ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ರ‍್ಯಾಲಿ ವೇಳೆ LED ಬೋರ್ಡ್ ಕುಸಿದು ನಾಲ್ವರಿಗೆ ಗಾಯ
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ನಾಮಪತ್ರ ಸಲ್ಲಿಕೆ ರ‍್ಯಾಲಿ ವೇಳೆ ಎಲ್‌ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದಿದ್ದು, ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ.
ಶಿವಮೊಗ್ಗ (Shivamogga) ನಗರದ ಗಾಂಧಿ ಬಜಾರ್‌ನಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ಭಾರಿ ಗಾತ್ರದ ಗಾತ್ರದ ಎಲ್‌ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದಿದ್ದು, ಖಾಸಗಿ ನ್ಯೂಸ್ ಚಾನೆಲ್ ವರದಿಗಾರ, ಮಹಿಳೆ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಮೆರವಣಿಗೆಗೆ ಬಂದಿದ್ದ ವ್ಯಕ್ತಿಗೆ ತೀವ್ರವಾಗಿ ಪೆಟ್ಟಾಗಿದ್ದು, ಸ್ಥಳೀಯುರ ಗಾಯಾಳುಗಳಿಗೆ ಆರೈಕೆ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಇನ್ನು ಗಾಯಾಳುಗಳನ್ನು ಕಂಡು ಕಾಣದಂತೆ ಕಾಂಗ್ರೆಸ್ ಮುಖಂಡರು ತೆರಳಿದ್ದಾರೆ ಎಂದು ಆರೋಪಗಳು ಕೇಳಿಬಂದಿದೆ.
ಏಕಾಏಕಿ ಕುಸಿದು ಭಾರಿ ಗಾತ್ರದ ಗಾತ್ರದ ಎಲ್‌ಇಡಿ ಡಿಸ್ಪ್ಲೇ ಬೋರ್ಡ್ ಬಿದ್ದಿದ್ದು, ಇದರಿಂದ ಮೆರವಣಿಗೆಗೆ ಆಗಮಿಸಿದ ವ್ಯಕ್ತಿಗೆ ತೀವ್ರವಾಗಿ ಪೆಟ್ಟು ಬಿದ್ದು, ತಲೆಯಿಂದ ರಕ್ತ ಸುರಿದಿದೆ. ಕಣ್ಣೆದುರೇ ಅನಾಹುತ ಸಂಭವಿಸಿದರೂ ಕ್ಯಾರೆ ಎನ್ನದೆ ಕಾಂಗ್ರೆಸ್ ಮುಖಂಡರು ಮುಂದೆ ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರು ಗಾಯಾಳುಗಳನ್ನು ಆರೈಕೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಎಲ್‌ಇಡಿ ಬೋರ್ಡ್ ಅಳವಡಿಸಿದ್ದ ವ್ಯಕ್ತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯಲ್ಲಿ ಭದ್ರಾವತಿ ತಾಲ್ಲೂಕಿನ ಮಾವಿನಕೆರೆ ಗ್ರಾಮದ ನಾಗರಾಜಪ್ಪ ಅವರಿಗೆ ಸಹ ಗಾಯವಾಗಿದೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಗೀತಾ ಶಿವರಾಜ್ ಕುಮಾರ್ ಅವರ ಸಹೋದರ ಸಚಿವ ಮಧುಬಂಗಾರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.