Headlines

Shivamogga | ಚರಂಡಿಯ ಸ್ಲ್ಯಾಬ್ ಕುಸಿದು ವ್ಯಕ್ತಿ ಸಾವು – ಅವೈಜ್ಞಾನಿಕ ಕಾಮಗಾರಿಗೆ ಅಮಾಯಕ ಬಲಿ

Shivamogga | ಚರಂಡಿಯ ಸ್ಲ್ಯಾಬ್ ಕುಸಿದು ವ್ಯಕ್ತಿ ಸಾವು – ಅವೈಜ್ಞಾನಿಕ ಕಾಮಗಾರಿಗೆ ಅಮಾಯಕ ಬಲಿ


ಶಿವಮೊಗ್ಗದಲ್ಲಿ ಚರಂಡಿಗೆ ಮುಚ್ಚಿದ್ದ ಸ್ಲ್ಯಾಬ್ ಕುಸಿದು ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಶಿವಮೊಗ್ಗ ನಗರದ ವಿನೋಬನಗರದ ರಸ್ತೆಯೊಂದರಲ್ಲಿ ಚರಂಡಿಗೆ ಹಾಕಲಾಗಿದ್ದ ಸ್ಲ್ಯಾಬ್​ ಕುಸಿದು ಮುತ್ತಪ್ಪ (45)  ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. 

ಮೃತ ವ್ಯಕ್ತಿ ಶಿವಮೊಗ್ಗ ನಗರದ ಬೊಮ್ಮನಕಟ್ಟೆ ನಿವಾಸಿಯಾಗಿದ್ದಾರೆ. ಗುಜರಿ ವ್ಯಾಪಾರ ಮಾಡುತ್ತಿದ್ದ ಮುತ್ತಪ್ಪ ಮೂತ್ರ ವಿಸರ್ಜಿಸುತ್ತಿದ್ದ ವೇಳೆಯಲ್ಲಿ ದಿಡೀರ್ ಸ್ಲ್ಯಾಬ್​ ಕುಸಿದಿದೆ. ಪರಿಣಾಮ ಅವರು ಚರಂಡಿಗೆ ಬಿದ್ದಿದ್ದಾರೆ.ಸುಮಾರು ಹತ್ತು ಅಡಿ ಆಳದ ಚರಂಡಿಗೆ ಬಿದ್ದ ಮುತ್ತಪ್ಪರವರ ಮೇಲೆ ಮತ್ತೊಂದು ಕಾಂಕ್ರೀಟ್ ಸ್ಲ್ಯಾಬ್ ಮೈಮೇಲೆ ಬಿದ್ದಿದೆ. ಪರಿಣಾಮ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. 

Leave a Reply

Your email address will not be published. Required fields are marked *