
ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಅಂಜನಿ ಹುಲಿ ಸಾವು
ಶಿವಮೊಗ್ಗ : ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ 17 ವರ್ಷದ ಅಂಜನಿ ಎಂಬ ಹೆಣ್ಣು ಹುಲಿ ಅನಾರೋಗ್ಯ ಕಾರಣದಿಂದ ಬುಧವಾರ (ಜ.08) ರಾತ್ರಿ ಮೃತಪಟ್ಟಿದೆ.
ತ್ಯಾವರೆ ಕೊಪ್ಪದ ಹುಲಿ ಮತ್ತು ಸಿಂಹ ಧಾಮದ ಹುಲಿ ಅಂಜನಿ, ಬಹು ಅಂಗಾಗ ವೈಫಲ್ಯದಿಂದ ನಿನ್ನೆ ರಾತ್ರಿ ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ತಿಳಿಸಿದ್ದಾರೆ.
ಅಂಜನಿ ವಯೋ ಸಹಜ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ಪಶುವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳು ಅಂಜನಿಯ ಮರಣೋತ್ತರ ಪರೀಕ್ಷೆ ನಡೆಸಿದರು.
ಹುಲಿಯ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ. ಅಂಜನಿ ಸಾವಿನಿಂದ ಮೃಗಾಲಯದಲ್ಲಿ ಹೆಣ್ಣು ಹುಲಿಗಳ ಸಂಖ್ಯೆ ೪ಕ್ಕೆ ಇಳಿಕೆಯಾಗಿದೆ.
