ಹೊಸನಗರ : ತಾಲ್ಲೂಕಿನ ಬಟ್ಟೆಮಲ್ಲಪ್ಪ ಯಕ್ಷರತ್ನ ನಗರ ಜಗನ್ನಾಥಶೆಟ್ಟಿ ವೇದಿಕೆ ಶ್ರೀ ವ್ಯಾಸ ಮಹರ್ಷಿ ಗುರುಕುಲ ವಿದ್ಯಾಲಯದ ಆವರಣ ಬಟ್ಟೆಮಲ್ಲಪ್ಪದಲ್ಲಿ ಹೊಸನಗರ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಲನವನ್ನು ಅರ್ಪಡಿಸಲಾಗಿದೆ ಎಂದು ಹೊಸನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ.ನರಸಿಂಹ ಹೇಳಿದರು.
ಪಟ್ಟಣದ ಶೀತಲ್ ಹೋಟೆಲ್ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ಈ ಕಾರ್ಯಕ್ರಮ ಜ.5ರ ಬೆಳಿಗ್ಗೆ 9 ಗಂಟೆಗೆ ಹೊಸನಗರ ತಹಶೀಲ್ದಾರ್ ರಶ್ಮಿಯವರು ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಿದ್ದು ನಾಡಧ್ವಜವನ್ನು ಕ.ಸಾ.ಪ. ಜಿಲ್ಲಾಧ್ಯಕ್ಷರಾದ ಡಿ. ಮಂಜುನಾಥ್‌ರವರು ಹಾಗೂ ಪರಿಷತ್ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ.ನರಸಿಂಹರವರು ನಿರ್ವಹಿಸುವರು ಎಂದರು.
ಬಟ್ಟೆಮಲ್ಲಪ್ಪದಿಂದ ಸಮ್ಮೇಳನಾದ್ಯಕ್ಷರ ಮೆರವಣಿಗೆ ಪ್ರಾರಂಭವಾಗಲಿದ್ದು ಮೆರವಣಿಗೆಯ ಚಾಲನೆಯನ್ನು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ಚಾಲನೆ ನೀಡಲಿದ್ದಾರೆ. ರಂಗ ಕರ್ಮಿಗಳು ಹಾಗೂ ಸಾಹಿತಿಗಳಾದ ಪ್ರಸನ್ನ ಚರಕರ ಕಾರ್ಯಕ್ರಮ ಉದ್ಘಾಟಿಸಲಿದ್ದು ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾಸ್ತಾವಿಕವಾಗಿ ತ.ಮ.ನರಸಿಂಹ ಹಾಗೂ ನಿಕಟ ಪೂರ್ವ ಅಧ್ಯಕ್ಷ ಸೊನಲೆ ಶ್ರೀನಿವಾಸ್‌ರವರು ಮಾತನಾಡಲಿದ್ದು, ಮುಖ್ಯ ಅತಿಥಿಯಾಗಿ ಜಿಲ್ಲಾ ಅಧ್ಯಕ್ಷ ಡಿ ಮಂಜುನಾಥ್, ತಹಶೀಲ್ದಾರ್ ರಶ್ಮಿ ವಿಧಾನ ಪರಿಷತ್ ಸದಸ್ಯ ಅರುಣ್ ಕುಮಾರ್, ಕಾಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್, ಸಾಹಿತಿ ಮಾರ್ಷಲ್ ಶರಾಂ, ಮಾಜಿ ಸದಸ್ಯ ಕಲಗೋಡು ರತ್ನಾಕರ್, ನಿರ್ದೇಶಕ ಎಂ.ಎಂ. ಪರಮೇಶ್, ಕ.ಸಾ.ಪ ನಿಕಟ ಪೂರ್ವ ಅಧ್ಯಕ್ಷ ಕೆ ಇಲಿಯಾಸ್, ಶಿಕ್ಷಣಾಧಿಕಾರಿ ಎಚ್.ಆರ್ ಕೃಷ್ಣಮೂರ್ತಿಯವರು ಆಗಮಿಸಲಿದ್ದು 12 ಗಂಟೆಗೆ ಕವಿಗೋಷ್ಠಿ ನಡೆಸಲಾಗುತ್ತದೆ.
ಕವಿಗೋಷ್ಠಿಯಲ್ಲಿ ಹೊಸನಗರ ತಾಲ್ಲೂಕಿನ ಕ್ಷೇತ್ರ ವಿಂಗಡನೆ ಪೂರ್ವ ಹಾಗೂ ನಂತರದ ದಿನಗಳ ಬಗ್ಗೆ ನಡೆಯಲಿದ್ದು ಈ ಸಮಾರಂಭದ ಅಧ್ಯಕ್ಷತೆಯನ್ನು ಎಂ.ವಿ.ಜಯರಾಮ್ ವಹಿಸಲಿದ್ದು, ಮಾಜಿ ಶಾಸಕ ಬಿ.ಸ್ವಾಮಿರಾವ್ ಹಾಗೂ ಧನಂಜಯ ಗಾರ್ಗಿಯವರು ವಿಷಯ ಮಂಡಿಸಲಿದ್ದಾರೆ.
ಎರಡನೇಯದಾಗಿ ಮಹಿಳಾ ಗೋಷ್ಠಿ ನಡೆಯಲಿದ್ದು ಈ ಸಮಾರಂಭದ ಅಧ್ಯಕ್ಷತೆಯನ್ನು ಡಾ|| ಅಂಜಲಿ ಅಶ್ವಿನಿಕುಮಾರ್ ಮಹಿಳಾ ಮೀಸಲಾತಿ ಮತ್ತು ಸಬಲೀಕರಣ, ಕುರಿತು ಸೌಮ್ಯ, ಹಾಗೂ ವಸುಧಾ ಚೈತನ್ಯರವರು ವಿಷಯ ಮಂಡಿಸಲಿದ್ದಾರೆ.
ಗೋಷ್ಠಿ 3ರಲ್ಲಿ ಸಮ್ಮೇಳನ ಅಧ್ಯಕ್ಷರ ಬದುಕು ಬರಹಗಳ ಬಗ್ಗೆ ಡಾ|| ರತ್ನಾಕರ್ ಕುನುಗೋಡು ಮಾತನಾಡಲಿದ್ದು ಸಮ್ಮೇಳನ ಅಧ್ಯಕ್ಷರ ಸಮಗ್ರ ಸಾಹಿತ್ಯದ ಬಗ್ಗೆ ಬಿಂಬಿಸಲಿದ್ದಾರೆ.
ಸಂಜೆ 5ಗಂಟೆಗೆ 9ನೇ ಸಾಹಿತ್ಯ ಸಮ್ಮೇಳನದ ಮುಕ್ತಾಯ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ|| ಶಾಂತರಾಮ್ ಪ್ರಭು, ಡಿ ಮಂಜುನಾಥ್, ಹ.ಅ ಪಾಟೀಲ್, ಭಾಗವಹಿಸಲಿದ್ದು ತ.ಮ.ನರಸಿಂಹರವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಶಿಕ್ಷಣ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಗೋಪಾಲಕೃಷ್ಣ, ಆಯನೂರು ಮಂಜುನಾಥ್, ಪಟ್ಟಣ ಪಂಚಾಯತಿ ಸದಸ್ಯ ಹಾಲಗದ್ದೆ ಉಮೇಶ್, ಮಂಜುನಾಥ್ ಕಾಮತ್, ದುಮ್ಮ ವಿನಯ್ ಕುಮಾರ್, ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ತಾಲ್ಲೂಕು ಕಸಾಸಂ ವೇದಿಕೆಯ ಅಧ್ಯಕ್ಷ ನಗರ ರಾಘವೇಂದ್ರ ಇನ್ನೂ ಮುಂತಾದವರು ಆಗಮಿಸಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಿಗೂ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ವೆಂಕಟೇಶ್‌ಮೂರ್ತಿ, ಕುಬೇಂದ್ರಪ್ಪ, ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಕೆ ಇಲಿಯಾಸ್, ಹೆಚ್.ಆರ್ ಪ್ರಕಾಶ್, ಕೆ.ಎಸ್. ರಾಮಕೃಷ್ಣಮೂರ್ತಿ, ನಗರ ರಾಘವೇಂದ್ರ, ವಿಜೇಂದ್ರ ಶೇಟ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷರ ಬಗ್ಗೆ :
ಹನುಮಂತ ಅನಂತ ಪಾಟೀಲರವರು ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಗವಟೂರು ಗ್ರಾಮದಲ್ಲಿ ವಾಸವಾಗಿದ್ದು ಇವರು ಹುಟ್ಟೂರು ಧಾರವಾಡ ಜಿಲ್ಲೆಯವರಾಗಿದ್ದಾರೆ. ಇವರು ಶಿವಮೊಗ್ಗ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರಾಗಿದ್ದು, ಓದು ಬರಹ ಸಂಗೀತ ಶ್ರಮಣ ಗಜಲ್, ಭಾವಗೀತೆಗಳು ಹಳೆಯ ಚಿತ್ರಗೀತೆಗಳು ಆಗಿದ್ದು ಇವರು ಮೂರು ಕವನ ಸಂಕಲನಗಳು ಎರಡು ಲೇಖನಗಳ ಸಂಗ್ರಹ ಒಂದು ಕಥಾ ಸಂಕಲನ ಮತ್ತು ಒಂದು ಚುಟುಕು ಹನಿಗವನಗಳ ಸಂಗ್ರಹವಾಗಿದೆ. ಇವರಿಗೆ ಸಾಕಷ್ಟು ಕಡೆಗಳಲ್ಲಿ ಸನ್ಮಾನಗಳು ಲಭಿಸಿದ್ದು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದವರಾಗಿದ್ದಾರೆ.
ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ:
ಜ. 5 ರಂದು ಬಟ್ಟೆಮಲ್ಲಪ್ಪದ ಶ್ರೀವ್ಯಾಸ ಮಹರ್ಷಿ ಗುರುಕುಲ ವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿರುವ ಹೊಸನಗರ ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತ ಹ.ಅ.ಪಾಟೀಲ್ ಅವರ ನಿವಾಸಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ನೇತೃತ್ವದಲ್ಲಿ ಭೇಟಿ ನೀಡಿ ಆಹ್ವಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಕಾಮತ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ. ನರಸಿಂಹ, ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಭೂಷಣ್, ಹೋಬಳಿ ಘಟಕದ ಸಂಘಟನಾ ಕಾರ್ಯದರ್ಶಿ ಹಸನಬ್ಬ ಬಿ.ಕೆ.ರಾಘವೇಂದ್ರ, ರವಿ, ಆರ್.ಹೆಚ್.ದೇವದಾಸ್ ಇನ್ನಿತರರು ಹಾಜರಿದ್ದರು.