ಸೆರೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಚಿರತೆಯ ಬಾಲ ಹಿಡಿದು ಬಲೆಗೆ ಬೀಳಿಸಿದ ಯುವಕ
ತುಮಕೂರು: ಜನರ ಕೂಗಾಟದಿಂದ ಬಲೆಗೆ ಬೀಳದೆ ತಪ್ಪಿಸಿಕೊಳ್ಳಲು ಯತ್ನಿಸಿದ ಚಿರತೆಯನ್ನು ಅದರ ಬಾಲ ಹಿಡಿದು ಯುವಕನೊಬ್ಬ ಬಲೆಗೆ ಬೀಳಿಸಿದ ಘಟನೆ ತಿಪಟೂರು ತಾಲೂಕಿನ ಕೆರೆಗೋಡಿ ರಂಗಾಪುರ ಗ್ರಾಮದ ಬಳಿ ಸೋಮವಾರ ನಡೆದಿದೆ.
ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಗ್ರಾಮಸ್ಥರ ನೆರವಿನೊಂದಿಗೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ರಂಗಾಪುರ ಗ್ರಾಮದ ಪುರಲೇಹಳ್ಳಿ ರಸ್ತೆ ಕುಮಾರಣ್ಣ ಎಂಬವರ ತೋಟದಲ್ಲಿ ಪ್ರತ್ಯಕ್ಷವಾಗಿದ್ದ ಸುಮಾರು ನಾಲ್ಕೈದು ವರ್ಷದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆಗಿಳಿದಿತ್ತು.
ಆದರೆ ಜನರ ಕೂಗಾಟದಿಂದ ಬಲೆಗೆ ಬೀಳದೇ ತಪ್ಪಿಸಿಕೊಳ್ಳುತ್ತಿದ್ದ ಚಿರತೆಯನ್ನು ರಂಗಾಪುರ ಗ್ರಾಮದ ಆನಂದ್ ಎಂಬ ಯುವಕ ಧೈರ್ಯವಾಗಿ ಅದರ ಬಾಲ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬಲೆಗೆ ಕೆಡವಿದ್ದಾರೆ.
ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಬಳಿಕ ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಅತಿ ವೇಗದ ಬೈಕ್ ಚಾಲನೆಯಿಂದ ಪಾದಚಾರಿ ಸಾವು : ಬೈಕ್ ಸವಾರನಿಗೆ 1 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ Bhadravati…
ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಗೆ ಸಾವಿರಾರು ಅಭ್ಯರ್ಥಿಗಳು – ವಸತಿ ಕೊರತೆಯಿಂದ ಬಸ್ ನಿಲ್ದಾಣದಲ್ಲೇ ವಿಶ್ರಾಂತಿ KSRP Police Constable written…
ಜಿಂಕೆ ಮಾಂಸ ದಾಸ್ತಾನು ಆರೋಪ: ಇಬ್ಬರ ಬಂಧನ Forest officials in Shivamogga taluk arrested two persons for…
ಮಲೆನಾಡಿನ ರೈತರ ಜಮೀನಿಗೆ ಕೈಹಾಕಬೇಡಿ: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ಕಸ್ತೂರಿರಂಗನ್ ವರದಿ ಸಂವಾದ: ಮಲೆನಾಡಿನ ರೈತರಿಗೆ ಸಿಎಂ ಡಿ.ಕೆ.…
ವಿಶ್ವಕರ್ಮ ಜಯಂತಿ ಕೌಶಲ, ಶ್ರಮ ಹಾಗೂ ಸೃಜನಶೀಲತೆಯ ಪ್ರತೀಕ: ಗಣೇಶ್ ಆಚಾರ್ಯ Vishwakarma Jayanti was celebrated by the…
ಕೋಡೂರಿನಲ್ಲಿ ಅಗ್ನಿ ಅವಘಡ: ಸರ್ವಸ್ವ ಕಳೆದುಕೊಂಡ ಕಾರ್ಮಿಕನಿಗೆ ಕಟ್ಟಡ ಕಾರ್ಮಿಕರ ಸಂಘದ ಆಸರೆ A fire caused by a…