January 11, 2026

RIPPONPETE | ದುರ್ಗಾಂಬ ಬಸ್ ಪಲ್ಟಿ – ಹಲವು ಪ್ರಯಾಣಿಕರಿಗೆ ಗಂಭೀರ ಗಾಯ

RIPPONPETE | ದುರ್ಗಾಂಬ ಬಸ್ ಪಲ್ಟಿ – ಹಲವು ಪ್ರಯಾಣಿಕರಿಗೆ ಗಂಭೀರ ಗಾಯ

ಬಸ್ ಪಲ್ಟಿಯಾಗಿ ಬಿದ್ದ ಪರಿಣಾಮ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿಯಲ್ಲಿ ನಡೆದಿದೆ.

ವೀಡಿಯೋ ಇಲ್ಲಿ ವೀಕ್ಷಿಸಿ

ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತಿದ್ದ ದುರ್ಗಾಂಬ ಬಸ್ ಗೆ  ಹೊಸನಗರದಿಂದ ಬರುತಿದ್ದ ಭತ್ತ ಕಟಾವು ಯಂತ್ರವನ್ನು ಕೊಂಡೊಯ್ಯುತಿದ್ದ ತಮಿಳುನಾಡಿನ ಲಾರಿಗೆ ಡಿಕ್ಕಿಯಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಚಾಲಕನ ನಿಯಂತ್ರಣತಪ್ಪಿ ಬಸ್ ಪಲ್ಟಿಯಾಗಿದ್ದು, ಬಸ್ ನಲ್ಲಿ 20 ಪ್ರಯಾಣಿಕರಿದ್ದು 15 ಜನರು ಗಾಯಗೊಂಡಿದ್ದಾರೆ ಎನ್ನಾಲಾಗುತಿದ್ದು, ಗಾಯಾಳುಗಳನ್ನು ರಿಪ್ಪನ್‌ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮಯ ಪ್ರಜ್ಞೆ ಮೆರೆದ ಪೊಲೀಸರು

ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಗೆ ಸ್ಥಳೀಯರು ಕರೆ ಮಾಡಿದ್ದು ತುಂಬಾ ಸಮಯವಾದರೂ ಆಂಬುಲೆನ್ಸ್ ಬರಲಿಲ್ಲ ಈ ವೇಳೆ ಸ್ಥಳಕ್ಕೆ ಆಗಮಿಸಿದ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಹಾಗೂ ಸಿಬ್ಬಂದಿಗಳು ಗಾಯಾಳುಗಳನ್ನು ಪೊಲೀಸ್ ಜೀಪ್ ನಲ್ಲಿಯೇ ಕರೆದೊಯ್ಯುವ ಮೂಲಕ ಸಮಯ ಪ್ರಜ್ ಮೆರೆದಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

About The Author

Leave a Reply

Your email address will not be published. Required fields are marked *