POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಯುವಕ – ಯುವತಿಯ ವಿಡಿಯೋ ಮಾಡಿ ಹಣಕ್ಕಾಗಿ ಬ್ಲಾಕ್ ಮೇಲ್ : ದೂರು ದಾಖಲು

Screenshot 20250218 181249 Chrome.jpg

ಯುವಕ- ಯುವತಿಯ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ

ಶಿವಮೊಗ್ಗ : ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಸಂಬಂಧ ಪ್ರಕರಣ ದಾಖಲಾಗಿದೆ.

ಯುವಕ ಮತ್ತು ಯುವತಿ ಬೈಕಿನಲ್ಲಿ ಸಕ್ರೆಬೈಲಿನ ಹೊಟೇಲ್ ಒಂದಕ್ಕೆ ಊಟಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ.
ಯುವಕ ಊಟದ ಕೊಠಡಿಯಲ್ಲಿ ಬಿಯರ್ ಬಾಟಲಿ ಇಟ್ಟುಕೊಂಡಿದ್ದ. ಆ ಸಂದರ್ಭ ಅಲ್ಲಿಗೆ ಬಂದ ನಾಲ್ವರು ಅಪರಿಚಿತರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಯುವಕ ಮತ್ತು ಯುವತಿಯನ್ನು ಬಲವಂತವಾಗಿ ಆಟೋದಲ್ಲಿ ಶಿವಮೊಗ್ಗಕ್ಕೆ ಕರೆತಂದು ವಿವಿಧೆಡೆ ಸುತ್ತಾಡಿಸಿದ್ದಾರೆ.ಹಣ ಕೊಡದೆ ಇದ್ದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಲಾಗಿದೆ. ಈ ವೇಳೆ ಯುವತಿ ಬಳಿ ಇದ್ದ 24 ಸಾವಿರ ರೂ., ಹಣ, ಯುವಕನ ಮೊಬೈಲ್‌ನಿಂದ ಗೂಗಲ್ ಪೇ ಮೂಲಕ 1500 ರೂ. ಹಣ ವರ್ಗಾಯಿಸಿಕೊಂಡಿದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಯುವಕ ಮತ್ತು ಯುವತಿಯನ್ನು ಆಟೋದಲ್ಲಿ ಕರೆತಂದು ಎಂಆರ್‌ಎಸ್ ಸರ್ಕಲ್ ಬಳಿ ಬಿಟ್ಟು, ಅವರ ಬೈಕ್ ಕೊಟ್ಟು ಕಳುಹಿಸಲಾಗಿದೆ. ರಾತ್ರಿಯೊಳಗೆ ಒಂದೂವರೆ ಲಕ್ಷ ರೂ. ಹಣ ಕೊಡದೆ ಇದ್ದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಒಡ್ಡಿದಾರೆ ಎಂದು ಆರೋಪಿಸಲಾಗಿದೆ.

ಯುವಕನಿಗೆ ಕರೆ ಮಾಡಿದ್ದ ಅಪರಿಚಿತರು ಹಣ ತಂದು ಕೊಡುವಂತೆ ಬೆದರಿಸಿದ್ದರು. ಆರು ಸಾವಿರ ಗೂ. ಹಣದೊಂದಿಗೆ ಯುವಕ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಬಂದಿದ್ದ. ಆಟೋದಲ್ಲಿ ಬಂದ ಯುವಕರಿಗೆ ಹಣ ಆರು ಸಾವಿರ ರೂ. ಕೊಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಒಂದೂವರೆ ಲಕ್ಷ ರೂ. ಹಣ ನೀಡುವಂತೆ ಆಗ್ರಹಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆಪಾದಿಸಲಾಗಿದೆ.

ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.