ಪಿಡಿಓ ವರ್ಗಾವಣೆಗೆ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರಿಂದ ಆಗ್ರಹ – ಹೋರಾಟದ ಎಚ್ಚರಿಕೆ
HOSANAGARA | ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಪಿಡಿಒ ರವಿ ಎಸ್ ಅವರನ್ನು ಶೀಘ್ರವಾಗಿ ಬೇರೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ಎಂ ಗುಡ್ಡೆಕೊಪ್ಪ ಗ್ರಾಪಂ ಅಧ್ಯಕ್ಷ ಪ್ರವೀಣ್ ಜಿ ಎನ್ ತಾಪಂ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕಾರ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಪಿಡಿಓ ರವಿ ಎಸ್ ರವರನ್ನು ಕೂಡಲೆ ವರ್ಗಾವಣೆಗೊಳಿಸಿ ಇಲ್ಲವಾದಲ್ಲಿ ದಿನಾಂಕ 7-1-2025 ರಂದು ತಾಲೂಕು ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಚ್ಚರಿಸಲಾಗಿದೆ.
ಮನವಿಯಲ್ಲಿ ಎಂ ಗುಡ್ಡೆ ಕೊಪ್ಪ ಗ್ರಾಮ ಪಂಚಾಯತ್ ಪಿಡಿಒ ರವಿ ಎಸ್ ಅವರು ಸಾರ್ವಜನಿಕರ ಇತಿಮಿತಿ ಸಮಯದೊಳಗೆ ಕೆಲಸವನ್ನು ನಿರ್ವಹಿಸದೆ ಅವರನ್ನು ಪದೇಪದೇ ಕಚೇರಿಗೆ ಅಲೆದಾಡಿಸುವುದು ಸಾರ್ವಜನಿಕರ ಅರ್ಜಿಯನ್ನ ಮೂರರಿಂದ ನಾಲ್ಕು ತಿಂಗಳು ಕಾಲ ವಿಲೇವಾರಿ ಮಾಡದೆ ಇಟ್ಟುಕೊಳ್ಳುವುದು ಹಾಗೂ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಅಗೌರವದಿಂದ ವರ್ತಿಸಿ ಹಗುರವಾಗಿ ಮಾತನಾಡುವುದು ಅಲ್ಲದೆ ಸಾರ್ವಜನಿಕರಿಗೆ ಮತ್ತು ಸದಸ್ಯರಿಗೆ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡುವ ಜೊತೆಗೆ ಸಾಮಾನ್ಯ ಸಭೆಯ ನಿರ್ಣಯವನ್ನು ಅಜೆಂಡ ರೀತಿ ಬರೆಯದೆ ಮತ್ತು ಸಾರ್ವಜನಿಕರ ಅರ್ಜಿಗಳನ್ನ ಸಭೆಯಲ್ಲಿ ನಿರ್ಣಯಿಸಿದ ನಿರ್ಣಯವನ್ನ ಬರೆಯದೆ ಹಾಗೂ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ಬಾರದೆ ಸದರಿ ನಿರ್ಣಯ ಪುಸ್ತಕದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಸಾರ್ವಜನಿಕರ ವಿರುದ್ಧ ಇರುವ ರೀತಿ ನಿರ್ಣಯವನ್ನು ತಿರುಚಿ ಬರೆದಿರುವುದು.ಈ ಸ್ವತ್ತು ಪುಸ್ತಕವನ್ನು ನಿರ್ವಹಿಸದೆ ಇರುವುದು ಹಾಗೂ ಈ ಸ್ವತ್ತಿಗೂ ರಶೀದಿಗು ತಾಳೆ ಬಾರದೆ ಪಂಚಾಯಿತಿ ಗೆ ನಷ್ಟವನ್ನುಂಟು ಮಾಡುತ್ತಿದ್ದಾರೆ.
ಈ ಬಗ್ಗೆ ಹಲವು ಬಾರಿ ಅವರ ವರ್ಗಾವಣೆಗೆ ಹಾಗೂ ಅವರಿಂದ ಗ್ರಾಮ ಪಂಚಾಯಿತಿಗೆ ಆಗುತ್ತಿರುವಂತಹ ಸಮಸ್ಯೆಗಳ ಕುರಿತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ರವರಿಗೆ ಸರ್ವ ಸದಸ್ಯರು ಮನವಿಯನ್ನು ನೀಡಿದ್ದರು ಇಲ್ಲಿಯವರೆಗೆ ಅವರ ವಿರುದ್ಧ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳದೆ ಇರುವುದ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು ಈ ಮೂಲಕ ಅವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳದಿದ್ದಲ್ಲಿ ಮೇಲೆ ತಿಳಿಸಿದ ದಿನಾಂಕದಂದು ತಾಲೂಕ್ ಪಂಚಾಯಿತಿ ಮುಂಭಾಗ ಧರಣಿಯನ್ನ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ..