
ಸೆರೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಚಿರತೆಯ ಬಾಲ ಹಿಡಿದು ಬಲೆಗೆ ಬೀಳಿಸಿದ ಯುವಕ
ಸೆರೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಚಿರತೆಯ ಬಾಲ ಹಿಡಿದು ಬಲೆಗೆ ಬೀಳಿಸಿದ ಯುವಕ ತುಮಕೂರು: ಜನರ ಕೂಗಾಟದಿಂದ ಬಲೆಗೆ ಬೀಳದೆ ತಪ್ಪಿಸಿಕೊಳ್ಳಲು ಯತ್ನಿಸಿದ ಚಿರತೆಯನ್ನು ಅದರ ಬಾಲ ಹಿಡಿದು ಯುವಕನೊಬ್ಬ ಬಲೆಗೆ ಬೀಳಿಸಿದ ಘಟನೆ ತಿಪಟೂರು ತಾಲೂಕಿನ ಕೆರೆಗೋಡಿ ರಂಗಾಪುರ ಗ್ರಾಮದ ಬಳಿ ಸೋಮವಾರ ನಡೆದಿದೆ. ಹಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಗ್ರಾಮಸ್ಥರ ನೆರವಿನೊಂದಿಗೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.ರಂಗಾಪುರ ಗ್ರಾಮದ ಪುರಲೇಹಳ್ಳಿ ರಸ್ತೆ ಕುಮಾರಣ್ಣ ಎಂಬವರ ತೋಟದಲ್ಲಿ ಪ್ರತ್ಯಕ್ಷವಾಗಿದ್ದ ಸುಮಾರು ನಾಲ್ಕೈದು ವರ್ಷದ ಚಿರತೆಯನ್ನು ಸೆರೆ ಹಿಡಿಯಲು…