POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಬಿದರಹಳ್ಳಿಯಲ್ಲಿ ಮನೆಗಳ್ಳತನ ಮಾಡಿದ್ದ ಮೂವರು ಆರೋಪಿಗಳ ಮಾಲು ಸಮೇತ ಬಂಧನ

Screenshot 20241118 213518 WordPress.jpg

ಬಿದರಹಳ್ಳಿಯಲ್ಲಿ ಮನೆಗಳ್ಳತನ ಮಾಡಿದ್ದ ಮೂವರು ಆರೋಪಿಗಳ ಮಾಲು ಸಮೇತ ಬಂಧನ

ರಿಪ್ಪನ್ ಪೇಟೆ : ಇಲ್ಲಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದಲ್ಲಿ ಪೆಬ್ರವರಿ ತಿಂಗಳಿನಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದ ಆರೋಪಿಗಳನ್ನು ಪಿಎಸೈ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿದರಹಳ್ಳಿ ಸಮೀಪದ ಮಂಡ್ಲಿ ಗ್ರಾಮದ ಪುರೋಹಿತ ವೃತ್ತಿ ಮಾಡುವ ಸ್ವಾಮಿ ಹಾಗೂ ಕುಟುಂಬಸ್ಥರು ಫೆಬ್ರವರಿ 15 ರಂದು ಹಾವೇರಿ ಜಿಲ್ಲೆಯ ದೇವಸ್ಥಾನಕ್ಕೆ ತೆರಳಿ ವಾಪಾಸು ಹಿಂದಿರುಗಿದಾಗ ಮನೆಯ ಹಿಂಬದಿಯ ಬಾಗಿಲು ಮುರಿದು ಬೆಡ್ ರೂಮ್ ನಲ್ಲಿದ್ದ ಗಾಡ್ರೇಜ್ ಮುರಿದು 105000 (ಒಂದು ಲಕ್ಷದ ಐದು ಸಾವಿರ) ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಲಾಗಿತ್ತು, ಈ ಬಗ್ಗೆ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ರಿಪ್ಪನ್ ಪೇಟೆ ಪೊಲೀಸರು ಶಿವಮೊಗ್ಗ ನಿವಾಸಿಯಾದ ಅಬ್ದುಲ್ ಶಫೀಕ್  ,ಖಲೀಲ್ ಖಾನ್ ,ಸೈಯದ್ ಜಾವೀದ್ ರವರನ್ನು ಬಂಧಿಸಿ ಕಳವು ಮಾಡಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಉಮೇಶ್ , ಸಂತೋಷ್ ಕೊರವರ , ರಾಮಚಂದ್ರ ಹಾಗೂ ಮಧುಸೂಧನ್ ಇದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.