ಹೊಸನಗರ: ಇಲ್ಲಿನ ಮಾರಿಗುಡ್ಡ ವಾಸಿಯಾದ ಯುವಕನೊಬ್ಬ 3 ವರ್ಷಗಳಿಂದ ಕಿಡ್ನಿ ವೈಫಲ್ಯಕ್ಕೊಳಗಾಗಿದ್ದು, ಚಿಕಿತ್ಸೆ ವೆಚ್ಚ ಭರಿಸಲಾಗದೆ ಅವರ ಕುಟುಂಬ ದಾನಿಗಳಿಂದ ನೆರವು ಯಾಚಿಸಿದೆ.
ಹೊಸನಗರದ ಮಾರಿಗುಡ್ಡ ವಾಸಿಯಾದ ಮಂಜುನಾಥ ಮತ್ತು ಪದ್ಮಾವತಿ ದಂಪತಿಗಳ ಮಗನಾದ 23 ವರ್ಷ ವಯ್ಯಸ್ಸಿನ ಶರತ್ ಎಂಬುವವರು ಸುಮಾರು 3 ವರ್ಷದಿಂದ ಕಿಡ್ನಿ ವೈಫಲ್ಯಗೊಂಡಿದ್ದು, ಆರ್ಥಿಕ ಸಮಸ್ಯೆಯಿಂದಾಗಿ ಡಯಾಲಿಸಿಸ್ ಮಾಡಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಆರಂಭವಾಗಿದೆ, ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ ಹೃದಾಯಲಕ್ಕೆ ಹೋಗಬೇಕಾಗಿದ್ದು, ಇದಕ್ಕಾಗಿ ಸುಮಾರು 40 ಲಕ್ಷ ರೂ. ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ವೆಚ್ಚ ನಿಭಾಯಿಸುವುದು ಹೇಗೆ ಎಂಬ ಚಿಂತೆ ಈ ಕುಟುಂಬಕ್ಕೆ ಉಂಟಾಗಿದೆ ಎಂದು ಅವರ ತಂದೆ ತಾಯಿ ದುಖಃ ವ್ಯಕ್ತ ಪಡಿಸಿದ್ದಾರೆ.
ಜೀವನ ಪೂರ್ತಿ ಡಯಾಲಿಸಿಸ್ ಮಾಡಬೇಕು. ಇಲ್ಲವಾದಲ್ಲಿ ಕಿಡ್ನಿ ಕಸಿ ಮಾಡಬೇಕು. ಡಯಾಲಿಸಿಸ್ಗೆ ತಿಂಗಳಿಗೆ ಸುಮಾರು 40 ಸಾವಿರ ರೂ. ಖರ್ಚಾಗುತ್ತದೆ. ಯುವಕನ ತಂದೆ ತಾಯಿ ಆಸ್ಪತ್ರೆಯಿಂದ ಸಾಧ್ಯವಾದಷ್ಟು ಸಹಕಾರ ನೀಡಲಾಗಿದೆ ಎನ್ನುತ್ತಾರೆ.
ಈ ಹಿಂದೆ ತನ್ನ ತಂದೆಯ ಕಿಡ್ನಿಯನ್ನು ಕೊಡುವುದಾಗಿ ರಕ್ತ ಪರೀಕ್ಷೆ ನಡೆಸಿ, ನಂತರ ತಂದೆಯ ಕಿಡ್ನಿ ಸರಿ ಹೊಂದುವುದಿಲ್ಲವೆಂದು ಮತ್ತೆ ಚಿಕಿತ್ಸೆ ಮುಂದುವರೆಸಿದ ನಂತರ ತನ್ನ ತಾಯಿಯ ಕಿಡ್ನಿಯನ್ನು ಕೊಟ್ಟು ತನ್ನ ಮಗನ ಜೀವನವನ್ನು ಸರಇಮಾಡಬೇಕೆಂದು ಈ ಇಡೀ ಕುಟುಂಬ ಹೋರಾಟ ಮಾಡುತ್ತಾ ಇದೆ.
ಈ ಕುಟುಂಬದ ಪರಿಸ್ಥಿರಿಸ್ಥಿತಿಯನ್ನು ಕಂಡು ಮಾಸ್ತಿಕಟ್ಟೆಯ ಸುಬ್ರಮಣ್ಯರವರು 25,000/-ರೂ ಹಣ ಸಹಾಯ ಮಾಡಿದ್ದಾರೆ. ಹಾಗೂ ಹಲವಾರು ಸಂಘಟನೆಗಳು ಇವರಿಗೆ ಸಹಾಯ ಮಾಡಿದ್ದರೂ ದಿನನಿತ್ಯದ ಸಂಸಾರದ ಖರ್ಚು ಹಾಗೂ ವೈದ್ಯಕೀಯ ಖರ್ಚುಗಳನ್ನು ತೂಗಿಸಿಕೊಂಡು ಹೋಗುವುದೇ ಸವಾಲಾಗಿದೆ. ಈ ಕುಟುಂಬಕ್ಕೆ ಮನೆಯೊಂದನ್ನು ಬಿಟ್ಟು ಬೇರೇ ಯಾವುದೇ ಆದಾಯವಿಲ್ಲದೇ ಈ ಕುಟುಂಬ ಹೆಚ್ಚಿನ ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ, ಮುಂದಿನ ದಿನಗಳಲ್ಲಿ ಯುವಕನ ಚಿಕಿತ್ಸೆಗಾಗಿ ನಾವುಗಳೆಲ್ಲಾರೂ ಕೈ ಜೋಡಿಸಿದರೆ ಈ ಬಾಲಕನ ಜೀವನಕ್ಕೆ ದಾರಿಯಾಗುತ್ತದೆ, ಹಾಗೂ ಪಕ್ಷದ ಮುಖಂಡುರುಗಳಿಂದ ಹೆಚ್ಚಿನ ಸಹಕಾರ ನೀಡುವುದಾಗಿ ಮಾಸ್ತಿಕಟ್ಟೆ ಸುಬ್ರಮಣ್ಯರವರು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನಿಕುಮಾರ್, ಬಾವಿಕಟ್ಟೆ ಸತೀಶ್, ಉದಯ್ ಗೌಡ, ಜಯನಗರ ಗುರು, ಸಾಮಾಜಿಕ ಜಾಲತಾಣದ ಹೊಸಮನೆ ಚೇತನ್ ದಾಸ್ ಹಾಗೂ ಇನ್ನಿತರರಿದ್ದರು.
ನೆರವು ನೀಡುವ ದಾನಿಗಳು ಈ ಸಂಖ್ಯೆಯನ್ನು ಸಂಪರ್ಕಿಸಿ.
ಹೆಸರು:- ಶರತ್
ಖಾತೆ ಸಂಖ್ಯೆ :- ಕೆನರಾ ಬ್ಯಾಂಕ್, 0465101018162
ಐ.ಎಫ್.ಎಸ್ಸಿ ಕೋಡ್ .ಸಿ.ಎನ್.ಆರ್.ಬಿ. 0000465
Google pay number:9964294970
SHARATH KUMAR K M
S/O MANJUNATHA
MARIGUDDA ROAD
Hosanagara tluk.
SHIVAMOGA DISt.