ಕೋಡೂರು , ಬೆಳ್ಳೂರು ಮತ್ತು ಅರಸಾಳು ಗ್ರಾಪಂ ವ್ಯಾಪ್ತಿಯಲ್ಲಿ ಭಾರಿ ಮಳೆಗೆ ಮನೆ ಹಾನಿ – ಸ್ಥಳಕ್ಕೆ ಶಾಸಕರ ಅಪ್ತ ಕಾರ್ಯದರ್ಶಿ ಭೇಟಿ
ರಿಪ್ಪನ್‌ಪೇಟೆ : ಕೋಡೂರು,ಅರಸಾಳು ಹಾಗೂ ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಭಾರಿ ಮಳೆಗೆ ಮನೆಗಳಿಗೆ ಹಾನಿಯುಂಟಾಗಿರುವ ಹಿನ್ನಲೆಯಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ರವರ ಸೂಚನೆಯ ಮೇರೆಗೆ ಮಳೆಹಾನಿ ಪ್ರದೇಶಗಳಿಗೆ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ಕೋಡೂರು ಗ್ರಾಮದಲ್ಲಿರುವ ಮಸೀದಿ ಗುರುಗಳ ಮನೆ ಗೋಡೆ ಬಾರಿ ಮಳೆಗೆ ಕುಸಿದಿತ್ತು ಇಂದ ಹಾನಿ ಆಗಿದ್ದ ಸ್ಥಳಕ್ಕೇ ಬೇಟಿ ಪರಿಶೀಲಿಸಿ ಸೂಕ್ತ ಪರಿಹಾರದ ಭರವಸೆ ನೀಡಿದರು.
ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಚೆಕ್ ಡ್ಯಾಂ ಹಾನಿಯಾದ ಸ್ಥಳಕ್ಕೇ ಬೇಟಿ ನೀಡಿ ಪರಿಶೀಲಿಸಿ ದುರಸ್ತಿ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ.ಅರಸಾಳು ಗ್ರಾಮ ಪಂಚಾಯಿತಿ ತಮ್ಮಡಿಕೊಪ್ಪ ಗ್ರಾಮದ ಹೊಟ್ಳಾಪುರದ ಪ್ರಭಾಕರ್ ರವರ ಮನೆ ಮಳೆಯಿಂದಾಗಿ ಗೋಡೆ ಬಿದ್ದಿತ್ತು, ಸ್ಥಳಕ್ಕೆ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿ ಸೂಕ್ತ ಪರಿಹಾರದ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಅರಸಾಳು ಗ್ರಾಪಂ ಮಾಜಿ ಅಧ್ಯಕ್ಷರಾದ ಉಮಾಕರ್ ಮುಖಂಡರಾದ ಯೋಗೇಶ್ ಬೆಳ್ಳೂರು ಹಾಗೂ ಇನ್ನಿತರರಿದ್ದರು.