ಬಸ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ | ಬಾಲಕಿಗೆ ಗಂಭೀರ ಗಾಯ
ಶಿವಮೊಗ್ಗ: ನಗರದ ಮಂಡ್ಲಿ ಪಂಪ್ ಹೌಸ್ ಬಳಿ ಬಸ್ ಹಾಗೂ ಸ್ಕೂಟಿ ಡಿಕ್ಕಿಯಾಗಿ ಆಕ್ಸಿಡೆಂಟ್ ಆಗಿದೆ. ಘಟನೆಯಲ್ಲಿ ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಬಾಲಕಿಯು ತಂದೆಯೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗೊಂದಿಚಟ್ನಹಳ್ಳಿ ನಿವಾಸಿಯೊಬ್ಬರು ತಮ್ಮ ಮಗಳನ್ನು ಕರೆದಕೊಂಡು ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಶಿವಮೊಗ್ಗದಿಂದ ಬಸ್ ಮಂಗಳೂರಿಗೆ ಹೊರಟಿತ್ತು.ಮಂಡ್ಲಿ ಸಮೀಪ ಸ್ಕೂಟಿ ಮತ್ತು ಬಸ್ ಪರಸ್ಪರ ಡಿಕ್ಕಿಯಾಗಿದೆ.
ಪರಿಣಾಮ ಸ್ಕೂಟಿ ಸವಾರನ ನಿಯಂತ್ರಣ ತಪ್ಪಿ ಫೋರ್ವೇ ಕಾಮಗಾರಿ ನಡೆಯುತ್ತಿದ್ದ ಡ್ರೈನ್ಗೆ ಬಿದ್ದಿದೆ. ಬಾಲಕಿಯು ಕೆಳಕ್ಕೆ ಬಿದ್ದಿದ್ದು, ಆಕೆಗೆ ಗಂಭೀರವಾದ ಪೆಟ್ಟು ಬಿದ್ದಿದೆ.
ಘಟನೆಯ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯವರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

