w
Headlines
Home » ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆಗೈದ ಪತಿ ನಂತರ ಮಾಡಿದ್ದೇನು..!??

ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆಗೈದ ಪತಿ ನಂತರ ಮಾಡಿದ್ದೇನು..!??

GridArt 20240906 141643383.jpg

ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆಗೈದ ಪತಿ ನಂತರ ಮಾಡಿದ್ದೇನು..!??

ರಿಪ್ಪನ್‌ಪೇಟೆ – ಇಲ್ಲಿನ ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ ನಂತರ ಪಟಗುಪ್ಪ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು ಈ ಘಟನೆಗೆ ಸಂಬಂಧಿಸಿದಂತೆ ಪತ್ನಿಯ ದೂರಿನಲ್ಲಿ ಪತಿಯ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ.

ಕೋಡೂರು ಗ್ರಾಪಂ ವ್ಯಾಪ್ತಿಯ ಸುರುಳಿಕೊಪ್ಪ ಗ್ರಾಮದ ಸದಾನಂದ್ ಮತ್ತು ಸಬೀತಾ ದಂಪತಿಗಳ ನಡುವೆ ಕಳೆದ 12 ವರ್ಷಗಳಿಂದ ಪ್ರತಿ ನಿತ್ಯ ಜಗಳಗಳು ನಡೆಯುತಿದ್ದು ಕಳೆದ ನಾಲ್ಕು ವರ್ಷಗಳಿಂದ ಒಂದೇ ಮನೆಯಲ್ಲಿ ಇಬ್ಬರು ಬೇರೆ ಬೇರೆ ಅಡುಗೆ ಮಾಡಿಕೊಂಡು ಜೀವನ ಸಾಗಿಸುತಿದ್ದರು. ಪತಿಯ ಅನೈತಿಕ ಸಂಬಂಧದಿಂದ ಬೇಸತ್ತಿದ್ದ ಪತ್ನಿ ಸಬೀತಾ ಬುಧವಾರ ಸಂಜೆ ಈ ಬಗ್ಗೆ ಗಲಾಟೆ ತೆಗೆದಿದ್ದಾರೆ ಈ ಸಂಧರ್ಭದಲ್ಲಿ ಏಕಾಏಕಿ ಪತ್ನಿ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಿದ್ದಾರೆ.ತಲೆಗೆ ತೀವ್ರ ಪೆಟ್ಟಾದ ಕಾರಣ ಪತ್ನಿ ಸಬೀತಾ ಮೂರ್ಚೆ ಹೋಗಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ಸಬೀತಾ ರವರ ಚಿಕ್ಕಪ್ಪನ ಮಗ ಬಂದು ಅವರನ್ನು ರಿಪ್ಪನ್‌ಪೇಟೆ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಶಿವಮೊಗ್ಗದ ನಾರಾಣಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯ ನಂತರ ಹೆದರಿಕೊಂಡ ಪತಿ ಸದಾನಂದ್ ಭಟ್ ಪಟಗುಪ್ಪ ಸೇತುವೆ ಬಳಿ ಹೋಗಿ ತಮ್ಮ ಕಾರು ನಿಲ್ಲಿಸಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ ಸಬೀತಾ ಹೇಳಿಕೆ ಪ್ರಕಾರ ಪ್ರಕರಣ ದಾಖಲಿಸಿಕೊಂಡ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಆರೋಪಿ ಸದಾನಂದ ಭಟ್ ಶೋಧ ನಡೆಸಿದ್ದಾರೆ ಆದರೆ ಆರೋಪಿಯ ಕಾರು ಪಟಗುಪ್ಪ ಸೇತುವೆ ಬಳಿ ದೊರಕಿದ್ದು ಯಾವುದೇ ಸುಳಿವು ಸಿಕ್ಕಿರಲಿಲ್ಲ ನಂತರ ಕಾರನ್ನು ಹೊಸನಗರ ಪೊಲೀಸರು ವಶಕ್ಕೆ ನೀಡಲಾಗಿತ್ತು.

ಪಟಗುಪ್ಪ ಹೊಳೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಶುಕ್ರವಾರ ಬೆಳಿಗ್ಗೆ ಆರೋಪಿ ಸದಾನಂದ ಭಟ್ ಮೃತ ದೇಹ ಪಟಗುಪ್ಪ ಸೇತುವೆ ಬಳಿಯಲ್ಲಿ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ರಿಪ್ಪನ್‌ಪೇಟೆ ಹಾಗೂ ಹೊಸನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.