ಚತುಷ್ಪಥ ರಸೆ ಕಾಮಗಾರಿ ಹಣವಿಲ್ಲದೇ ಕುಂಠಿತವಾಗಿತ್ತು – ವಿಶೇಷ ಆಸಕ್ತಿಯಿಂದ ಸರ್ಕಾರದಿಂದ ಹಣ ಬಿಡುಗಡೆಗೊಳಿಸಿ ಕಾಮಗಾರಿ ಶೀಘ್ರ ಮುಗಿಸುವಂತೆ ಸೂಚಿಸಿದ್ದೇನೆ – ಶಾಸಕ ಬೇಳೂರು
ಸುಮಾರು 5.50 ಕೋಟಿ ರೂ. ವೆಚ್ಚದಲ್ಲಿ ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ವೀಕ್ಷಿಸಿದರು.
ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಪಟ್ಟಣದ ನಾಗರೀಕರ ಬಹುದಿನಗಳ ಬೇಡಿಕೆಯ ಚತುಷ್ಫಥ ರಸ್ತೆ ಹಣದ ಕೊರತೆಯಿಂದ ಕಾಮಗಾರಿ ಕುಂಠಿತವಾಗಿತ್ತು , ಹಿಂದಿನ ಅವಧಿಯ ಶಾಸಕರು ಚುನಾವಣೆಯ ಹಿನ್ನಲೆಯಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರೆ ಹೊರತು ಕಾಮಗಾರಿಗೆ ಹಣ ತರಲು ವಿಫಲವಾಗಿದ್ದರು ಈ ಹಿನ್ನಲೆಯಲ್ಲಿ ಕಾಮಗಾರಿ ಕುಂಠಿತವಾಗಿತ್ತು ಈಗ ನಮ್ಮ ಸರ್ಕಾರದಿಂದ ಕಾಮಗಾರಿಗೆ ಅಗತ್ಯವಿರುವ ಹಣವನ್ನು ಒದಗಿಸಿದ್ದೇನೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ಪಟ್ಟಣದಲ್ಲಿ ಇನ್ನುಳಿದ ಮೂರು ಪ್ರಮುಖ ರಸ್ತೆಗಳನ್ನು ಚತುಷ್ಪತ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಿ ರಸ್ತೆಗಳ ನಡುವೆ ಲೈಟ್ ಅಳವಡಿಸುವ ಮೂಲಕ ಪಟ್ಟಣವನ್ನು ಸುಂದರ ನಗರವನ್ನಾಗಿಸುತ್ತೇನೆ ಎಂದರು.