Ripponpete | ಬಜರಂಗದಳದ ವತಿಯಿಂದ ಗೋಶಾಲೆಗೆ ಮೇವು ಸಂಗ್ರಹ ಅಭಿಯಾನ
ರಿಪ್ಪನ್‌ಪೇಟೆ : ನಂದಗೋಕುಲ ಗೋಶಾಲೆ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಶ್ರಯದಲ್ಲಿ ಹೊಸನಗರದಲ್ಲಿರುವ ಗೋಶಾಲೆಗೆ ಪಟ್ಟಣದ ಬಜರಂಗದಳ ಘಟಕದ ವತಿಯಿಂದ ಉಚಿತ ಮೇವು ಸಂಗ್ರಹ ಅಭಿಯಾನ ನಡೆಯಿತು.
ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮಸ್ಥರು ಸುಮಾರು 100 ಕ್ಕೂ ಹೆಚ್ಚು ಹೊರೆ ಹುಲ್ಲನ್ನು ನೀಡುವ ಮೂಲಕ ಈ ಮೇವು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.ಈ ಮೂಲಕ ಮೇವುಗಳನ್ನು ಹೊಸನಗರದ ರಮಿತ್ ನೇತ್ರತ್ವದ ಗೋಶಾಲೆಗೆ ಕಳುಹಿಸಿಕೊಡಲಾಗಿದೆ.
ಈ ಸಂದರ್ಭದಲ್ಲಿ ಬಜರಂಗದಳ ಹೊಸನಗರ ತಾಲೂಕ್ ಕಾರ್ಯದರ್ಶಿ ದೇವರಾಜ್ ಕುಷನ್ , ರಾಘವೇಂದ್ರ,ರಮಿತ್ ಹೊಸನಗರ, ರಾಘವೇಂದ್ರ ಪಾಪಣ್ಣ, ಸಂಜಯ್ ಸ್ವಾಮಿ, ರಂಜನ್ ರಾವ್,ಮಂಜು, ಶ್ರೀನಿವಾಸ್ ಆಚಾರ್,ಗಣೇಶ್, ನಾಗಾರ್ಜುನ್ ಸ್ವಾಮಿ, ದಾನೇಶ್ ಅಲ್ಲುವಲ್ಲಿ,ಪ್ರಕಾಶಣ್ಣ, ಜಗದೀಶ್, ಮತ್ತು ಆಲುವಳ್ಳಿ ಗ್ರಾಮಸ್ಥರು ಇದ್ದರು.
ಗೋಶಾಲೆಗಳಿಗೆ ಹುಲ್ಲು ದಾನ ಮಾಡಲು ಇಚ್ಚಿಸಿದ್ದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಕೋರಿದೆ –
ದೇವರಾಜ್ ಕುಷನ್ – 9449175045
ರಂಜನ್ ರಾವ್ – +918197695836