿಳಿಸಿದ್ದಾರೆ. ಅಂಜನಿ ವಯೋ ಸಹಜ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ಪಶುವೈದ್ಯಕೀಯ…

Read More

RIPPONPETE | ಬೆಳ್ಳೂರಿನಲ್ಲಿ ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ | ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

RIPPONPETE | ಬೆಳ್ಳೂರಿನಲ್ಲಿ ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ | ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ ಮನೆ ಬಾಗಿಲಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾ.ಪಂ ವ್ಯಾಪ್ತಿಯ ಗುಬ್ಬಿಗಾ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಗುಬ್ಬಿಗಾ ಗ್ರಾಮದ ಮಂಜಪ್ಪಗೌಡ ಎಂಬುವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದ್ದು, ಮನೆ ಬಾಗಿಲು ಸಮೀಪವೇ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ನಾಯಿಗಳು ಬೊಗಳಿದಾಗ ಮನೆಯವರು ಅಷ್ಟಾಗಿ…

Read More

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (09-01-2025) ಕೃಷಿ ಪಂಪ್ ಸೆಟ್ ಗೆ 3 ಫೇಸ್ ವಿದ್ಯುತ್ ಇರಲ್ಲ

ರಿಪ್ಪನ್‌ಪೇಟೆ ಸುತ್ತಮುತ್ತಲಿನ ಈ ಗ್ರಾಪಂ ವ್ಯಾಪ್ತಿಯಲ್ಲಿ ನಾಳೆ (09-01-2025) 3 ಫೇಸ್ ವಿದ್ಯುತ್ ಇರಲ್ಲ ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 09/01/25 ರಂದು ಬೆಳಿಗ್ಗೆ 09-00 ರಿಂದ ಸಂಜೆ 06.00 ಗಂಟೆಯವರೆಗೆ  “3 ಫೇಸ್” ವಿದ್ಯುತ್ ಸರಬರಾಜು ಇರುವುದಿಲ್ಲ. ಶಿವಮೊಗ್ಗದ ಎಂ ಆರ್ ಎಸ್ ನಲ್ಲಿ ತುರ್ತು ದುರಸ್ತಿ ಕಾರ್ಯವಿರುವುದರಿಂದ ರೈತರ ಪಂಪ್ ಸೆಟ್ , ಹಾಗೂ ಯಂತ್ರೋಪಕರಣಗಳ ಬಳಕೆಗೆ ಪೂರಕವಾಗುವ 3 ಫೇಸ್ ವಿದ್ಯುತ್ ಇರುವುದಿಲ್ಲ ಉಳಿದಂತೆ ವಿದ್ಯುತ್ ಸರಬರಾಜಿನಲ್ಲಿ…

Read More

ತೀರ್ಥಹಳ್ಳಿ | ಸಿಡಿಯದ ಪಟಾಕಿಗಳನ್ನು ಸಂಗ್ರಹಿಸಿದ ಬಾಲಕ – ಏಕಾಏಕಿ ಬ್ಲಾಸ್ಟ್ ಆಗಿ ಗಂಭೀರ ಗಾಯ!

ತೀರ್ಥಹಳ್ಳಿ | ಸಿಡಿಯದ ಪಟಾಕಿಗಳನ್ನು ಸಂಗ್ರಹಿಸಿದ ಬಾಲಕ – ಏಕಾಏಕಿ ಬ್ಲಾಸ್ಟ್ ಆಗಿ ಗಂಭೀರ ಗಾಯ! ಪಟಾಕಿ ಸಿಡಿದ ಪರಿಣಾಮ 9 ವರ್ಷದ ಬಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪಟಾಕಿ ಸಿಡಿದ ಪರಿಣಾಮ ಬಾಲಕನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ. ಬಾಲಕನ ಮೈ, ಕೈಗಳಿಗೆ ಹಾಗೂ ಎರಡು ಕಣ್ಣುಗಳಿಗೆ ಗಾಯಗಳಗಿವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಗಾಯಗೊಂಡಿರುವ 9 ವರ್ಷದ ಬಾಲಕ ತೇಜು ಎಂದು ತಿಳಿದುಬಂದಿದೆ. ಜನವರಿ…

Read More

11 ಕೆ ವಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ತಪ್ಪಿದ ಭಾರಿ ಅನಾಹುತ

ಆನಂದಪುರ : ಭಾರಿ ಪ್ರಮಾಣದ ಇಬ್ಬನಿ ಸುರಿಯುತಿದ್ದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ 11 ಕೆ ವಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿರುವ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದಲ್ಲಿ ನಡೆದಿದೆ. ಆಚಾಪುರದ ರಾಷ್ಟ್ರೀಯ ಹೆದ್ದಾರಿ 206ರ ಶಿವಮೊಗ್ಗದಿಂದ ಸಾಗರ ಕಡೆಗೆ ಬರುತ್ತಿದ್ದ ಕಾರು 11 ಕೆವಿ ವಿದ್ಯುತ್ ಸಾಮರ್ಥ್ಯವಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಮುಂಭಾಗ ಕೂಡ ಜಖಂಗೊಂಡಿದೆ. ಮಂಗಳವಾರ ಮುಂಜಾನೆ ಭಾರಿ ಪ್ರಮಾಣದ ಇಬ್ಬನಿ ಬೀಳುತ್ತಿದ್ದ…

Read More