ಪಿಕಪ್ ಚಾನೆಲ್ ಗೆ ಹಾನಿ – ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿ ,ದುರಸ್ತಿ ಕಾರ್ಯಕ್ಕೆ ಚಾಲನೆ
ಮನೆ ಮೇಲೆ ಬಿದ್ದ ತೆಂಗಿನ ಮರ – ಪರಿಹಾರದ ಭರವಸೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮದಿಂದಾಗಿ ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಸುಗುಂಡಿಯ ಪಿಕಪ್ ಚಾನೆಲ್ ಹಾಗೂ ಹೆಚ್. ಕುನ್ನೂರು ಗ್ರಾಮದ ಕಾನ್ ಕೆರೆಯ ದಂಡೆಗೂ ಅಪಾರ ಮಳೆಯಿಂದ ಹಾನಿ ಆಗಿದೆ ಒಡೆದು ನೀರು ಸುತ್ತಮುತ್ತಲಿನ ಕೃಷಿ ಜಮೀನಿಗೆ ನುಗ್ಗಿದ ಪರಿಣಾಮವಾಗಿ ಅಪಾರ ನಷ್ಟ ಸಂಭವಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಹಾನಿಯುಂಟಾಗಿರುವ ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಸೂಚನೆಯಂತೆ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ತೆರಳಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸ್ಥಳೀಯ ಗ್ರಾಮಾಡಳಿತಕ್ಕೆ ಸೂಚಿಸಿದ್ದಾರೆ.
ಕೂಡಲೇ ಗ್ರಾಮ ಪಂಚಾಯತಿ ಆಡಳಿತ ವರ್ಗ ಜೆಸಿಬಿ ಯಂತ್ರ ಬಳಸಿ, ತಾತ್ಕಾಲಿಕವಾಗಿ ಚಾನೆಲ್ ದುರಸ್ತಿ ಕಾರ್ಯ ಕೈಗೊಂಡಿದೆ.
ಮನೆ ಮೇಲೆ ಬಿದ್ದ ತೆಂಗಿನ ಮರ – ಪರಿಹಾರದ ಭರವಸೆ
ಇನ್ನು ಇಲ್ಲಿನ ಕಾರಕ್ಕಿ ಗ್ರಾಮದ ಆರಗೋಡಿ ನಾಗರಾಜ ಎಂಬುವರ ಮನೆ ಮೇಲೆ ಇಂದು ಮಧ್ಯಾಹ್ನ ತೆಂಗಿನ ಮರ ಬಿದ್ದು ಮನೆಯ ಮೇಲ್ಚಾವಣಿ ಸಂಪೂರ್ಣ ಹಾನಿಗೊಳಗಾಗಿದೆ. ಭಾರೀ ಮಳೆ ಮತ್ತು ಗಾಳಿಯ ಪರಿಣಾಮವಾಗಿ ಮನೆಯ ಸಮೀಪವೇ ಇದ್ದ ತೆಂಗಿನಮರ ಬುಡ ಸಹಿತ ಮನೆ ಮೇಲೆ ಬಿದ್ದು ಸಾವಿರಾರು ರೂಪಾಯಿ ನಷ್ಟವಾಗಿದ್ದು, ಮನೆಯ ಸದಸ್ಯರು ಅಪಾಯದಿಂದ ಪಾರಾಗಿದ್ದರು.
ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ರವರು ಸೂಕ್ತ ಪರಿಹಾರದ ಭರವಸೆ ನೀಡಿ ಕುಟುಂಬ ವರ್ಗಕ್ಕೆ ಧೈರ್ಯ ತುಂಬಿದರು.