w
Headlines
Home » ಅಕ್ರಮ ಮರ ಕಡಿತಲೆ – ನಾಲ್ವರ ಬಂಧನ

ಅಕ್ರಮ ಮರ ಕಡಿತಲೆ – ನಾಲ್ವರ ಬಂಧನ

GridArt 20240828 195125930.jpg

ಅಕ್ರಮ ಮರ ಕಡಿತಲೆ – ನಾಲ್ವರ ಬಂಧನ

ಅಕ್ರಮವಾಗಿ ಮರ ಕಡಿತಲೆ ಮಾಡಿ ಸಾಗುವನಿ ಮರಗಳನ್ನು ಸಾಗಾಣಿಕೆ ಮಾಡುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸಾಲಿಗೆರೆ ಗ್ರಾಮದ ಮಧುಸೂದನ್, ಉಂಬ್ಳೇಬೈಲು ಗ್ರಾಮದ ಕುಮಾರ್, ಕೃಷ್ಣ ಹಾಗೂ ಗಾಜನೂರು ಗ್ರಾಮದ ಮೈಲಾರಿ ಎಂದು ಗುರುತಿಸಲಾಗಿದೆ.

ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಮರಕಡಿತಲೆ ಮಾಡಿ ಟಾಟಾ ಏಸ್‌ನಲ್ಲಿ 6 ಮರಗಳನ್ನು ಸಾಲಿಗೆರೆಯಿಂದ ಗಾಜನೂರಿಗೆ ಸಾಗಿಸುವ ವೇಳೆ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಟಾಟಾ ಏಸ್, ದ್ವಿಚಕ್ರವಾಹನವನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಗಿಡ್ಡಸ್ವಾಮಿ, ಡೆಪ್ಯೂಟಿ ಆರ್‌ಎಫ್ ಪವನ್ ಮಹೇಂದ್ರಕರ್, ನಾಗರಾಜ್, ಬೀಟ್ ಆಫೀಸರ್ ಶ್ರೀಕಾಂತ್, ಶಂಕರವಲಯ ಮತ್ತು ಉಂಬ್ಳೆಬೈಲಿನ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.