ಪಲ್ಸರ್‌ ಬೈಕ್‌ ನ್ನು ಉಡುಗೊರೆಯಾಗಿ ಕೊಟ್ಟು, ಸರ್ಕಾರಿ ಶಾಲೆ ಶಿಕ್ಷಕನಿಗೆ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು| sendoff

ಪಲ್ಸರ್‌ ಬೈಕ್‌ ನ್ನು ಉಡುಗೊರೆಯಾಗಿ ಕೊಟ್ಟು, ಸರ್ಕಾರಿ ಶಾಲೆ ಶಿಕ್ಷಕನಿಗೆ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು|


16 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಪಲ್ಸರ್‌ ಬೈಕ್‌(pulsar bike) ಉಡುಗೊರೆಯಾಗಿ ನೀಡಿ ತಮ್ಮ ನೆಚ್ಚಿನ ಶಿಕ್ಷಕ ಸೆಂಡ್‌ ಆಫ್‌(sendoff) ಮಾಡಿರುವ ಘಟನೆ ಸಾಗರ(sagara) ತಾಲೂಕಿನ ಕುಗ್ರಾಮ ವಳೂರಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಶಿಕ್ಷಕರಿಗೆ ಆಶ್ಚರ್ಯವಾಗುವಂತೆ, ಎಲ್ಲಾ ಗ್ರಾಮಸ್ಥರು ಒಗ್ಗೂಡಿ ಬೈಕ್ ಅನ್ನು ಉಡುಗೊರೆಯಾಗಿ ಖರೀದಿಸಿದ್ದಾರೆ.ಬೈಕ್ ನ ಎಕ್ಸ್ ಶೋರೂಂ ದರದಂತೆ ರೂ.1.10 ಲಕ್ಷಗಳಾಗಿದೆ ಎನ್ನಲಾಗಿದೆ.


ಸಾಗರ ತಾಲೂಕಿನ ಕುಗ್ರಾಮ ವಳೂರಿನ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ಸಂತೋಷ್‌ ಕಾಂಚನ್‌ ಅವರು ಕುಂದಾಪುರದ(Kundapura) ವಾರಾಹಿ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.

 ಈ ಹಿನ್ನಲೆಯಲ್ಲಿ ಶಾಲೆ ಆವರಣದಲ್ಲಿ ಅವರಿಗಾಗಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.ಈ ವೇಳೆ ಅವರಿಗೆ , ಹಿರಿಯ ವಿದ್ಯಾರ್ಥಿಗಳು ಪಲ್ಸರ್‌ ಬೈಕ್‌ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. 

ಅಂದ ಹಾಗೇ ಶಿವಮೊಗ್ಗ ‌ಜಿಲ್ಲೆಯ ಸಾಗರ ತಾಲೂಕಿನ ವಳೂರು ಗ್ರಾಮ. ಬಹುತೇಕ ಕುಣಬಿ ಎಂಬ ಕಾನುವಾಸಿ ಸಮುದಾಯವಿರುವ ವಿರಳ ಮನೆಗಳ ಊರು ಆಗಿದ್ದು 2007ರಲ್ಲಿ ಶಿಕ್ಷಕನಾಗಿ ಬಂದಾಗ ಸಂತೋಷ್ ಗೆ 20 ವರ್ಷ. ಬರೊಬ್ಬರಿ 16 ವರ್ಷ ಇದೇ ಹಳ್ಳಿಯಲ್ಲಿ ಸೇವೆ.‌ ಇಬ್ಬರೇ ಶಿಕ್ಷಕರಿರುವ ( 1 ರಿಂದ 7 ), ಕೇವಲ ಇಪತ್ತು ಮಕ್ಕಳಿರುವ ಶಾಲೆ. ಊರಲ್ಲೇ ಇದ್ದು ಮಕ್ಕಳಿಗೆ ಪಾಠ ಹೇಳುತಿದ್ದರು.

ಊರಲ್ಲಿ ಯಾರಿಗಾದರು ಅನಾರೋಗ್ಯ ಉಂಟಾದರೆ ಇವರ ಹಳೇ ಬೈಕ್ ಆಂಬ್ಯುಲೆನ್ಸ್(ambulance) ಆಗಿತ್ತು ಹೀಗಾಗಿ ಈ ಋಣಕ್ಕೆ ಬಡ ಜನರು ಹಣ ಸಂಗ್ರಹಿಸಿ ಬೈಕ್ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ.

ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಬೈಕ್‌ ಉಡುಗೊರೆಯಾಗಿ ನೀಡಿ ಶಿಕ್ಷಕರೊಬ್ಬರಿಗೆ ಬೀಳ್ಕೊಡುಗೆ ನೀಡಿರುವುದು ವಿಭಿನ್ನವಾಗಿದೆ. ಊರಿನವರ ಮನಸಲ್ಲಿ ಶಿಕ್ಷಕ ಸಂತೋಷ್‌ ಕಾಂಚನ್‌ ಅಚ್ಚಾಗಿ ಉಳಿದಿರುವುದಕ್ಕೆ ಇದು ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *