ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತಿದ್ದ ನಟೋರಿಯಸ್ ಖದೀಮನ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು
ಹಲವು ವರ್ಷಗಳಿಂದ ಮನೆಗಳ್ಳತನವೆಸಗುತ್ತಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಪರಾರಿಯಾಗುತಿದ್ದ ನಟೋರಿಯಸ್ ಖದೀಮನನ್ನು ಬಂಧಿಸಿ ಹೆಡೆಮುರಿ ಕಟ್ಟುವಲ್ಲಿ ಬಂಕಾಪುರ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಾಜಾ ತಂದೆ ಹಜರೇಸಾಬ ಹಾವೇರಿ, 26 ವರ್ಷ, 3ನೇ ಕ್ರಾಸ್, ಈಶ್ವರನಗರ, ಹುಬ್ಬಳ್ಳಿ, ಧಾರವಾಡ ಜಿಲ್ಲೆ, ಬಂಧಿತ ಆರೋಪಿಯಾಗಿದ್ದಾನೆ.
ದಿನಾಂಕ 5-10-2024ರಂದು ರಾತ್ರಿ ಬಂಕಾಪುರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನವಾಗಿತ್ತು. ಮನೆಗೆ ನುಗ್ಗಿದ್ದ ಯಾರೋ, ಮನೆಯಲ್ಲಿದ್ದ ಚಿನ್ನ-ಬೆಳ್ಳಿಯ ಆಭರಣಗಳಲ್ಲದೆ, ನಗದು ಹಣವನ್ನೂ ಸಹ ಕಳ್ಳತನ ಮಾಡಿಕೊಂಡು ಹೋಗಿದ್ದರು.ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳ ತಂಡ ಆರೋಪಿಯನ್ನು ಬಂಧಿಸಿ ಐದು ಪ್ರಕರಣಗಳಿಗೆ | ಸಂಬಂಧಿಸಿದಂತೆ, 80 ಗ್ರಾಂ ಚಿನ್ನಾಭರಣಗಳು, 100 ಗ್ರಾಂ ಬೆಳ್ಳಿಯ ಕಾಲು ಚೈನ್‌ಗಳು, ಒಂದು ಬೈಕ್ (ಕೆಎ25-ಇಟಿ0638) ಮತ್ತು ಒಂದು ಮೊಬೈಲ್‌ನ್ನು ವಶಪಡಿಸಿಕೊಂಡಿದ್ದಾರೆ. ಇವೆಲ್ಲವುಗಳ ಒಟ್ಟು ಮೌಲ್ಯ ರೂ, 6,37,000/- ಎಂದು ಅಂದಾಜಿಸಲಾಗಿದೆ.
ಕಳೆದ ಹಲವು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಮರೆಸಿಕೊಂಡಿದ್ದ. ಬಂಕಾಪುರ ಠಾಣೆ ಹಾಗೂ ಸುತ್ತ ಮುತ್ತಲಿನ ಠಾಣೆ ವ್ಯಾಪ್ತಿಯಲ್ಲಿ ತನ್ನ ಕೈಚಳಕ ತೋರಿದ್ದು, ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು ಆದರೆ ಪೊಲೀಸರಿಗೆ ಎಲ್ಲಾ ಪ್ರಕರಣಗಳಲ್ಲೂ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತಿದ್ದ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಬಂಕಾಪುರದ ಖಡಕ್ ಪಿಎಸ್‌ಐ ನಿಂಗರಾಜ್ ಕೆ ವೈ ಯಶಸ್ವಿಯಾಗಿದ್ದಾರೆ.
ಈತನ ಬಂಧನದಿಂದಾಗಿ; ಬಂಕಾಪುರ ಠಾಣೆಯ 2 ಮತ್ತು ಆಡೂರ ಠಾಣೆಯ 3, ಪ್ರಕರಣಗಳಿಗೆ ಮುಕ್ತಿ ಸಿಕ್ಕಿದಂತಾಗಿದೆ
ಹಾವೇರಿ ಜಿಲ್ಲೆ ಎಸ್ಪಿ ಅಂಶುಕುಮಾರ್, ಅಡಿಷನಲ್ ಎಸ್ಪಿ ಎಲ್.ವೈ, ಶಿರಕೋಳ, ಶಿಗ್ಗಾಂವ ಡಿವೈಎಸ್ಪಿ ಕೆ.ವಿ. ಗುರುಶಾಂತಪ್ಪ ಮತ್ತು ಶಿಗ್ಗಾಂವ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್ ಜಿ.ಕುಂಬಾರ ರವರುಗಳ ಮಾರ್ಗದರ್ಶನ ಹಾಗೂ ಬಂಕಾಪುರ ಠಾಣೆ ಸಬ್ ಇನ್ಸ್‌ಪೆಕ್ಟರ್ ನಿಂಗರಾಜ್ ಕೆ ವೈ ಸಾರಥ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಮಹಿಳಾ ಎಎಸ್‌ಐ ಕೆ, ರಜನಿ, ಹೆಚ್ ಸಿ ಎ.ಕೆ. ನದಾಫ್, ಸಿಬ್ಬಂದಿಗಳಾದ ಗೋವಿಂದ ಲಮಾಣಿ, ಬೀರಪ್ಪ ಕಳ್ಳಿಮನಿ, ಪ್ರವೀಣ ಕೋಟಿಹಾಳ, ನಿಂಗಪ್ಪ ಪೂಜಾರ, ಜಬೀವುಲ್ಲಾ ದೊಡ್ಡಮನಿ, ಶಿಲ್ಪಾ ಕ್ಯಾಸನಕೇರಿ, ಕಮಲಾಕ್ಷಿ ಆಲಗೋಡ, ತಾಂತ್ರಿಕ ವಿಭಾಗದ ಸುತೀರ ಮಾರಕಟ್ಟೆ ಮತ್ತು ಮಾರುತಿ ಹಾಲಬಾವಿ ಇದ್ದರು.