RIPPONPETE | ಸತತ 20 ಗಂಟೆ ರಾಜಬೀದಿ ಉತ್ಸವದೊಂದಿಗೆ ಜಲಸ್ಥಂಭನಗೊಂಡ ಗಣಪತಿ

ರಿಪ್ಪನ್‌ಪೇಟೆ : ಕಳೆದ 11 ದಿನಗಳ ಕಾಲ ಇಲ್ಲಿನ ತಿಲಕ್ ಮಹಾಮಂಟಪದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ರಾಜಬೀದಿ ಉತ್ಸವವು ಮಂಗಳವಾರ ಸಂಜೆ 5.30 ಕ್ಕೆ ಹೊರಟು ಸತತ 20 ಗಂಟೆಗಳ ಕಾಲ  ಸಂಚರಿಸಿ ಇಂದು ಬುಧವಾರ ಮಧ್ಯಾಹ್ನ 12 ಗಂಟೆಗೆ ಹೊಸನಗರ ರಸ್ತೆಯಲ್ಲಿರುವ ಗವಟೂರು ತಾವರೆಕೆರೆಯಲ್ಲಿ ಅಪಾರ ಸಂಖ್ಯೆಯ ಜನಸ್ತೋಮದ ಮಧ್ಯೆ ಗಣೇಶ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು. ಇದರೊಂದಿಗೆ ಸೆ.7 ರಂದು ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಂಗಣದ `ತಿಲಕ್’ ಮಹಾಮಂಟಪದಲ್ಲಿ ಪ್ರತಿಷ್ಟಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 57ನೇ ವರ್ಷದ ಗಣೇಶೋತ್ಸವಕ್ಕೆ ಇಂದು ತೆರೆಬಿದ್ದಿತು.

ಗಣಪತಿಗೆ ಮಾಲಾರ್ಪಣೆ ನೆರವೇರಿಸಿದ ಶಾಸಕ ಆರಗ ಜ್ಞಾನೇಂದ್ರ,ಶಾಸಕ ಬೇಳೂರು ಗೋಪಾಲಕೃಷ್ಣ

ಕೇರಳದ ನವಿಲು ನೃತ್ಯ ತಂಡ ಮತ್ತು ಅರಕೆರೆಯ ವೀರಗಾಸೆ ಶಿಗ್ಗಾಂವ್‌ನ ಜಾಂಜಾ ಪಥಾಕ್, ಕೀಲುಕುದುರೆ ತಟ್ಟಿರಾಯ ತಂಡಗಳ ಜಾನಪದ ತಂಡಗಳ ಕಲಾ ಮೆರಗಿನ ನಡುವೆ ಯುವಕ ಯುವತಿಯರು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ದೃಶ್ಯ ಕಂಡುಬಂದಿತು.

ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗಣಪತಿಗೆ ಮಾಲಾರ್ಪಣೆ ನೆರವೇರಿಸಿದರು.ಇದೇ ಸಂಧರ್ಭದಲ್ಲಿ ಹಲವು ಸಂಘ ಸಂಸ್ಥೆಗಳಿಂದ ಮಾಲಾರ್ಪಣೆ ನೆರವೇರಿತು.

ಗಣೇಶ ಮೂರ್ತಿಯ ರಾಜಬೀದಿ ಉತ್ಸವವು ಶಾಂತಿಯಿಂದ ಯಶಸ್ವಿಯಾಗಿ ಜರುಗುವ ಮೂಲಕ ಹಲವು ಮುಸ್ಲಿಂ ಮುಖಂಡರು ಗಣಪತಿಗೆ ಸುಗಂಧರಾಜ ಮತ್ತು ಗುಲಾಬಿ ಹಾರವನ್ನು ಹಾಕಿ ಸ್ವಾಗತಿಸುತ್ತಿದ್ದು ಅಲ್ಲದೆ ಕೆಲವು ಕಡೆಯಲ್ಲಿ ತಂಪು ಪಾನಿಯ ಉಪಹಾರದ ವ್ಯವಸ್ಥೆಯನ್ನು ಮಾಡುವ ಜಾನಪದ ಕಲಾ ತಂಡದವರ ಕುಣಿತವನ್ನು ಕಂಡು ಮನಸೋತರು. ಇದರೊಂದಿಗೆ  ಹಿಂದೂ, ಮುಸ್ಲಿಂ ಎರಡು ಸಮುದಾಯದವರು ಸೌಹಾರ್ದತೆಯನ್ನು ಮೆರೆದಿರುವುದು ವಿಶೇಷವಾಗಿತ್ತು.

ಮೆರವಣಿಗೆಯಲ್ಲಿ ಜಾನಪದ ತಂಡಗಳ ಕಲರವ

ಹಿಂದು ಮಹಾಸಭಾ ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ, ವರಸಿದ್ದಿ ವಿನಾಯಕ ದೇವಸ್ಥಾನ ಧರ್ಮದರ್ಶಿ ಈಶ್ವರಶೆಟ್ಟಿ, ಎಂ.ಬಿ. ಮಂಜುನಾಥ, ಎಂ.ಸುರೇಶಸಿಂಗ್, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಎನ್.ಸತೀಶ್, ಜಿಎಸ್‌ಬಿ ಸಮಾಜದ ಅಧ್ಯಕ್ಷ ಗಣೇಶ್ ಎನ್.ಕಾಮತ್, ಪಿ.ಸುಧೀರ್, ವಾಸುಶೆಟ್ಟಿ, ಡಿ.ಈ.ರವಿಭೂಷಣ, ಸಂದೀಪ್‌ಶೆಟ್ಟಿ, ಹೆಚ್.ಎನ್.ಚೋಳರಾಜ್, ಬೇಕರಿ ನಾರಾಯಣ, ಹೆಚ್.ಎನ್.ಉಮೇಶ್, ಶ್ರೀನಿವಾಸ ಅಚಾರ್, ತೀರ್ಥೇಶ್‌ ಅಡಿಕಟ್ಟು, ಆರ್.ಎಂ.ನವೀನ್, ಲಿಂಗರಾಜ, ಸೂರ್ಯಗೌಡ, ಕೆರೆಹಳ್ಳಿ ರವೀಂದ್ರ, ನಾಗರಾಜ ಕೆದ್ಲುಗುಡ್ಡೆ, ಆರ್.ರಾಘವೇಂದ್ರ, ಸುಜಯ್, ಸುನಿಲ್, ರಾಜೇಶ್, ಭೀಮರಾಜ್, ಎಸ್.ದಾನಪ್ಪ, ಚಂದ್ರಮಲ್ಲಾಪುರ, ಶೇಖರ, ಮಂಜುನಾಥ ಆಚಾರ್, ಆರ್. ರಂಜನ್, ಸುಂದರೇಶ್ ಹಾಗೂ ಉಪತಹಶೀಲ್ದಾರ್ ಹುಚ್ಚರಾಯಪ್ಪ, ಡಿವೈಎಸ್‌ಪಿ ಗಜಾನನ ಸುತಾರ್, ಹೊಸನಗರ ವೃತ್ತ ನಿರೀಕ್ಷಕ ಗುರಣ್ ಹೆಬ್ಬಾಳ್, ಪಿ.ಎಸ್.ಐ. ಪ್ರವೀಣ್, ಪಿಡಿಒ ಮಧುಸೂದನ್, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಪೊಲೀಸ್ ಕಂದಾಯ ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗ ಹಾಜರಿದ್ದರು.

ಮುಸ್ಲಿಂ ಯುವಕರಿಂದ ಪಾನೀಯ ಸೇವೆ :

ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವವು ಶಿವಮೊಗ್ಗ ರಸ್ತೆಯಿಂದ ತೀರ್ಥಹಳ್ಳಿ ರಸ್ತೆಗೆ ತೆರಳುವ ವೇಳೆಯಲ್ಲಿ ಸ್ಟಾರ್ ಪ್ರೂಟ್ಸ್ ಅಂಗಡಿಯ ಮುಂಭಾಗದಲ್ಲಿ ಮುಸ್ಲಿಂ ಯುವಕರು ಹಿಂದೂ ಕಾರ್ಯಕರ್ತರಿಗೆ ತಂಪು ಪಾನೀಯ ವಿತರಿಸಿ ಸೌಹಾರ್ಧತೆ ಮೆರೆದರು.

ಈ ಸಂಧರ್ಭದಲ್ಲಿ ಅಫ್ಜಲ್ ಬ್ಯಾರಿ , ರಹೆಮಾನ್ ಚಾಲಿ , ಫೈಜಲ್ , ಇಸ್ಮಾಯಿಲ್ , ರಾಹಿಲ್  , ಸವದ್ ,ಅಶಿಶ್ , ಸಯನ್ ಹಾಗೂ ಇನ್ನಿತರ ಯುವಕರಿದ್ದರು.

ಮಾರ್ವಾಡಿ ಸಂಘದವರಿಂದ ಉಪಹಾರ ಸೇವೆ :

ಸಾಗರ ರಸ್ತೆಯ ಕೆಇಬಿ ಮುಂಭಾಗದ ಅರುಣ ಜುವೆಲ್ಲರ್ಸ್ ಮುಂಭಾಗದಲ್ಲಿ ಮುಖೇಶ್ ನೇತ್ರತ್ವದಲ್ಲಿ ಮಾರ್ವಾಡಿ ಸಂಘದವರು ಹಿಂದೂ ಕಾರ್ಯಕರ್ತರಿಗೆ ಉಪಹಾರ ಸೇವೆ ಸಲ್ಲಿಸಿದರು.

Leave a Reply

Your email address will not be published. Required fields are marked *