Ripponpete | ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ ಕ್ರೀಡಾಪಟುಗಳಿಗೆ ರಿಪ್ಪನ್ ಪೇಟೆಯಲ್ಲಿ ಅದ್ದೂರಿ ಸನ್ಮಾನ

ರಾಷ್ಟ್ರಮಟ್ಟದಲ್ಲಿ ಕೀರ್ತಿಗಳಿಸಿದ  ಕ್ರೀಡಾಪಟುಗಳಿಗೆ ರಿಪ್ಪನ್ ಪೇಟೆಯಲ್ಲಿ ಅದ್ದೂರಿ ಸನ್ಮಾನ


ರಿಪ್ಪನ್‌ಪೇಟೆ : ರಾಷ್ಟ್ರಮಟ್ಟದ  ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ  ಮಲೆನಾಡಿಗೆ ಕೀರ್ತಿಯನ್ನು ತಂದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ    ಪ್ರೋ ಕಬ್ಬಡಿ ಹತ್ತನೇ ಸೀಸನ್ ನ ಯುಪಿ ಯೋಧ ತಂಡದ ಆಟಗಾರ ಯುವ ಪ್ರತಿಭೆ ಗಗನ್ ಗೌಡ ಹಾಗೂ ಖೇಲೋ ಇಂಡಿಯಾ ಕಬ್ಬಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದ ಪ್ರಜ್ವಲ್ ಶ್ರೀಧರ್ ರವರಿಗೆ  ಅದ್ದೂರಿ ಸ್ವಾಗತ ಕೋರಲಾಯಿತು.

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿ ಪಟ್ಟಣಕ್ಕೆ ಆಗಮಿಸಿದ ಯುವ ಪ್ರತಿಭೆಗಳನ್ನು ಹೊಸನಗರ ತಾಲೂಕ್ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹಾಗೂ ಕ್ರೀಡಾ ಅಭಿಮಾನಿಗಳು,ಸಾರ್ವಜನಿಕರು ಯುವ ಪ್ರತಿಭೆಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.


ಪ್ರೋ ಕಬ್ಬಡಿ ಹತ್ತನೇ ಸೀಸನ್ ನಲ್ಲಿ ಯುಪಿ ಯೋಧ ತಂಡವನ್ನು ಪ್ರತಿನಿಧಿಸಿ 13 ಪಂದ್ಯಗಳಲ್ಲಿ 90 ಪಾಯಿಂಟ್ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಿರುವ ಹಾಲುಗುಡ್ಡೆಯ ಯುವ ಪ್ರತಿಭೆ ಗಗನ್ ಗೌಡ ಹಾಗೂ ಖೇಲೋ ಇಂಡಿಯಾ ಕಬ್ಬಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ ಪ್ರಜ್ವಲ್ ಶ್ರೀಧರ್ ಶಿವಮೊಗ್ಗ ರಸ್ತೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ವಿನಾಯಕ ವೃತ್ತದವರೆಗೆ ಮೆರವಣಿಗೆ ಮೂಲಕ ಕ್ರೀಡಾ ಸಾಧಕರನ್ನು ಕರೆತರಲಾಯಿತು. ವಿನಾಯಕ ವೃತ್ತದಲ್ಲಿ‌ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಆ ನಂತರದಲ್ಲಿ ತೆರೆದ ವಾಹನದಲ್ಲಿ ಸಾಗರ ರಸ್ತೆಯ ವಿಶ್ವಮಾನವ ಸಭಾಭವನಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು.


ವಿಶ್ವಮಾನವ ಸಭಾ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗಗನ್ ಗೌಡ ಹಾಗೂ ಪ್ರಜ್ವಲ್ ಶ್ರೀಧರ್ ರವರನ್ನು ಒಕ್ಕಲಿಗರ ಸಂಘ , ರಾಮಕೃಷ್ಣ ವಿದ್ಯಾಸಂಸ್ಥೆ ಹಾಗೂ ನಾಗರೀಕರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಂ ಬಿ ಲಕ್ಷ್ಮಣಗೌಡ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲ್ ಧರ್ಮೇಶ್, ತೀರ್ಥಹಳ್ಳಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಾಳೆಹಳ್ಳಿ ಪ್ರಭಾಕರ್, ರಾಮಕೃಷ್ಣ ವಿದ್ಯಾಸಂಸ್ಥೆಯ ಮುಖ್ಯಸ್ಥ ದೇವರಾಜ್,ಕ್ರೀಡಾ ತರಬೇತುದಾರ ವಿನಯ್ , ಒಕ್ಕಲಿಗರ ಸಂಘದ ನಿರ್ದೇಶಕರುಗಳು, ಕ್ರೀಡಾ ಅಭಿಮಾನಿಗಳು,ನಾಗರಿಕರು  ಹಾಗೂ ಸನ್ಮಾನಿತ ಕ್ರೀಡಾಪಟುಗಳ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *